
ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ...
ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ ಬೊಡ್ಡು ನಾಲಿಗೆಯನ್ನು ಚುರುಕುಗೊಳಿಸುವ ಹಾಗೆ, ಮೈಯ ರಕ್ಷಿಸಲು ಗೊತ್ತಿರದ ಬೇನೆಗಳಿಂದ ಅತಿ ಎನಿಸುವಷ್ಟು ಔಷಧ ತಿನ್ನಿಸುವ ಹಾಗೆ, ನಿನ್ನ ಗುಣ ಪ್ರೀತಿ ಮಾಧುರ್ಯ ಯಥೇಷ್ಟ ಸವಿದು ಚುರುಕು ಸಂಬಾರಗಳ ಕೆಣಕನ್ನ...
ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರ...
ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ; ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ? ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ ಬಂದುದಷ್ಟೇ ನನ್ನ ...
ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ ಕೋಡಂಗಿ ವೇಷದಲಿ ಕುಣಿದೆ ಒಳಗನ್ನಿರಿದೆ, ಹೊನ್ನನೆ ಹರಾಜು ಹಾಕಿದೆ ಹತ್ತು ಪೈಸಕ್ಕೆ, ಹಲುಬಿ ಹೊಸ ಸ್ನೇಹಕ್ಕೆ ಹಳೆಯದರ ಮುಖ ಮುರಿದೆ. ಸತ್ಯಕ್ಕೆ ಸೊಪ್ಪು ಹಾಕದೆ ಸೊಟ್ಟ ನಡೆದದ್ದು ನುಡಿದದ್ದು ಸುಳ್ಳಲ್...
ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ ಸಿರಿ ಚೆನ್ನಿಗರ ಪ್ರಶಂಸೆಗೆ ಕಣ್ಣು ಹರಿದಾಗ, ಮಡಿದ ನಾರಿಯರ, ಮನಸೆಳೆವ ವೀರರ ಚೆಲುವ ಹೊಗಳಿ ಹಳೆಕವಿತೆ ಥಳಥಳಿಸುವುದ ಕಂಡಾಗ, ತುಟಿ ಹುಬ್ಬು ಕಣ್ಣು ನಿಡಿದೋಳು ಅಡಿಗಳ ಸಿರಿಯ ಪರಿಪರಿಯ ಲಯವ ಹಿಡಿದಿಟ್ಟ ಹಳೆ ಕ...
ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ ಮೊದಲು ಕಂಡಷ್ಟೆ ಸವಿಯಾಗಿರುವೆ ಇಂದಿಗೂ. ಮೂರು ಚಳಿಗಾಲಗಳು ಮೂರು ಮಧುಮಾಸಗಳ ಹೆಮ್ಮೆ ಮುಂದಿವೆ ಸುರಿದು ಮರದೆಲ್ಲ ಎಲೆಗಳೂ; ಹಾಗೇ ಮೂರು ವಸಂತ ಹಳದಿ ಬಣ್ಣಕೆ ಬೆಳೆದು ಚೈತ್ರ ಪರಿಮಳವೆಲ್ಲ ಗ್ರೀಷ್ಮ ಧಗೆಯಲಿ...
ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ ಸತ್ಯ ಸೌಂದರ್ಯಗಳ ಉಪೇಕ್ಷೆ ಮಾಡಿದ್ದಕ್ಕೆ; ಸೌಂದರ್ಯ ಸತ್ಯಕ್ಕೆ ನನ್ನೊಲವೆ ಆಧಾರ, ನಿನಗು ಸಹ, ಅಷ್ಟೊಂದು ಘನತೆ ನಿನಗೆ ಅದಕ್ಕೇ. ಉತ್ತರಿಸು ದೇವಿ, ಈ ಮಾತು ಒಪ್ಪುವೆ ತಾನೆ? ಸತ್ಯಕ್ಕೆ ಬಣ್ಣವೇತಕ್ಕೆ...
ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ ನಿನ್ನ ಬಲಸತ್ವಗಳ ಉದ್ದೀಪಿಸುವ ಮೂಲ? ಬೀಳುಕವಿತೆಗೆ ನೀಡಿ ರಸೋದ್ದೀಪನವನ್ನ, ಸಣ್ಣದಕೆ ಬಣ್ಣಗಳ ತೀಡಿ ಬಾರಿಸಿ ತಾಳ? ಮರಳಿ ಬಾ ಮರುಳೆ, ಮೈಗಳ್ಳತನದಲಿ ಕಳೆದ ಕಾಲಕ್ಕೆ ಸಮನಾಗಿ ಮಧುರ ಕವಿತೆಯ ನುಡಿಸು, ...
ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ ತ...














