ವರಮಹಾಲಕ್ಷ್ಮಿ ಪೂಜೆಗಾಗಿ ತನ್ನ ಕ್ಯಾಪಿಟಲ್ ಬಳ್ಳಾರಿಗೆ ಬಂದರು ನಾಳೆ ಮುತ್ತೈದೆ ಸುಸ್ಮಸ್ವರಾಜು ಇನ್ನೆಲ್ಡು ದಿನ ತಡ್ಕಳಿ ಓಲ್ ಸೇಲಾಗಿ ಎಲ್ಲಾ ಪ್ರಾಬ್ಲಮ್ನು ಫಿನಿಶ್ ಮಾಡ್ತೀನಿ. ಬಚ್ಕೊಂ ಇನ್ ಬಿಟ್ಟೀನ್ ಬಿಜೆಪಿ ನೂತನ ಕಚೇರಿ ಡೋನೂ ತೆಗಿತೀನಿ ಅ...

ಹುಚ್ಚಾಸ್ಪತ್ರೆಯೊಂದರಲ್ಲಿ ರಾಜಕಾರಣಿಯ ಅಮೋಘ ಭಾಷಣ ಏರ್ಪಟ್ಟಿತ್ತು. ತಮ್ಮ ಆಡಳಿತ ಪಕ್ಷ ಸಾಧನೆಮಾಡಿದ ವಿಷಯವನ್ನು ವಿವರಿಸುತ್ತಿದ್ದ. ನಮ್ಮ ಸರ್ಕಾರ ಫ್ಲೈ ಓವರ್‌ಗಳನ್ನು ಎಲ್ಲಾ ಸ್ಥಳಗಳಲ್ಲೂ ಕಟ್ಟಿಸುತ್ತಿದೆ. ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊ...

ಸಿ‌ಎಂ ಕೊಮಾಸಾಮಿ ಡಿಸಿ‌ಎಂ ಯಡೂರಿ ಏಟೇ ಗಾಢಲಿಂಗನ ಮಾಡ್ಕ್ಯಂಡು ಮುತ್ತು ಕೊಡ್ತಾ ಜನರ ಎದುರ್ನಾಗೆ ಪಕ್ಷದ ವರ್ಕರ್ಕ್ಸ್ ಎದುರ್ನಾಗೆ ಪ್ರೇಮಿಗಳಂಗೆ ಪೋಜ್ ಕೊಟ್ಟರೂ ಅದೇ ಪ್ರೇಮ ಎಲ್ಡೂ ಪಕ್ಷದ ಶಾಸಕರು ವರ್ಕರ್ಸ್ ನಡುವಿನಾಗೆ ಉಳ್ಕಂಡಿಲ್ಲ ಬಿಡ್ರಿ. ...

ಶೀನಣ್ಣ: “ಶಾಮಣ್ಣಾ, ನನಗೊಂದು ಅನುಮಾನ ಬಂದಿದೆ. ನೋಡೋಣ, ನೀವು ಹೇಗೆ ಬಗೆಹರಿಸುತ್ತೀರಿ.” ಶಾಮಣ್ಣ: “ಏನದು ನಿಮ್ಮ ಅನುಮಾನ?” ಶೀನಣ್ಣ: “ಮಠದ ಬಾಗಿಲಲ್ಲಿ ಒಂದು ಕಡೆಗೆ ಗರುಡ, ಮತ್ತೊಂದು ಕಡೆಗೆ ಆಂಜನೇಯ ಸ್ಥಾ...

ಬಳ್ಳಾರಿ ರೆಡ್ಡಿ ಒದೆತ ತಾಳಲಾತದೆ ಮಿಕ್ಸ್ಚರ್ ಸರ್ಕಾರ ಅದರಿ ಅಲ್ಲಾಡ್ತಾ ಇರೋವಾಗ್ಲೆ ಸೂಪ್ರೀಂ ಕೋಲ್ಟು ಬ್ಯಾರೆ ಸರ್ಕಾರದ ಮಕ್ಕೆ ಕ್ಯಾಕರ್ಸಿ ಉಗಿದೈತೆ. ಕಾಂಗ್ರೆಸ್ ಸರ್ಕಾರ ಇದ್ದಾಗ್ಲೂ ಇದೇ ಗತಿ ಜೆಡಿ‌ಎಸ್ ನೋದೂ ಇದೇ ಸ್ಥಿತಿ. ಕೋಲ್ಟ್ ಛೀಮಾರಿ...

ಒಬ್ಬ ತನ್ನ ಹೆಂಡತಿಗೆ ಕೇಳಿದ, “ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?” ಹೆಂಡ್ತಿ: “ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ.” ಎಂದಳು. ***...

ಬಳ್ಳಾರಿ ರೆಡ್ಡಿ ಬಾಂಬ್ನ ಬಿಜೆಪಿ ಮುದಕರು ಡೆಲ್ಲಿನಾಗೆ ನಿಷ್ಕ್ರಿಯಗೊಳಿಸಿ ರೆಡ್ಡಿ ಬಾಯಿಗೆ ಬೊಂಬಾಟ್ ಪ್ಲಾಸ್ಟರ್ ಜಡ್ದು ಕಳಿಸಿದ್ದರಿಂದ ಯಡ್ಡಿ ಕುಮ್ಮಿ ಆನಂದ ತುಂದಿಲರಾಗಿದ್ದರು. ಆದ್ರೆ ಈ ಆನಂದ ಐದೇ ದಿನ್ದಾಗೆ ಠುಸ್ ಆಗಿ, ರೆಡ್ಡಿ ಸಡನ್ನಾಗಿ...

ಬಿಜೆಪಿನಾ ಮಾಯಾವತಿ ಬುಟ್ಟು ಖುರಾನಾ ಕೈಬಿಟ್ಟ ಅಡ್ವಾಣಿ ಮೇಲೆ ಆರೋಪ ಬಿದ್ಕಂಡು ಬಂದ್ರೂ ಬಾಯಿ ಬಿಡದೆ ಮೌನವಾಗಿದ್ದ ಯತಿವರ್ಯ ಪೇಜಾವರ ತಿರುಪತಿನಾಗೆ ಕ್ರೈಸ್ತೀಕರಣವಾಗಲಿಕ್ಕತ್ತದೆ ಅಂತ ಹುಯಿಲೆಬ್ಬಿಸ್ಯಾರೆ. ಅವರಾನ ಏಟು ದಿನಾಂತ ಪಬ್ಲಿಸಿಟಿ ಇಲ್ದ...

ಹಲ್ಲು ಕೀಳಿಸಲು ದಂತವೈದ್ಯರ ಬಳಿಗೆ ಬಂದು. ಪರೀಕ್ಷಿಸಿ ಹಲ್ಲನ್ನು ಕೀಳಬೇಕೆಂದು ಬೇಡಿದ. ಅದರಂತೆ ಹಲ್ಲು ಕಿತ್ತರು. ಫೀಸ್ ಎಷ್ಟು ಎಂದು ಕೇಳಿದಾಗ ೫೦೦/- ರೂ ಎಂದರು. `ಏನು ಸಾರ್ ಒಂದು ಹಲ್ಲು ಕೀಳಲು ೫೦೦/- ರೂ ಚಾರ್ಜ ಮಾಡಿದ್ದೀರಿ. ಇದು ನ್ಯಾಯವೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....