ಹನಿಗವನ

ಕವನ

ಮನಸ್ಸಿನಲ್ಲಿ ಕವನ ತುಂಬಿದಾಗ ಕವನದಲ್ಲಿ ಮನಸ್ಸು ತುಂಬುತ್ತದೆ ಮನಸ್ಸಿನಲ್ಲಿ ದವನ ತುಂಬಿದಾಗ ಕವನದಲ್ಲಿ ಬಾಳ ಗಮನ ತುಂಬುತ್ತದೆ ****

ಕಲೆ

ಬಿಳಿ ತಲೆಯಾದರೇನು? ಕರಿ ತಲೆಯಾದರೇನು? ಸಾಲ ತೀರಿಸೆ, ತಪ್ಪಸಿಕೊಳ್ಳುವುದಕ್ಕೆ `ಮರೆವು’ ಒಂದೇ ಕಲೆ. ****

ಕಾಲ

ಕೆಲವರು ಕಾಲ ಓಡುತ್ತದೆ ಎನ್ನುತ್ತಾರೆ ಕೆಲವರು ಕಾಲ ಕುಂಟುತ್ತದೆ ಎನ್ನುತ್ತಾರೆ ದಿಟವೆಂದರೆ ಕುಂಟುವುದು ಓಡುವುದು ಎಲ್ಲಾ ನಾವು ಕಾಲವಲ್ಲ! *****