ಹೋಮರ್ ಹಾಡಿದ ಹೆಣ್ಣು

ನನ್ನ ಹರೆಯದ ಆ ದಿನಗಳಲ್ಲಿ
ಅವಳತ್ತ ಗಂಡೊಂದು ಸುಳಿದರೆ,
ಪ್ರೀತಿಸುತ್ತಿದ್ದಾನೆ ಅನ್ನಿಸಿ
ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ.
ನೋಡಿಯೂ ಅವಳತ್ತ ತಿರುಗದೆ
ದಾಟಿ ಹೋದರೆ ಅವನು ‘ಅಯ್ಯೋ
ಘೋರ ಅಪರಾಧ’ ಎಂದೆನ್ನಿಸಿ
ಒಳಗೊಳಗೆ ಒದ್ದಾಡುತ್ತಿದ್ದೆ.

ಆ ಮುಂದೆ ನಾ ಬರೆದೆ ಮುಡಿದೆ,
ಈಗ ಬಿಳಿಕೂದಲಾಗಿರುವೆ,
ಕನಸುವೆನು ಆಗೀಗ ಹೀಗೆ :
ಆ ಬಿಂಬ ಮಿಡಿದ ಚಿಂತನೆಯ
ಎತ್ತಿರುವೆ ಎಂಥ ನೆಲೆಗೆಂದರೆ
ಬರಲಿರುವ ಕಾಲ ಹೇಳೀತು,
‘ಆ ಕಾಯ ಎಂಥದೆಂದೀತ
ನೆರಳಿಸಿದ ಕನ್ನಡಿಯ ಒಳಗೆ’.

ಪ್ರಾಯದವನಿದ್ದಾಗ ನಾನು
ಅವಳಿಗೂ ಕೂಡ ಬಿಸಿರಕ್ತ
ಮುಗಿಲಲ್ಲಿ ನಡೆದಳೆನ್ನಿಸುವ
ಹೆಮ್ಮೆ ಸುಮ್ಮಾನಗಳ ಚಿತ್ರ,
ಹೋಮರ್ ಹಾಡಿದ ಹೆಣ್ಣು ಇವಳು- ಎಂದೇ
ಅವಳ ಧ್ಯಾನದಲ್ಲಾದ ಬಾಳು ಬರೆಹ
ಧೀರೋದಾತ್ತವಾದ ಸ್ವಪ್ನದಂತೆ
ತೋರುವುವು ಹೊರಳಿ ಕಂಡಾಗ
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಹೋಮರ್ ಕ್ರಿ.ಪೂ. ೯೦೦ರಲ್ಲಿ ಇದ್ದನೆನ್ನಲಾದ ಗ್ರೀಕರ ಆದಿಕವಿ ಮತ್ತು ಮಹಾಕವಿ. ಇಲಿಯಡ್ ಮತ್ತು ಒಡಿಸ್ಸಿ ಎಂಬ ಮಹಾಕಾವ್ಯಗಳನ್ನು ಬರೆದಿದ್ದಾನೆ. ಅವನ ಇಲಿಯಡ್ ಕಾವ್ಯದ ನಾಯಕಿ ಹೆಲೆನ್ ಅಪೂರ್‍ವ ಚೆಲುವೆ. ಇಲ್ಲಿ ಮಾಡ್‌ಗಾನಳನ್ನು ಹೆಲೆನ್ನಳ ಜೊತೆ
ಸಮೀಕರಿಸಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಶಬ್ದ ಪ್ರಸಂಗ’ವೆಂಬ ಕಾವ್ಯದ ಮೋಜವಾನಿ’
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೮

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…