ಉತ್ತು, ಕಿತ್ತು ಬತ್ತಿಸಿದ ಮೇಲಾ ನೆಲ ಬರಿ ಮಣ್ಣೆಂದು
ಗತ್ತಿನೊಳು ಗೊಬ್ಬರ ಕೊಟ್ಟು ತುತ್ತಿನ ಬಿತ್ತಿಟ್ಟೊಡದ
ನೊತ್ತಿ ಬೆಳೆವಾ ನೂರೊಂದು ಕಳೆಗಳನು ನೋಡಾ
ಗತ್ತಿನ ಕತ್ತ ನಿಳುಹಿದೊಡಲ್ಲಿ ಕಾಂಬುದು
ತುತ್ತಿಗಪ್ಪುದು, ಸುಸ್ತಿಗಪ್ಪುದು ಆ ಕಳೆಯೊಳಗೆ – ವಿಜ್ಞಾನೇಶ್ವರಾ
*****