Home / ಬಾಲ ಚಿಲುಮೆ / ಕವಿತೆ / ತುಂಟ ಪುಟ್ಟ

ತುಂಟ ಪುಟ್ಟ

ನಮ್ಮ ಪುಟ್ಟ ಬಹಳ ದಿಟ್ಟ
ಸಿಹಿ ಅಂದ್ರೆ ತುಂಬಾ ಇಷ್ಟ
ಸಕ್ಕರೆ ಬೆಲ್ಲ ಕದ್ದು
ಯಾರೂ ಕಾಣದಂಗೆ ಮೆದ್ದು

ಸೈಕಲ್‌ ಅಂದ್ರೆ ಪ್ರಾಣ
ಹೊಡೆಯೋಕೆ ಬೇಕು ತ್ರಾಣ
ಎಷ್ಟೇ ಟ್ರಾಫಿಕ್ಕಿದ್ರೂ
ನುಗ್ಗೇ ಬಿಡ್ತಾನೆ ಹೇಗಾದ್ರೂ

ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು
ಕೊಡದಿದ್ರೆ ಬಿಡೋದೆ ಇಲ್ಲ
ಕೆಲಸಕ್ಕೊಂದು ರೇಟು
ಅಮ್ಮ ಕೊಡ್ತಾಳೆ ಏಟು

ಟೆಸ್ಟ್ ಅಂದ್ರೆ ತುಂಬಾ ಕಷ್ಟ
ಓದೋಕೆ ಕೂರಿಸೋದೆ ಸಂಕಷ್ಟ
ಬಾಯಿ ಮಾತ್ರಾ ಬೊಂಬಾಯಿ
ತಲೆಯೊಳಗಿಲ್ಲ ಬದನೆಕಾಯಿ

ಶಾಲೆಗೆ ಬರೋದು ಲೇಟೆ
ಅಲೆಯೋದು ಪೇಟೆ ಪೇಟೆ
ಬಂದಾಗ್ಲ ಮಾಡ್ತಾನೆ ತರ್ಲೆ
ಮೇಷ್ಟ್ರು ಕೇಳ್ತಾರೆ ಮರ್ಲೆ

ತಂಗಿ ತುಂಬಾ ಜಾಣೆ
ಅಣ್ಣ ಹಂಗ್ಯಾಕೊ ಕಾಣೆ
ಕ್ಲಾಸಿಗವಳೆ ಫಷ್ಟು
ಎಲ್ಲಾದ್ರಲ್ಲೂ ಫಾಸ್ಟು

ಬಂದೇ ಬಿಡ್ತು ರಿಸಲ್ಟು
ಪುಟ್ಟಂಗಾಯ್ತು ಇನ್ಸಲ್ಟು
ಕ್ಲಾಸಿಗಿವನೆ ಲಾಸ್ಟು
ಆಯ್ತು ಒಂದೊರ್ಷ ವೇಸ್ಟು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...