ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ?
ಚಿತ್ತ ಸುಯಿಧಾನಿಯಾದವಂಗೆ
ತತ್ವವ ಕಂಡಿಹೆನೆಂಬುದುಂಟೆ?
ತಾನು ತಾನಾದವಂಗೆ ಮಾನವರ ಹಂಗುಂಟೆ?
ಭಾವ ಬಯಲಾದವಂಗೆ ಬಯಕೆ ಎಂಬುದುಂಟೆ?
ಗೊತ್ತ ಕಂಡವಂಗೆ ಅತ್ತಿತ್ತ ಅರಸಲುಂಟೆ?
ಇಂತು ನಿಶ್ಚಿಂತವಾಗಿ ನಿಜವ ನಂಬಿದ
ಶರಣರ ಎನಗೊಮ್ಮೆ ತೋರಿಸಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****