Home / ಕವನ / ಅನುವಾದ

ಅನುವಾದ

ಅನುವಾದಿತ ಕವನಗಳು

ಬಟ್ಟೆ ಬದಲಾಯಿಸುತ್ತಾ ಪ್ರಾಚೀನ ವೃಕ್ಷಗಳು ಎತ್ತಿಹಿಡಿದ ಉಡುಪನ್ನು ನಿಧಾನವಾಗಿ ಧರಿಸುವುದು ಸಂಜೆ. ನೋಡು: ನೀನು ನಿಂತಲ್ಲಿಂದ ಬಯಲು ಇಬ್ಬಾಗವಾಗಿದೆ, ಕಣ್ಮರೆಯಾಗುವವರೆಗೂ ಒಂದು ಕೆಳಗೆ ಸಾಗಿದೆ, ಇನ್ನೊಂದು ಮುಗಿಲಿಗೇರಿದೆ. ನೀನು ಎಲ್ಲಿಗೂ ಪೂರ್ತ...

ಕಾದಿದ್ದೀಯಾ ನೀನು ಯಾರಾದರೂ ಬಂದಾರೆಂದು, ಕಲ್ಲೊಣಗಣ ಕಿಚ್ಚು ಉರಿಸುವವರು, ಅಸಾಮಾನ್ಯರು, ಶಿಲೆಗೆ ಜೀವ ತರುವ ಅಪರೂಪದವರು, ನಿನ್ನೊಳಗಿನ ಆಳ ಮುಳುಗಿ ತೋರುವವರು ಬಂದಾರೆಂದು. ಸಂಜೆಯ ಇಳಿ ಬಿಸಿಲು ದಪ್ಪಹೊತ್ತಗೆಗಳ ಚಿನ್ನದಕ್ಷರಗಳಿಗೆ ಹೊಳಪು ತಂದಿದ...

ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ. ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ, ನನಗೋ ಅವು ಬಹು ದೂರದ ಸತ್ಯಗಳು. ಹೊಸ ಜಗತ್ತು ನನಗೆ ಕಾಣುತ್ತಿದೆ, ಬಹುಶಃ ಚಂದ್...

ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು. ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ. ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ. ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು. ಗುಟ್ಟು ಬಿಟ್ಟುಕೊಟ್ಟಿ...

ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ...

ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು ಕತ್ತಲ ವೇಳೆಯಲ...

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’ ‘ಯಾರು ನೀನು ಮರಿಯಾ?’ ‘ನಾನು ರಾಣಿ | ನಾನು ರಾಣಿ | ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’ ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’ ‘ನೀನ ಯಾರು ಮರಿಯಾ?’ ‘ಅಪ್ಪ ಗೊತ...

ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು ವ್ಯರ್ಥ. ಮೊದಲು ...

ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದ...

ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ...

1...2627282930...33

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...