ದಿನಗಳು ಇರುವುದು ಯಾಕೆ?
ನಾವು ಬದುಕಿರುವುದೆ ದಿನದಲ್ಲಿ.
ಬರುತ್ತವೆ, ಬಂದು ಎಬ್ಬಿಸುತ್ತವೆ,
ದಿನವೂ ಬದುಕಿರುವಷ್ಟು ದಿನವೂ
ನಾವು ಸಂತೋಷವಾಗಿರುವುದಕ್ಕೆ.
ದಿನಗಳೆ ಇರದಿದ್ದರೆ ಜೀವ ಇರುವುದೆಲ್ಲಿ?
ಆಹಾ, ಈ ಪ್ರಶ್ನೆ ಎದ್ದತಕ್ಷಣ
ಉತ್ತರ ಹೇಳಲು ಡಾಕ್ಟರು,
ಸಂತರು ಸ್ವಾಮಿಗಳು
ಓಡೋಡಿ ಬರುತ್ತಾನೆ.
*****
ಮೂಲ: ಫಿಲಿಪ್ ಲಾರ್‍ಕಿನ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)
- ಕೋಳಿ - January 15, 2021
- ಸಾವು ಬಂದಾಗ - January 8, 2021
- ಮುಂಜಾವದಲ್ಲಿ - January 1, 2021