Home / ಕವನ / ಕವಿತೆ

ಕವಿತೆ

ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ ತುಟಿಯಂಚಿನ ನಗುವನಿ...

ತೆರೆದ ಮುಚ್ಚಿದ ಬಾಗಿಲುಗಳ ಸಂದಿಯಲಿ ಜೇಡ ನೇಯ್ದ ಬಲೆ ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು ಕಳೆದು ಹೋದವು ದಿನಗಳ ನೇಯ್ಗೆಯ ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ. ನಾಡಿನ ದೇವರಿಗೆಲ್ಲಾ ಚೌಕಟ್ಟು ಪಡೆದು ಕುಂತ ಮಾಡಿನ ಸಂದಿಯಲ್ಲೂ ಮನಸ್ಸ...

ಇಲ್ಲವೆನ್ನುವ ಭಾವ ಉಲಿಯದಿರು… ಒಲವೇ, ಇರುವುದಾದರೂ ಪ್ರೇಮ ಎದೆಯ ಒಳಗೆ. ಬೆಳಗು ಬಿಮ್ಮನೆ ಬಂದು ಬೆಳಗುತಿದೆ ಮುಗಿಲು ಕಣ್ಣಂಚಲಿ ಗುನುಗುತಿದೆ ಮಧುರ ಸೆಲೆಯು. ನೀನಿಲ್ಲದಿರೆ ಒಲವೇ ಮನೆಯಂಗಳದ ಹೂ ಕಮರಿ ಹೆಣ್ಣಹೆರಳಿನ ಗಂಟು ಸಡಿಲವಿವುದು. ಬತ...

ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು ತಿಳಿಯದೆ ಗಾಢಾಲೋಚನೆಯಲ್ಲಿ ಸಿಕ್ಕು ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ ಇಲ್ಲಿರುವೆ ಯಾಕೆ-ಒಂದೂ ಗೊತ್ತಿರದೆ ನೊಡುವುದು ಮೇಲೆ ನೋಡುವುದು ಕೆಳಗೆ ಯಾವುದು ನಿಜ ಯಾವುದು ಸುಳ್ಳು ಮೇ...

ಮಲವ ಮೀರಿದ ಚೆಲುವ ಚನ್ನಿಗ ಮರಹು ನಿನಗಿದೋ ಕರ್ಪೂರಂ | ಕಡಲು ಕರಗಿತು ಕಡಲ ಒಡಲಲಿ ಮತ್ತೆ ಕಡಲು ಉಳಿಯಿತು ಮುಗಿಲು ಕರಗಿತು ಮುಗಿಲ ಮೌನದಿ ಮತ್ತೆ ಮುಗಿಲು ಬೆಳೆಯಿತು ದಂಡೆ ಇಲ್ಲದ ದುಂಡು ಇಲ್ಲದ ಅಬ್ಬ ಬೆಳಗಿನ ಉಂಡೆಯು ಕೋಟಿ ಯುದ್ಧವ ಬೋಟು ಮಾಡುವ ...

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು; ನಿಂತಾಗ ಗರಿಬುದ್ದಿ ತೊಲೆಭಾರವಾಗಿ ನಿನ್ನೆ ನೆನಪು- ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ; ಮಿಸುಕಿದರೆ ಕತ್ತು ಲಟ್ಟೆನು...

ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ ಸುಮಬಾಣವು || ಸ್ನೇಹವೆ ನೆಲವು ಅಳಿವು ಉಳಿವು ಹಸಿರಾ ಉಸಿರಾಗಿ ಬೆ...

ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ ಮೈಯಲ್ಲಾ ರೋಮಾಂಚನ ಪುಟ್ಟ ಅಂಗೈತುಂಬ ಚೆಲುವಿನ ಚಿತ್ತಾರ ಸಾವಿರ ಸೂರ್ಯ ...

ಕೆಂಪು ವಜ್ರ ನೀಲ ಪುಷ್ಯ ರಾಗ ವೈಡೂರ್ಯವು ಚಂಪರಾಗ ಚಂದ್ರಕಾಂತ ನಾಗ ಗೋಮೇಧಿಕ ಇಂತು ನೋಡಿ ಒಡೆದು ಕಡೆದು ತಿಕ್ಕಿ ನಾಸಿಕ್ಕಿದೆ ಚಿಂತೆಯಲ್ಲಿ ಸಾಣೆಯಿಟ್ಟು ಮಿಕ್ಕುವನ್ನಿಕ್ಕಿದೆ ಇಡಲು ಕಳಸ ಗೋಪುರಾದಿ ರತುನ ಮಂದಿರಕೆನೆ ನುಡಿಯ ಗಣಿಗಳಿಂದ ತೆಗೆದೆ ರ...

೧ ಜಾಣ್ಮೆಯಿಂದ ಜೀಕುತ್ತಿದೆ ನಾಗರೀಕತೆ ಕಲ್ಯಾಣದ ಪರಿಕಲ್ಪನೆ ಶಾಂತಿ ಸೌಹಾರ್ದತೆ, ಕಾಯಿದೆ ಕಾನೂನು ಮಡಿಲಲ್ಲಿ ತುಂಬಿಕೊಳ್ಳುವಂತೆ ದುರ್ಯೋಧನರೇ ರಾಜ್ಯವಾಳುತ್ತಿದ್ದಾರೆ. ೨ ಬಗೆ ಬಗೆಯ ಬಗೆಹರಿಯದ ದ್ವಂದ್ವ. ಅಲ್ಲೊಬ್ಬ ಲಲನೆ ಲಂಟಾನಾ ಮುಸಿ ಮುಸಿ ನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...