
ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ; ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ. ಶಾಂತಿ ಸಿಕ್ಕು...
ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ ತಿರುತಿರುಗಿ ಕೇಳುವೆವು – ನೀ ಬರಿದೆ ನಗುತಿರುವೆ, ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ. ಕಡಲಲ್ಲಿ ಅಡಿಯೂರಿ ಸ್ವರ್ಗವನೆ ಮನೆ ಸಾರಿ, ಚಿಕ್ಕೆಗಳಿಗಷ್...
ನನ್ನ ಷೇಕ್ಸ್ಪಿಯರನ ಪವಿತ್ರ ಅಸ್ಥಿಯನಿಡಲು ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ? ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ ಕೀರ್ತಿಗೂ, ನಿನಗಂಥ ಕಳಪ...
ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು ಮುರಿದೆ ನಿಜ, ನೀನೊ ಮುರಿದಿರುವೆ ಎರಡೆರಡು ಸಲ; ಒಮ್ಮೆ ಹಾಸಿಗೆಯಲ್ಲಿ ಕೊಟ್ಟ ಭರವಸೆಯನ್ನು, ಮತ್ತೆ ಕೂಡಿಕೆಯಾಗಿ ಕೊಟ್ಟ ಮಾತನ್ನು ಸಹ. ಯಾಕೆ ದೂರಲಿ ಹೇಳು ಮಾತ ಮುರಿದವಳೆಂದು, ನಾನೆ ಹಿರಿಯಪರಾಧಿ, ಮು...
ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು ಕಲಿಸಿದರು ನಿನಗೀ...
ಓ ಕ್ರೂರಿ ನಿನ್ನ ನಾನೊಲಿದಿಲ್ಲವೇ ಹೇಗೆ ? ದುಷ್ಟಳೇ ನಿನಗಾಗಿ ನನ್ನನ್ನೆ ಮರೆತಾಗ ನಿನ್ನ ಕುರಿತೇ ನಾನು ಯೋಚಿಸುವುದಿಲ್ಲವೇ ? ನಿನ್ನ ಹಗೆ ಯಾರನ್ನು ಗೆಳೆಯ ಎಂದಿರುವೆನೆ ? ನಿನಗಾಗದವರನ್ನು ಎಂದು ಓಲೈಸಿರುವೆ ? ನೀನು ಕೋಪಿಸಿದಾಗ ನನ್ನ ಮೇಲೇ ನಾನ...
ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್ಥ? ಅರ್...
ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ ಪೋಷಿಸುವ ರೀತಿ ನೀತಿಯನೆ ಅದು ವರಿಸುವುದು; ರೋಗಿನಾಲಗೆಯ ಸಲ್ಲದ ರುಚಿಗಳನು ತಣಿಸಿ ಖಾಯಿಲೆಯ ಉಳಿಸುವ ವಿಧಾನವನೆ ಬಳಸುವುದು ಗೊತ್ತುಮಾಡಿದ ಪಥ್ಯ ನಡೆಸದ್ದಕ್ಕೆ ಮುನಿದು ವಿವೇಕ, ಪ್ರೀತಿಯ ವೈದ್ಯ, ನನ್...
(ಲಾಹೋರಿನ ಡಾ ಶೇಖ್ ಮಹಮ್ಮದ್ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ ಹೃದ...














