
ಅಮ್ಮ ನೋಡೆ ಆಕಾಶದಲಿ ಎಷ್ಟೊಂದ್ ಹೊಳೆಯೊ ನಕ್ಷತ್ರ ಆಟಕೆ ಕರೆದರೂ ಬರೋದಿಲ್ಲ ಯಾಕೆ ನಮ್ಮನೆ ಹತ್ರ ನಿನ್ನ ಹಾಗೆ ಅವರಮ್ಮನೂ ಬೈಯ್ದು ಬಿಡ್ತಾಳೋ ಏನೋ ದೂರಾ ಎಲ್ಲೂ ಹೋಗ್ಬೇಡಂತ ಹೊಡೆದು ಬಿಡ್ತಾಳೋ ಏನೋ…? ಅಮ್ಮ ಚುಕ್ಕಿಗಳ್ಯಾಕೆ ನನ್ನಂಗಿಲ್ಲ ದ...
ಪುಟ್ಟನ ಹಳ್ಳಿ ಜಾತ್ರೆಯಲಿ ಸಿಗುವವು ಬಗೆ ಬಗೆ ತಿನಿಸುಗಳು ಬೆಂಡು ಬತ್ತಾಸು ಜಿಲೇಬಿಗಳು ಒಣಮಂಡಕ್ಕಿಯ ಮೂಟೆಗಳು ದಾರದ ಉಂಡೆ ರಬ್ಬರ್ ಚೆಂಡು ರಿಬ್ಬನ್ ಟೇಪು ಗಾಜಿನ ಗುಂಡು ಹೇರ್‌ಪಿನ್ ಕನ್ನಡಿ ಬಾಚಣಿಗೆ ಕುಂಕುಮ ಟಿಕಳಿ ಬೀಸಣಿಗೆ ಭಜನೆ ಸನಾದಿ ಕರಡ...
ಸುಳ್ಳ ನರಿಯು ಕಳ್ಳ ವೇಷ ಹಾಕ ಬಯಸಿತು ಮೋಸ ಮಾಡಿ ಹೊಸ ಬೇಟೆ ಹಿಡಿಯ ಹೊರಟಿತು ಬಿಳಿಯ ಕೋಟ ನ್ನೊಂದು ತಾನು ಧರಿಸಿ ಬಂದಿತು ಸ್ಟೆತಾ ಸ್ಕೋಪು ಕೈಲಿ ಹಿಡಿದು ನಲಿಯತೊಡಗಿತು ನಾನು ವೈದ್ಯನಾದೆ ಎಂದು ಹೇಳಿ ಕೊಂಡಿತು ಒಂಟಿ ಕುದುರೆ ಗಂಟಲಲ್ಲಿ ನೋವು ಎಂದ...
೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ “ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ “ಹೋಗೆ ಗಂಗಿ, ಹೋಗೆ ಗೌರಿ! ಹೋಗೊ ಬ್ರಹ್ಮ, ವಿಷ್ಣು,...
ಬಾರೆಲೆ ಗಿಳಿಯೇ ಮುದ್ದಿನ ಮಣಿಯೇ ಪಚ್ಚವ ಧರಿಸಿಹ ರೇಶಿಮೆ ಮರಿಯೇ ಹವಳದ ಕೊಕ್ಕಿನ ಮುತ್ತಿನ ಕಣ್ಣಿನ ಸುಂದರ ಪುಕ್ಕಿನ ಚಂದದ ಗಿಳಿಯೇ। ಬಾ ಬಾ ಬಾ ಮಾಟದ ಪಂಜರ ಬಣ್ಣದ ಹಂದರ ಅದರಲಿ ನಿನ್ನನು ಇರಿಸುವ ಬಾ ಬಾ| ಬಾರೆಲೆ ಬಗೆ ಬಗೆ ಹಣ್ಣನು ನಾ ಕೊಡಿಸುವೆ...
ರಾಜು ಮನೆಯ ಗೋಡೆಯಲ್ಲಿ ಗುಬ್ಬಿಯ ಗೂಡು ಇರುವುದು ಹೆಣ್ಣು-ಗಂಡು ನೆಮ್ಮದಿಯಿಂದಲಿ ಬದುಕುತಿದ್ದವು ಆ ಮನೆಯಲ್ಲಿ ಅನ್ನವನ್ನು ಹುಡುಕಲು ಗುಬ್ಬಿಗಳು ಗೂಡು ತೊರೆದು ಹೋಗುವವು ಕಾಳು ಹುಳುಗಳ ಕಚ್ಚಿಕೊಳುತ ಗೂಡಿಗೆ ಮತ್ತೆ ಮರಳುವವು ದಿನಗಳು ಹೀಗೆ ಗತಿಸಿ...
ಟೀಚರ್ ಹೇಳ್ತಾರೆ ನಮ್ಗೆ ಕಲಿಬೇಕಂತೆ ಹಾಡು ಹಾಡ್ತಾ ಹಾಡ್ತಾ ನಾವು ಕಟ್ಬೇಕಂತೆ ನಾಡು ಟೀಚರ್ ಹೇಳ್ತಾರೆ ನಮ್ಗೆ ಉತ್ಬೇಕಂತೆ ನೆಲ ಎಷ್ಟೆ ಕಷ್ಟ ಬಂದ್ರೂ ಬಿಡಬಾರದಂತೆ ಛಲ ಟೀಚರ್ ಹೇಳ್ತಾರೆ ನಮ್ಗೆ ರೈತ ದೊಡ್ಡೋನಂತೆ ಎಲ್ಲಾ ಕಷ್ಟ ಸಹಿಸಿಕೊಂಡು ಅನ್ನ ...
ತಂದೆಗೆ ಪುಟ್ಟನು ಕೇಳಿದನು ಕಲಿಸು ತನಗೆ ಈಜೆಂದನು ಹಳ್ಳದ ದಂಡೆಯ ಬಾವಿಗೆ ಹೋದರಿಬ್ಬರು ಜೊತೆ ಜೊತೆಗೆ ತಂದೆಯು ಧುಮುಕಿ ಈಜಿದನು ಪುಟ್ಟನು ಕುಳಿತು ನೋಡಿದನು ತಂದೆಯು ಕೈಯ ಹಿಡಿದೆಳೆದು ಸೊಂಟವ ಬಳಸಿ ನಡೆಸಿದನು ಪುಟ್ಟನು ಮೊದಲು ಚೀರಿದನು ಕೈ-ಕಾಲು ...













