ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನ...

೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ...

ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ| ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧|| ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ| ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨|| ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್...

 I `ಬಾಲೆ ನಿನ್ನಯ ತಮ್ಮನೆಲ್ಲಿ?’ ಎಂದವಳನಾಂ ಕೇಳುವಲ್ಲಿ, ತಲೆಯನಾನಿಸಿ ಹೆಗಲಿನಲ್ಲಿ `ಮನೆಯೊಳಲ್ಲವೆ?’ ಎಂದಳು. ೪ ಆದೊಡಿಂದವನೇಕೆ, ಬಾಲೆ, ನಿನ್ನೊಡನೆ ಪೋಗಿಲ್ಲ ಸಾಲೆ ಗೆನಲು ನುಡಿದಳು – ಹನಿವ ಹಾಲೆ? ಮಲರೆಲರೆ? ಮೆಲ್ಲುಲಿ...

ಹೊತ್ತಿಸು ಎದೆಯಲಿ ಕನ್ನಡಿಗ ಅಭಿಮಾನದ ಹಣತೆ ತಾಯ್ನಾಡಿಗೆ ಬೆಳಕಾಗುತಲಿ ಕಾಯ್ದುಕೊ ನಿನ್ನ ಘನತೆ ಇತಿಹಾಸದ ಪುಟಪುಟದಲ್ಲೂ ಬೆಳಗಿದೆ ಕರುನಾಡು ಏತಕೊ ಏನೋ ಸೊರಗುತಿದೆ ಈ ದಿನದಲಿ ನೋಡು ಪೋಷಿಸಿ ಬೆಳಸಿಹ ಕಾವೇರಿ ಹೊರಟಿಹಳು ಅಲ್ಲಿ ನಮ್ಮಲ್ಲಿರದ ಅಭಿಮಾ...

ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ. ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ, ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ. ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ ನನ್ನ ನಾಡು ಕಿಲ್ಟಾರ್ಟನ್ ಬಡವರ ...

ಮುಂಗಾರು ನನ್ನ ಮುಂದಾರೆಂಬ ಬಿಂಕದಲಿ ಮುಂದಲೆಯ ಕೇಶರಾಶಿಯನೆತ್ತಿ ಕಣ್ಕಿಸಿದು, ಎಬ್ಬಿಸಿದ ಕೆಂಧೂಳಿ ಕಾರ್‍ಮುಗಿಲ ಮುಟ್ಟಲದು ರಕ್ಕಸಿಯ ರಕ್ಕಸದಿ ನಿಂತಿದೆ ದಿಗಂತದಲಿ ಮುಂಗಾರ ಸಿಂಗಾರವಿದು ನಿರಾತಂಕದಲಿ ಮುಚ್ಚಿಹುದು ಹಗಲ ಬಂಗಾರವನು ಬೆಚ್ಚಿಹುದು ಮ...

ಶಿವಯೋಗ ಕೂಸು ತಾಯಿಯ ಕಂಡು ಕುಲುಕುಲನೆ ನಕ್ಕಂತೆ ಯೋಗವೆಂಬುದು ಚಂದ ಚಲುವ ಬಂಧ ತಾಯ ಎದೆ ಹಾಲನ್ನು ಗಟಗಟನೆ ಕುಡಿದಂತೆ ಶಿವಯೋಗದಾನಂದ ಮುದ್ದುಕಂದ ಬಣ್ಣ ಮಾವೀನ ಮರಕಂಡು ಗಾನ ಮಾಡುವರಿಲ್ಲ ಕಲ್ಲೊಗೆದು ಹರಿದೊಯ್ವ ಕಳ್ಳರಿಹರು ನೀನು ಸುಂದರ ಮಾವು, ನೀ...

ಬುಂಡೇಗೆ ಯೆಂಡ್ ಎಂಗೆ ಯೆಂಡಕ್ಕೆ ನೊರೆಯಂಗೆ ಅಂಗೇನೆ ಮನ್ಸಂಗು ಒಳ್ಳೆ ನಡತೆ. ಬುಂಡೇಗೆ ಆಲೆಂಗೆ ಆಲೊಳಗೆ ವುಳವೆಂಗೆ ಅಂಗೇನೆ ಆಳ್ ನಡತೆ ನರಮನ್ಸಗೆ. ಅಮಲಿಂದ ಯೆಂಡ್‌ಕುಡಕ ಗುಲ್ಲಿಂದ ಪಡಕಾನೆ ನಡತೇಂದ ಗೊತ್ತಾಗ್ತೆ ಒಳ್ಳೆ ಮನ್ಸ. ಸದ್ದಿಂತ ಕೆಟ್ ಕಾ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...