
ನಾನು ಕಲ್ಲಾದರೆ ಕಲ್ಲು ಹೂವಾಗುತ್ತದೆ ಹೂವು? ಕೊಳ. ನಾನು ಕೊಳವಾದರೆ ಕೊಳ ಹೂವಾಗುತ್ತದೆ. ಹೂವು? ಕಲ್ಲು ***** ಮೂಲ: ಸೋ ಚೋಂಗ್ ಯೂ...
ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ. ರಂಗಮಂಚದ ಪುನರುಜ್ಜೀವನ. ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು, ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು, ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು, ಪ್ರೇಕ್ಷಕರಿಗೆ ಮುಖ ತೋರಿಸ...
ಕವಿಯೆಂದರೆ ಪದ್ಯಗಳನ್ನು ಬರೆಯುವವನು, ಪದ್ಯಗಳನ್ನು ಬರೆಯದವನು. ಬಂಧನವನ್ನು ಮುರಿದವನು, ತನ್ನನ್ನೆ ಬಂಧಿಸಿಕೊಂಡವನು. ನಂಬುವವನು, ನಂಬಲಾರದವನು. ಸುಳ್ಳು ಹೇಳಿದವನು, ಸುಳ್ಳಿಗೆ ಗುರಿಯಾದವನು. ಜಾರ-ಬಲ್ಲವನು, ಮತ್ತೆ ಮತ್ತೆ ಎದ್ದು ನಿಲ್ಲಬಲ್ಲವನು...
೧ ನಡು ಹಗಲಲ್ಲಿ ಹಚ್ಚಿಟ್ಟ ದೀಪ- ಬೆಳಕಿನಲ್ಲಿ ಕಳೆದುಹೋದ ಬೆಳಕು. ಬೆಳಕಿನ ಸಿದ್ಧಾಂತ ಮುರಿದು ಬಿತ್ತು : ದೊಡ್ಡ ಬೆಳಕು ಹಿಮ್ಮೆಟ್ಟಿದೆ ಹಣ್ಣಿನಿಂದ ಮರ ಬಿದ್ದ ಹಾಗೆ. ೨ ಗಂಟೆಯ ತುಂಬ ಗಾಳಿ, ಬಾರಿಸದಿದ್ದರೂ. ಹಕ್ಕಿಯ ಮೈಯ ತುಂಬ ಹಾರಾಟ, ನಿಶ್ಚಲವ...
ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ-ಆಗಲ್ಲ. ಹೊರಟು ಹೋಗಬೇಕು ಅಂದುಕೊಳ್ಳುತ್ತೇನೆ-ದಾರಿ ಸಿಗಲ್ಲ. ನನ್ನ ಕಾಲಿಗೆ ರೆಕ್ಕೆ ಇಲ್ಲ- ಆದರೆ ತಲೆಯ ತುಂಬ ಬಿಳಿಯ ಕೂದಲಿದೆ. ಸುಮ್ಮನೆ ಕುಳಿತು ಎಲೆ ಉದುರುತ್ತಿರುವುದು ನೋಡುತ್ತೇನೆ, ಇಲ್ಲವೆ ಗೋಪುರ ಹತ್...
ಬಾವಿಯ ಪಕ್ಕದ ಮರದಲ್ಲಿ ಹಣ್ಣಾದ ಎಲೆಗಳು ಆಡುತ್ತಿದ್ದವು. ಹೆಂಗಸರು ಬಟ್ಟೆ ಒಗೆಯುವ ಶಬ್ದದಲ್ಲಿ ಮಾಗಿ ಅರಳುತ್ತಿತ್ತು, ಹಾಡುತ್ತಿತ್ತು. ಮಾಳಿಗೆಯ ಮೇಲೆ ಒಬ್ಬನೇ ಮಲಗಿ ನಿದ್ದೆ ಹೋದೆ. ಎಚ್ಚರ ಆದಾಗ ನನ್ನ ಪಕ್ಕದ ಅರ್ಧ ಹಾಸಿಗೆಯಲ್ಲಿ ಬರೀ ಬೆಳದಿಂಗ...
ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ. ***** ಚೀನೀ ಮೂಲ: ವಾಂಗ್-ವೀ...
ನಾಲೆಯ ಪಕ್ಕದ ನಮ್ಮ ಮನೆಗೆ ಬೆಳಕು ಬೆಟ್ಟ ಇಳಿದು ಬರುತ್ತಿದೆ. ಬೆಟ್ಟದ ಮೇಲಿನ ಗವಿಗಳ ಮೇಲೆ ಬಿಳಿಯ ಮೋಡಗಳು ಡೇರೆ ಹಾಕಿವೆ. ಕಾಗೆಗಳು ಕೋಗಿಲೆಗಳು ಬಿಟ್ಟುಹೋದ ನಿಶ್ಯಬ್ದದಲ್ಲಿ, ಅಸಹಾಯ ಜನಕ್ಕೆ ಯುದ್ಧದ ಭಯದಿಂದ ನಿದ್ದೆ ಬರದಿರುವಾಗ, ತೋಳಗಳು ಊಳಿ...














