
ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ. ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ. ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ ಎಲ್ಲಿ ಬಿಡುಗಡೆ? ನೀನ...
ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ, ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ, ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ. ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ ಇನ್ನೊಂದು ಆತ್ಮವನೂ ಬಲವಾಗಿ...
ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ ಕ್ರೂರರಾಗುವರು, ನೀನೂ ಕೂಡ ಅಂತೆಯೇ ; ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ. ಮಣಿಸಿ ಕುಣಿಸುವ ಮಾಯೆ ನಿನ್ನ ಚೆಲುವಿಗೆ ಇಲ್ಲ ಎಂದು ಕೆಲವರು ನಿನ್ನ...
ನನ್ನವಳ ಕಣ್ಣು ರವಿಯಂತೆ ಖಂಡಿತ ಇಲ್ಲ. ಅವಳ ತುಟಿ ಕೂಡ ಹವಳದ ಹಾಗೆ ಕೆಂಪಲ್ಲ ; ಮೊಲೆ ಬಣ್ಣ ತುಸು ಕಂದು, ಹಿಮದಂಥ ಬಿಳುಪಲ್ಲ, ಕೂದಲೋ ತಂತಿ ಥರ, ತಲೆಯೊ ಕರಿ ತಂತಿ ಹೊಲ. ರೇಷ್ಮೆ ನುಣುಪಿನ ಕೆಂಪು ಬಿಳಿ ಗುಲಾಬಿಯ ಬಲ್ಲೆ, ಅದನು ನಾ ಕಂಡಿಲ್ಲ ನನ್ನ...
ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ, ಘಾತಕ ಮೃಗೀಯ ವಂಚಕ ಹೇಯ ಎನಿಸುವುದು, ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ; ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ ಪೆಚ್ಚಾಗಿ ಮತ್...
ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ, ಏನದರ ಭಾಗ್ಯವೇ ಚಿನ್ನ! ಎರಡೂ ಬದಿಗೆ ನೀ ತೂಗಿ ಮೈಯ, ಸರಿಸಲು ಬೆರಳು ಸಾಲನ್ನ ಸಂಭ್ರಾಂತಿ ನನಗೆ ಸುರಿಯುವ ಜೇನುದನಿಮಳೆಗೆ. ಎತ್ತಿದೆಯೊ ಬೆರಳ, ಚಂಗನೆ ನೆಗೆದು ಅಂಗೈಯ ಮುತ್ತಿಡುವ ಸ್ವರದ ಕೀ ಮನೆಗಳ ಅದೃಷ...
ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ ಗಣಿಸಿದರು ಚೆಲುವೆಂಬ ಹೆಸರು ಎಲ್ಲಿತ್ತದಕೆ ? ಏರುತಿದೆ ಈಗ ಅದು ಸೌಂದರ್ಯಪಟ್ಟಕ್ಕೆ ಸಿಕ್ಕಿಸಿದೆ ಹುಸಿ ಹೊಳೆವ ಚೆಲುವನಪವಾದಕ್ಕೆ. ಕಲೆಯ ಎರವಲು ಮುಖವ ತೊಡಿಸಿ ಕಳಪೆಗಳನ್ನು ಕಮನೀಯ ಎನ್ನಿಸುವ ಕೈವಾಡ ಎ...
ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ, ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ. ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು. ಎಲ್ಲ ಗೊಂದಲವನು ನಿಯಂತ್ರಿಸಬ...
ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ- ಯೆದುರು ಗೌರವ ಮೆರೆದರದು ನನಗೆ ಲಾಭವೇ? ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ ಹಾಕುವುದು ವ್ಯರ್ಥ ಎಂದೇನು ನಾ ಅರಿಯೆನೆ ? ಸರಳನಡೆ ನೀಗಿ, ಆಡಂಬರಕೆ ಬಲಿ ಹೋಗಿ, ಅಂತಸ್ತು ಠೀವಿ ಸಭೆಮನ್ನಣೆಗೆ ಸಿ...
ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ ಕಾಲಕಾಲದ ಪ್ರೀತಿದ್ವೇಷಕ್ಕೆ ಪಕ್ಕಾಗಿ, ಕಸದಲ್ಲಿ ಕಸವೊ, ಹೂರಾಶಿಯಲಿ ಬಿಡಿಹೂವೊ ಆಗಿ ಅಳುತಿತ್ತು ತಬ್ಬಲಿ ಭ್ರಷ್ಟಹುಟ್ಟಾಗಿ. ಅದರ ಅಡಿಗಿಲ್ಲ ಆಕಸ್ಮಿಕದ ತಳಪಾಯ, ಆಡಂಬರದ ಮಂದಹಾಸಕದು ಬಲಿಯಲ್ಲ; ಕಾಲಕಾಲಕ್ಕೆ...













