ಓ ಕ್ರೂರಿ ನಿನ್ನ ನಾನೊಲಿದಿಲ್ಲವೇ ಹೇಗೆ ?
ದುಷ್ಟಳೇ ನಿನಗಾಗಿ ನನ್ನನ್ನೆ ಮರೆತಾಗ
ನಿನ್ನ ಕುರಿತೇ ನಾನು ಯೋಚಿಸುವುದಿಲ್ಲವೇ ?
ನಿನ್ನ ಹಗೆ ಯಾರನ್ನು ಗೆಳೆಯ ಎಂದಿರುವೆನೆ ?
ನಿನಗಾಗದವರನ್ನು ಎಂದು ಓಲೈಸಿರುವೆ ?
ನೀನು ಕೋಪಿಸಿದಾಗ ನನ್ನ ಮೇಲೇ ನಾನೆ
ಮುನಿದು ಶಿಕ್ಷಿಸಿಕೊಂಡು ನೊಂದು ತಪಿಸಿಲ್ಲವೇ “?
ನಿನ್ನ ಕಣ್ಣಿನ ಸನ್ನೆಗಾಳಾಗಿ ನನ್ನೆಲ್ಲ
ಉತ್ತಮಿಕೆ ನಿನ್ನ ದೋಷಕ್ಕೆ ನಮಿಸಿಲ್ಲವೇ ?
ನಿನ್ನ ಸೇವೆಯ ಒಲ್ಲದಂಥ ಗುಣ ನನ್ನಲ್ಲಿ
ಇದ್ದಲ್ಲಿ ಎಂದು ನಾನದನು ಗೌರವಿಸಿರುವೆ ?
ಇರಲಿ ದ್ವೇಷಿಸು ಒಲವೆ, ಬಲ್ಲೆ ನಿನ್ನೊಳಗನ್ನು
ನಾ ಕುರುಡ, ನೀನೊಲಿವೆ ನಿನ್ನ ಅರಿತವರನ್ನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 149
Canst thou O cruel, say i love thee not
















