
ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ ಜಗಕೆ ತಂದೆಯಲ್ಲೆ ...
ಬನ್ನಿ ಗಿಳಿಗಳ ಚಲುವ ಹೂಗಳೆ ಚಂದ ಲೋಕವ ಕಟ್ಟುವಾ ಚಿನ್ನ ಲೋಕವ ಚಲುವ ಲೋಕವ ಜೀವಲೋಕವ ನಗಿಸುವಾ ಸಾಕು ಕಲಿಯುಗ ಸಾಕು ಕೊಲೆಯುಗ ಯಾಕೆ ಚಿಂತೆಯ ಸಂತೆಯು ಸಾಕು ಗೂಳಿಯ ಹಳೆಯ ಕಾಳಗ ಅಕೋ ಅರಳಿದೆ ಶಾಂತಿಯು ಮೌನಧಾಮಕೆ ಪ್ರೇಮಧಾಮಕೆ ಏಳಿರೇಳಿರಿ ಯಾತ್ರೆಗೆ...
ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ ಕಪ್ಪೇಗ್ ಆವು ಕಾಯ್ಕೊಂಡಂಗೆ ನಿಂತ್ಕಂಡೌನೆ ಮುನ್ಯ! ಯೆಂಡಾ ಮಾರೋ ಗೆಣ್ಯ! ಕುಡಿಯೋರ್‍ನ್ ಇಡದಿ ಸುಲದಾಕೋಕೆ ಮಡಗೌನ್ ಎಂಡದ್ ಮನೆಯ! ೧ ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್ ನೀ...
ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ ಮುತ್ತ ಪೋಣಿಸುವೆಯ ಇಬ್ಬನಿ ಆಗಲೇ ಪೋಣಿಸಿದೆ ಪರಿಮಳವ ಹರಡುವೆಯ ತೋಟ ಆಗಲೇ ಹರ...
ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ ಕಣ್ಣ...













