
ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ, ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ? ಈ ಮಹಲೊ ನಾಲ್ಕು ದಿನದಲ್ಲೆ ಕುಸಿಯುವ ಮಾಟ, ಇಂಥ ಬಲು ತುಟ್ಟಿ ಸಿಂಗಾರ ಯಾತಕೆ ಇದ...
ಹಿತ ಅಹಿತ ಹೀಗೆ ನನಗುಂಟು ಒಲವೆರಡು, ಪ್ರೇರಿಸುವುವೆರಡೂ ಮರುಳಂತೆ ಈಗಲೂ ; ಎರಡರಲಿ ಒಂದು ದೇವತೆ, ಚೆಂದ, ಗಂಡು, ಮತ್ತೊಂದು ಹೆಣ್ಣು ಕೆಟ್ಟುದು, ಬಣ್ಣ ಕಂದು. ಕೇಡಿ ಹೆಣ್ಣೋ ನನ್ನ ನರಕಕೆಳೆಯಲು ಬಯಸಿ ನನ್ನ ಬದಿಯಿರುವ ದೇವತೆಯನ್ನು ಸೆಳೆಯುವುದು, ...
ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ- ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ ಕೂಗಿ ಕರೆಯುತ್ತ ಕಣ್ಣೆದುರೆ ನೆ...
ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು; ಆದರವು ಒದ್ದುದನು ಈ ಹೃದಯ ಒಲಿಯುವುದು, ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ, ನನ್ನ ಕಿವಿಗಳಿಗೆ ಹಿತವೆನ್ನಿಸದು ನಿನ್ನ...
ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ, ತುಟಿ ಬಿಗಿಹಿಡಿದ ನನ್ನ ತಾಳ್ಮೆಯ ತಿರಸ್ಕರಿಸಿ ಸಿಡಿಸದಿರು, ಇಲ್ಲವೇ ವ್ಯಥೆ ನನ್ನ ನಾಲಿಗೆಗೆ ನುಡಿಯ ಕೊಡುವುದು; ಅವೋ ನಿನ್ನ ಕರುಣೆಯ ಬಯಸಿ ನಾ ಪಡುವ ಯಾತನೆಯನೆಲ್ಲ ಹೊರಹಾಕುವುವು. ನನ್ನ ಈ ತಿಳಿ...
ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ ವಿವರಿಸಲು ಕೇಳದಿರು, ಕಣ್ಣಿಂದ ಇರಿಯದಿರು; ಬಳಸು ಕಟುಮಾತನ್ನು, ನೇರ ಶಕ್ತಿಗಳನ್ನು; ಬೇಡ ನಯವಂಚನೆ, ಮರೆಮಾಚಿ ಕೊಲ್ಲದಿರು, ಬೇರೆ ಕಡೆ ಕೊಟ್ಟೆ ಎದೆಯನ್ನು ಎಂದು ಮುಖಕ್ಕೇ ಬಾಯ್ಬಿಟ್ಟು ಹೇಳು. ಅದು ಬಿಟ್ಟು ನ...
ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ ಆಣೆಯಿಡುವಳು, ಸುಳ್ಳು ! ಆದರೂ ನಂಬುವೆನು ; ಲೋಕ ಬೇಡುವ ಸುಳ್ಳು ಸೂಕ್ಷ್ಮ ಅರಿಯದ ಬೆಳ್ಳ, ಕಲಿಯದವ ಎಂದು ತಿಳಿಯಲಿ ಎಂದು ನಟಿಸುವೆನು. ಪ್ರಾಯ ಆರಿರುವೆ, ಅವಳದನು ಅರಿತಿದ್ದರೂ ತರುಣನೆಂದೇ ನನ್ನ ತಿಳಿಯಲೆಂಬ...
ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ. ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ. ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ ಎಲ್ಲಿ ಬಿಡುಗಡೆ? ನೀನ...
ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ, ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ, ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ. ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ ಇನ್ನೊಂದು ಆತ್ಮವನೂ ಬಲವಾಗಿ...














