ಆ ಹೆಂಗಸಿನ ಸ್ವಭಾವ ತುಂಬಾ ಮರೆವು. ಒಂದು ದಿನ ತನ್ನದೊಂದು ಸೀರೆಯನ್ನು ದೊಡ್ಡ ಜವಳಿ ಅಂಗಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮ್ಯಾಚ್ ಆಗುವ ರೇಷ್ಮೆ ಸೀರೆಯನ್ನು ಕೊಳ್ಳಬೇಕೆಂದು ಅಂಗಡಿಯ ಎಲ್ಲಾ ಸೀರೆಗಳನ್ನು ತೆಗೆಸಿ ಬಿಚ್ಚಿಸಿ ಮ್ಯಾಚಿಂಗ್‍ಗೆ ಯಾವುದೂ ಸರಿಯಾದ ಸೀರೆ ಸಿಗುತ್ತಿಲ್ಲವೆಂದು ಜಾಗಖಾಲಿ ಮಾಡಲು ಹೊರಟಳು. ಸೀರೆಗಳನ್ನು ತೋರಿಸುತ್ತಿದ್ದವನು ಇವಳ ಸೀರೆಯನ್ನು ನೀಟಾಗಿ ಪ್ಯಾಕ್ ಮಾಡಿ ೨೫/- ರೂ ಚಾರ್ಜ್ ಮಾಡಿ ಬಿಲ್ ಸಮೇತ ಪ್ಯಾಕ್ ಆದ ಸೀರೆಯನ್ನು ಕೊಟ್ಟು “ಹಣ ಕೊಡೀಮ್ಮಾ ಎಂದ. ಯಾವುದು, ಏನು ಎಂದೆಲ್ಲಾ ಕೇಳಿದವಳು ಮರವೆಯಿಂದಾಗಿ ತನ್ನ ಸೀರೆಗೆ ಪ್ಯಾಕಿಂಗ್ ಚಾರ್ಜ್ ೨೫/-ರೂ ತೆತ್ತು ಹೊರ ಬಂದಳು!.”
***