ನಿದ್ರೆಯ ಸ್ಪಟಿಕ ಸ್ಪಷ್ಟ ರೂಪಗಳೇ
ಭಾಷೆಯ ನೆರಳಲ್ಲಿ ತಳೆದ ಆಕಾರಗಳೇ
ನನ್ನದೇ ರಕ್ತ ಹಂಚಿಕೊಂಡ ಜೀವಿಗಳೇ
ನನ್ನ ಪ್ರಜ್ಞೆಯ ನರ ನಾಡಿಗಳ
ಬಂದರು ಮಾಡಿಕೊಂಡ ಬಿಂಬ ರೇಖೆಗಳೇ
ನನ್ನ ದುಃಖ ನನ್ನನ್ನು ತೊರೆದು
ನಿಮ್ಮನ್ನು ತುಂಬಿ ಆವರಿಸುತ್ತಿರುವುದು
ಕಾಣುತಿದ್ದೇನೆ.
*****
ಮೂಲ: ಪಾಲ್ ಕ್ಲೀನ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)
- ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ - January 22, 2021
- ಕೋಳಿ - January 15, 2021
- ಸಾವು ಬಂದಾಗ - January 8, 2021