ತಾರೆಗಳ ತರುವ ಬಾ

ಅಮ್ಮ ನೋಡೆ ಆಕಾಶದಲಿ
ಎಷ್ಟೊಂದ್ ಹೊಳೆಯೊ ನಕ್ಷತ್ರ
ಆಟಕೆ ಕರೆದರೂ ಬರೋದಿಲ್ಲ
ಯಾಕೆ ನಮ್ಮನೆ ಹತ್ರ

ನಿನ್ನ ಹಾಗೆ ಅವರಮ್ಮನೂ
ಬೈಯ್ದು ಬಿಡ್ತಾಳೋ ಏನೋ
ದೂರಾ ಎಲ್ಲೂ ಹೋಗ್ಬೇಡಂತ
ಹೊಡೆದು ಬಿಡ್ತಾಳೋ ಏನೋ…?

ಅಮ್ಮ ಚುಕ್ಕಿಗಳ್ಯಾಕೆ
ನನ್ನಂಗಿಲ್ಲ ದಪ್ಪ
ಊಟಕೆ ಅವರಮ್ಮ ಹಾಕೋದಿಲ್ವ
ಹಾಲು ಬೆಣ್ಣೆ ತುಪ್ಪ

ಅಮ್ಮ ನಂಗೊಂದ್ ರೆಕ್ಕೆ ಕಟ್ಟು
ಹಾಕ್ಕೊಂಡ್ ಹೋಗ್ತಿನಿ ಮೇಲಕ್ಕೆ
ಕೇಳೇ ಬಿಡ್ತೀನಿ ಯಾಕ್ ಬರೋದಿಲ್ಲ
ನಂಜೊತೆ ನೀವು ಆಡೋಕೆ

ಪುಟ್ಟ ನಾನು ನೀನು
ತಾರೆಗಳ ಮನೆಗೆ ಹೋಗೋಕಾಗಲ್ಲ
ತುಂಬಾ ತುಂಬಾ ದೂರಾ ಅದು
ಕೈಗೆ ನಿಲುಕೋಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದಾರೀಕರಣ
Next post ಹೋಳಿ ಹುಣ್ಣಿವೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…