ಬಸ್ಸಿನಲ್ಲಿ ಕುಳಿತಿದ್ದ ಪಕ್ಕದ ಸೀಟಿನ ಮಹಿಳೆಯನ್ನು ಜಾನಕಮ್ಮ ಮಾತಿಗೆ ಎಳೆದರು
ಜಾನಕಮ್ಮ: “ತಮಗೆ ಮಕ್ಕಳೆಷ್ಟು?”
ಆಕೆ: “ನನಗೆ ಆರು ಹೆಣ್ಣು ಮಕ್ಕಳು.”
ಜಾನಕಮ್ಮ: “ಆದರಲ್ಲಿ ಎಲ್ಲರೂ ಕೈಗೆ ಬಂದಿದ್ದಾರಾ?” (ವಯಸ್ಸಾಗಿದೆಯೇ ಎಂಬರ್ಥದಲ್ಲಿ)
ಆಕೆ: “ಎಲ್ಲರೂ ಕೈಗೇನೋ ಬಂದಿದ್ದಾರೆ; ಅದರಲ್ಲಿಇಬ್ಬರು ಕುತ್ತಿಗೆಗೇ ಬಂದಿದ್ದಾರೆ.”
ಜಾನಕಮ್ಮ: “ಅಂದರೆ ಆರ್ಥವಾಗಲಿಲ್ಲ. ಕೊಂಚ ಬಿಡಿಸಿ ಹೇಳಿ.”
ಆಕೆ: “ಅದೇ ಇಬ್ಬರಿಗೂ ಮದುವೆ ವಯಸ್ಸು ಮೀರಿದೆ. ಮನೆಯಲ್ಲೇ ಕುಕ್ಕರು ಬಡಿದಿವೆ. ವಿದ್ಯೆ ನೈವೇದ್ಯ. ಗಂಡಗಳು ಸಿಗುತ್ತಿಲ್ಲ. ನಮ್ಮ ಕುತ್ತಿಗೆಗೆ ಬರದೇ ಇನ್ನೇನು ತಾಯೀ?”
***