ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ...

ಕಾಗದದ ಚೂರು ಎಂದೊಡನೆ ನಿಮ್ಮ ಚೂರಿಯಂತಹ ನಿರ್ಲಕ್ಷತೆಯಿಂದ ಮುಂದೆ ಸಾಗಬೇಡಿ. ಕಾಗದದ ಚೂರಿನಲ್ಲಿ ಬ್ರಹ್ಮಾಂಡವಡಗಿದೆ. ತೀರ ಕ್ಷುಲ್ಲಕ ವಸ್ತುವೂ ಅನಂತತೆಯನ್ನು ಹೊಂದಿರುವ ಸತ್ಯವನ್ನು ಇದು ವಿವರಿಸುತ್ತದೆ. ಕಾಗದದ ಚೂರು ಸಂಸ್ಕೃತಿಯ ಪುರಾತನತೆಯನ್ನ...

ಪ್ರಿಯ ಸಖಿ, ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ ಶಕ್ತಿಯೆನ್ನ...

ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ ಬೆಳೆಸಿದ್ದಾರೆ ಎಂದು ಅರಿವಾದದ್ದು; ದೀನದಲಿತರ ಉದ್...

ನಮ್ಮ ಮೇಲೆ ನೀಲವರ್ಣದಲ್ಲಿ ಕಾಣುವ ಆಕಾಶವು ಅಸಂಖ್ಯಾತ ಗ್ರಹಗಳನ್ನು, ನಕ್ಷತ್ರಗಳನ್ನು ಒಳಗೊಂಡಿದ್ದು ಬರಿಗಣ್ಣಿಗೆ ಕಾಣದಷ್ಟು ದೂರದಲ್ಲಿದೆ. ಆಕಾಶಗಂಗೆಯಲ್ಲಿ ಒಂದು ಸಾವಿರ ಕೋಟಿ ಸೂರ್ಯಗ್ರಹಗಳಿವೆ. ಅನೇಕ ಸೂರ್ಯಗ್ರಹಗಳು ಸೇರಿ ಬ್ರಹ್ಮಾಂಡವಾಗಿದೆ....

ಆ ಹಿಂದು ಯುವಕನು ಬಾಣಬಿಟ್ಟ ಗುರಿಯನ್ನು ಛೇಧಿಸುತ್ತಲೇ ಒಂದು ನುಡಿಯು ಹೊರಬಿತ್ತು – “ಭಲೆ!  ಒಳಿತಾಗಿ!! ” ಯಾರೋ ನುಡಿದರು – “ಅಹುದು ಆದರೆ ಇನ್ನೂ ಹಗಲಿನ ಬೆಳಕಿದೆ ಆ ಧನುರ್ಧಾರಿಯು ಗುರಿಯನ್ನು ಚೆನ್ನಾಗಿ ಇ...

ಏಡ್ಸ್ ವೈರಸ್ ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ.  ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು.  ಆದರೆ ಪ್ಯಾಶ್ಚರ್‍ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್...

ಅಪ್ಪನಿಗೆ ಹುಷಾರಿಲ್ಲ ಎನ್ನುವ ದೂರವಾಣಿ ಕರೆಯ ಬೆನ್ನೇರಿ ಆಸ್ಪತ್ರೆ ತಲುಪುವ ವೇಳೆಗಾಗಲೇ ಅಪ್ಪ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅದಾದ ಮೂರೇ ದಿನಗಳಲ್ಲಿ ನಮ್ಮ ಪಾಲಿಗೆ ನೆನಪಾಗಿಹೋದರು. ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಎದೆಯನ್ನು ಯಾರೋ...

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನ...

ಪ್ರಿಯ ಸಖಿ, ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....