Home / ಕಥೆ / ಅನುವಾದ

ಅನುವಾದ

ಅನುವಾದಿತ-ಕತೆಗಳು

ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು...

ಮೂಲ: ಆರ್ ಕೆ ನಾರಾಯಣ್ ಡೂಡುವಿಗೆ ಎಂಟುವರ್ಷ. ಅವನಿಗೆ ಹಣ ಬೇಕಾಗಿತ್ತು. ಅವನಿಗೆ ಇನ್ನೂ ಎಂಟುವರ್ಷವಾದುದರಿಂದ ಯಾರೂ ಅವನ ಆರ್ಥಿಕ ಸಮಸ್ಯೆಗೆ ಇನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. (ಅವನಿಗೆ ನೂರಾರು ಕಾರಣಗಳಿಗಾಗಿ ಹಣ ಬೇಕಾಗಿತ್ತು : ಬರ...

ದಕ್ಷಿಣದಲ್ಲಿರುವ ಎಲ್ಲಾ ಬೆಟ್ಟಗಳಲ್ಲಿ ಲುವೀನಾ ಬೆಟ್ಟವೇ ತೀರ ಎತ್ತರ, ಮತ್ತೆ ಅದರ ತುಂಬ ಕಲ್ಲು ಬಂಡೆ. ಸುಣ್ಣ ಮಾಡುತ್ತಾರಲ್ಲ, ಅಂಥ ಕಲ್ಲು ಜಾಸ್ತಿ ಇವೆ. ಲುವೀನಾದಲ್ಲಿ ಯಾರೂ ಸುಣ್ಣ ಅರೆಯುವುದಿಲ್ಲ. ಅಥವಾ ಆ ಕಲ್ಲನ್ನ ಬೇರೆ ರೀತಿ ಉಪಯೋಗಿಸುವು...

ಮೂಲ: ವಿ ಎಸ್ ಖಾಂಡೇಕರ ಆ ಎರಡು ಚಿತ್ರಗಳಲ್ಲಿ ಹೆಚ್ಚು ಆಕರ್ಷಕವಾದದ್ದು ಯಾವದು ಎಂಬುದನ್ನು ಹೇಳಲಿಕ್ಕೆ ಎಷ್ಟೋ ರಸಿಕರಿಗೆ ಕೂಡ ಆಗಲಿಲ್ಲ. ಅಂದ ಬಳಿಕ ಸಾಮಾನ್ಯ ಪ್ರೇಕ್ಷಕಗಣದ ಗತಿಯೇನು? ಒಬ್ಬ ರಸಿಕ ತರುಣನಂತೂ ಆ ಎರಡೂ ಚಿತ್ರಗಳನ್ನು ನೋಡಿ ಉದ್ಘಾ...

ತಮಿಳು ಮೂಲ: ಕೊನಷ್ಟೈ “ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ”ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ. ಲೇಡೀಸ್ ಕ್ಲಬ್‌ನ (ಮಹಿಳಾ ಸಮಾಜ) ಉಪವನದ...

ನನ್ನ ಕೊಲ್ಲಬೇಡ ಅಂತ ಹೇಳು. ಜಸ್ಟಿನೋ! ಹೋಗಿ ಹೇಳು ಅವರಿಗೆ, ದಮ್ಮಯ್ಯ! ಹೇಳು ಅವರಿಗೆ. ಪ್ಲೀಸ್, ಹೇಳು.” ‘ನನ್ನ ಕೈಯಲ್ಲಿ ಆಗಲ್ಲ. ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ ‘ಕೇಳುವ ಹಾಗೆ ಮಾಡು. ಬುದ್ಧಿ ಉಪಯೋಗಿಸು. ನನ್ನ ...

ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳು...

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್...

ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟ...

ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....