
ಎದೆಯೊಳು ಮೊರೆದಿದೆ ಒಂದೇ ಸಮನೆ ಅತಲ ಜಲದ ಗಾನ ಮನವಿದು ಯಾಕೋ ನಿಲ್ಲದು ಮನೆಯಲಿ ತುಯ್ಯುತಲಿದೆ ಪ್ರಾಣ ತೂರಿಬಿಡಲೆ ಈ ಬಾಳನ್ನೇ ದುಡುಕುವ ನೆರೆಯಲ್ಲಿ ಬಾಳಿನ ಹಾಹಾಕಾರವನು ನುಂಗುವ ಮೋದದಲಿ? ನದಿಯೊಳು ಅಲೆ ಸಾಲೇಳಂತಿದೆ, ನನ್ನೀ ಎದೆಯೊಳಗೂ; ಏನೋ ವ...
ಏಕೆ ಕಣ್ಣು ಹೀಗೆ ತೇವಗೊಂಡಿತು, ಏಕೆ ಮನವು ಕಳವಳದಲಿ ಮುಳುಗಿತು? ಇದ್ದಕಿದ್ದ ಹಾಗೆ ಏನೋ ಮಿಂಚಿತು ತಿಳಿಯದಿದ್ದರೇನು ಮನಕೆ ಹೊಳೆಯಿತು. ಯಾರ ದನಿಯೊ ಎದೆಯ ಹಾದುಹೋಯಿತು ಬಾನಿನಲ್ಲಿ ತಾರೆ ಸಂತೆ ಸೇರಿತು ಶ್ರುತಿಗೊಂಡಿತು ವೀಣೆ, ತಾನೆ ದನಿಯಿತು ಝೇಂ...
ಏನೋ ಗಾನ ಚಿಮ್ಮುತಿದೆ ಅಂಗಾಂಗದಲಿ ಏಕೋ ಮನ ಸೇರದು ದಿನದ ನಡೆಯಲಿ ಸ್ವರಗಳೇರಿ ಇಳಿಯುತಿವ ತಿಳಿಗಾಳಿಯಲಿ, ಮಧುರಗಂಧ ಹಬ್ಬುತಿದೆ ಮನದ ವನದಲಿ ಎಂಥ ನೃತ್ಯ ಒಲಿಯಿತಿಂದು ನನ್ನ ಚಲನೆಗೆ? ಕಲಿಯದೇನೆ ತಿಳಿಯುತಿದೆ ಎಲ್ಲ ಹೊಸ ಬಗೆ! ಮನಸಿನಾಳದಿಂದ ಏನೋ ಆಸ...
ಹೊಸ ಚೆಲುವನು ಹರಸಿ – ಮೈಗೆ ಹೊಸ ಸೊಬಗನು ತೊಡಿಸಿ ಹಿಮದ ಶಾಪವಾಯು – ಬೀಸಿದೆ ಹಸಿರ ಉಸಿರ ನಿಲಿಸಿ ನೀಗಲಿ ಶಾಪವನು ಚೈತ್ರ ಪ್ರಕೃತಿಗಭಯ ನೀಡಿ, ಒಣರೆಂಬೆಯು ಹಸಿರ – ದನಿಸಲಿ ಲಜ್ಜೆಯನ್ನು ದೂಡಿ ಪ್ರಾಣವೀಣೆಯಲ್ಲಿ – ಈ...
ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ ನಿನ್ನಿಂದ ಮನಿಚೆಂದ ಮನಿಬಾಳು ಆನಂದ ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ ಈ ಮನಿಯ ನೀನೇs¸ ಬೆಳಗುವಾಕೆ ಗ್ಯಹಲಕ್ಷ್ಮಿ ನೀ ಹೋದ...
ಯಾರೋ ತಾಪಸಿ ನೀನು? ರಂಭೆಯೆ ಕರೆದರು ತೆಪ್ಪಗೆ ಕೂತಿಹೆ ಎಂಥಾ ಮರುಳನೊ ನೀನು? ಅಮೃತವ ಹೀರಿ ಮುಪ್ಪನು ತೂರಿ ಅಪ್ಸರೆಶಯ್ಯೆಯ ಸೇರಿ ಸುಖಿಸಲು ತಾನೇ ಈ ತಪವೆಲ್ಲಾ ಭೋಗದ ಎಲ್ಲೆಯ ಮೀರಿ ಗೀತದಿ ಅರಳಿಸಿ ನೃತ್ಯದಿ ಕೆರಳಿಸಿ ಅಮಲಿನ ಅಂಚಿಗೆ ಸಲಿಸಿ ಮಾದಕ...













