ಒಂದು ಹುತ್ತಕ್ಕೆ ಒಂಬತ್ತು ಬಾಗಿಲು ಇರುವದು.
ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯು ನೋಡುತಿಪ್ಪುದು.
ಒಂಬತ್ತು ಬಾಗಿಲಿಗೆ ಕದವನಿಕ್ಕಿ ಒಂದು ಬಾಗಿಲ
ಅಗುಳಿ ದಾರವಂದವನಿಕ್ಕಿ ಬಲಿಯಲು
ತಿರುಗುವುದಕ್ಕೆ ತಾವ ಕಾಣದೆ,
ಇರುವುದಕ್ಕೆ ಇಂಬ ಕಾಣದೆ,
ನಿಲುವುದಕ್ಕೆ ಎಡೆಯ ಕಾಣದೆ,
ಉರಿ ಎದ್ದು ಊರ್ಧ್ವಕ್ಕೇರಲು, ಶರಧಿ ಬತ್ತಿತ್ತು.
ಅಲ್ಲಿದ್ದ ಖಗಮೃಗವೆಲ್ಲ ದಹನವಾದವು.
ಸರೋವರವೆಲ್ಲ ಉರಿದು ಹೋದವು.
ಕತ್ತಲೆ ಹರಿಯಿತ್ತು.
ಮುಂದೆ ದಿಟ್ಟಿಸಿ ನೋಡುವನ್ನಕ್ಕ,
ಇಟ್ಟೆಡೆಯ ಬಾಗಿಲು ಸಿಕ್ಕಿತ್ತು.
ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡಕರಿಸಿ,
ಪಶ್ಚಿಮದ ಕದವ ತೆಗೆದು,
ಬಟ್ಟ ಬಯಲಲ್ಲಿ ನಿಂದು,
ನಾನೆತ್ತ ಹೋದೆನೆಂದರಿಯೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
Latest posts by ಲಿಂಗಮ್ಮ (see all)
- ಲಿಂಗಮ್ಮನ ವಚನಗಳು – ೧೦೧ - February 14, 2017
- ಲಿಂಗಮ್ಮನ ವಚನಗಳು – ೧೦೦ - February 7, 2017
- ಲಿಂಗಮ್ಮನ ವಚನಗಳು – ೯೯ - January 31, 2017