Home / ಕವನ / ಕವಿತೆ

ಕವಿತೆ

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು? ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ ದೀಪಗಳಂತೆ ಉರಿಯುತ್ತ-ಇನ್ನು ಕೆಲವರು ತಿರುವನಂತಪುರದಲ್ಲಿ, ತೀರ ಕೊನೆಯವಳು ಬಾರ್ಸಿಲೋನಾದ ಯಾವುದೋ ಬೀದಿಯಲ್...

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು ಪರರ ಎಂಜಲು ತಿಂಬ ದಾಹಬೇಡ ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ ಬೆವರಿಲ್ಲದಾ ಅನ್ನ ಅರುಹು ಬೇಡ ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ ಭೂಮಿತಾಯಿಗೆ ಶರಣು ಶರ...

ಯಾರಿವಳೀ ದೀಪಿಕಾ ಕವಿಕನಸಿಗೆ ಕಣ್ಣು ಬಂತೊ, ಉಸಿರಾಡಿತೊ ರೂಪಕ! ಬಿಸಿಯೂಡಿಸಿ ಹಸಿರಾಡಿಸಿ ಕನವರಿಕೆಯ ನಾಡಿಗೆ ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ ದೀಪಿಕಾ ದೀಪಿಕಾ ಕನಕಾಂಬರ ಬೆಳೆಕಹೊದ್ದ ಮುಗಿವ ಹಗಲ ತುದಿಗೆ ಮೊಲ್ಲೆ ಮಾಲೆಯಾಗಿ ತೂಗಿ ನೀಲನ...

ದೀಪ ಉರಿಯಿತು ಭಾವ ಬೆಳಗಿತು ನಮ್ಮ ಮನಗಳಂತೆ ನಮ್ಮದೇ ಧ್ಯಾನ ಮಗ್ನತೆಯಲ್ಲಿ|| ಹಣತೆ ಎಂಬ ದೇಹ ಎಣ್ಣೆ ಎಂಬ ಧಮನಿ, ಜೀವನ ಎಂಬ ಬತ್ತಿ ಆತ್ಮವೆಂಬ ಜ್ಯೋತಿಯಲ್ಲಿ|| ಮನೆಯೆ ಗುಡಿಯು ನೀನು ಇರುವೆನೆಂಬ ಸ್ಥಿರ ಧರ್‍ಮಕರ್‍ಮ ಮನನ ನ್ಯಾಯ ನೀತಿ ಗುಣದಲ್ಲಿ|...

ನೀಲಿ ಅಂಬರದ ತಿಳಿಬೆಳದಿಂಗಳು ಸಾವಿರಾರು ಚುಕ್ಕಿ ಮಿನುಗು ತೇಲಿ ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು ಎಚ್ಚರಗೊಂಡು ದಾವಾ ಹರಡಿ ಹರಡಿ ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು. ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ ಶಕ್ತಿ ವಿಜೃಂಭಿಸಲು ಒಡ...

ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು ಇದು ಬೆಟ್ಟ ಇದು ಗಾಳಿ ಇದು ಹೂವು ಇದು ಎಲೆ ಎಂದ...

ಆಳದ ನೆಲೆಯಲ್ಲಿ ಕವಲುಗಳ ಕುಸುರಿ ಕುಂದುವುದಿಲ್ಲ ಅಧಿತ್ವದ ಸೊಗಸು ಜಡತ್ವ ಮೂಡದ ಜಗಮಗಿಸುವ ಬೆಳಕು. ಸ್ವಯಂಸ್ಪೂತರ್‍ತಿ ಸೆಲೆಯ ಅರಗಿಸಿ ದಕ್ಕಿಸಿಕೊಳ್ಳಬೇಕು. ಹರಳೆಣ್ಣೆ ಗಾಢವಾಗುರಿದರೆ ಕಡುಕಪ್ಪು ಕಾಡಿಗೆ ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ. ...

ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು ಮಾಡುವ ಗೆಳೆಯನೆ ಹೇಳು ನೀನು ನನಗೆ ಸರ್ವಶಕ್ತನಾದ ದೇವರ ರೀತಿ ರಿವಾಜು ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ ಎಲ್ಲರನ್ನೂ ಸಮನಾಗಿ ...

ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ ತಂಪು ಹನಿಗಳ ಸಿಂಚನ ನೆಲಕೆ ಹೊಲಕೆ ಜಲಕೆ ಸುರಿದಿವೆ ಬರಿಯ...

ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...