ಎಂದೂ ಒಪ್ಪಿಸಬೇಡ ಹೃದಯ ಪೂರಾ

ಎಂದೂ ಒಪ್ಪಿಸಬೇಡ ಯಾವ ಹೆಣ್ಣಿಗೂ ನಿನ್ನ ಹೃದಯ ಪೂರಾ.
ಖತವೆನಿಸಿತೊ ಪ್ರೀತಿ, ಭಾವೋದ್ರಿಕ್ತ ಹೆಣ್ಣುಗಳು
ಚಿಂತಿಸುವ ಅಗತ್ಯವನ್ನೆ ಎಳ್ಳಷ್ಟೂ ಕಾಣರು,
ಒಂದೊಂದು ಮುತ್ತಿಗೂ ಪ್ರೇಮ ಮಂಕಾಗುತ್ತ
ತೀರಿಕೊಳ್ಳುವುದೆಂದು ಕನಸಲ್ಲೂ ತಿಳಿಯರು,
ಸುಂದರವಾದದ್ದೆಲ್ಲ ಸಣ್ಣ ಅವಧಿಯ ಸ್ವಪ್ನಸದೃಶ ದಿವ್ಯಾನಂದ.
ಅಯ್ಯೋ ಒಪ್ಪಿಸಬೇಡ ಹೃದಯವನ್ನೆಂದಿಗೂ
ಥಟ್ಟನೊಂದೇ ಸಲ.

ಜಾಣೆಯರು ಏನೆ ಹೇಳಲಿ, ತಮ್ಮ ಹೃದಯಗಳ
ಬಿಟ್ಟುಕೊಟ್ಟಿದ್ದಾರೆ ಕುಣಿಸಲಿಕ್ಕೆ.
ಪ್ರೇಮದಲಿ ಕಿವುಡಾಗಿ ಮೂಕಾಗಿ ಕುರುಡಾಗಿ
ಕೂತರಾದೀತೆ ಅದ ನುಡಿಸಲಿಕ್ಕೆ?
ಇದನಾಡುವವ ಬಲ್ಲ ಅದರ ಬೆಲೆಯೆಲ್ಲ.
ತನ್ನ ಹೃದಯವ ಹುಚ್ಚ ಸಾರಾಸಗಟು ತೆತ್ತು ಕಳಕೊಂಡನಲ್ಲ!
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತೆಗಾಗಿ ಜತೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೫

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…