Home / ಕಥೆ / ಕಾದಂಬರಿ

ಕಾದಂಬರಿ

ಮನವನೋದಿಕೋ ತಾತ ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠ...

ವೆಂಕಟಪತಿ. “ತಾನು ಇಚ್ಛಿಸುವ ವಾಗ್ದಾನವನ್ನು ಪಟ್ಟದ ಜೀವರ ಮುಂದೆ ಕೊಡೋಣಾಗಬೇಕಾಗಿ ವಾಗ್ದೇವಿಯು ಅಪೇಕ್ಷಿಸುವದ್ಯಾಕೆ? ದೇವರ ಮೇಲೆ ಶ್ರೀಪಾದಂಗಳವರಿಗೆ ಪೂರ್ಣಭಯಭಕ್ತಿ ಇರುವದರಿಂದ ತಾನು ಅಪೇಕ್ಷಿಸುವ ರೀತಿಯಲ್ಲಿ ಕೊಡೋಣಾಗುವ ಭಾಷೆಗೆ ಮುಂದೆ ಭಂಗ ...

ಕುವರಿ ಮಿಂದಳು ನೈಜ ಪ್ರೀತಿಯಲಿ ಸರೋವರದ ಬಲಪಾರ್‍ಶ್ವದಲ್ಲೊಂದು ಪುಟ್ಟ ಗುಡ್ಡ. ಅದರಲ್ಲಿ ಅಲ್ಲಲ್ಲಿ ಗುಡಿಸಲುಗಳನ್ನು ಕಂಡ ಅಂಬೆಗೆ ತೀವ್ರ ನಿರಾಶೆಯಾಯಿತು. ಋಷ್ಯಾಶ್ರಮವಿರಬಹುದೆಂದು ಭಾವಿಸಿ ಬಂದವಳಿಗೆ ಚಿತ್ರವಿಚಿತ್ರ ವೇಷಭೂಷಣಗಳ ಜನರು ಕಾಣಿಸಿದ...

“ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ. ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗ...

ಅನೃತದಿ ಛೇದಿಸಿದ ಕೊರಳನು ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ ಆತಂಕದಿಂದ ಅವರು ಗಾಢ...

ಭಾಗೀರಥಿಯು ಮಗಳ ಮೇಲೆ ಸಿಟ್ಟು ತಾಳಿದವಳಂತೆ ತೋರಿಸಿ ಕೊಂಡು, ಮಗಳನ್ನು ಚಿಕ್ಕ ಮನೆಯ ಒಳಗೆ ಕರಕೊಂಡು, ಅಲ್ಲಿ ಶಾನೆ ಹೊತ್ತು ವಾಗ್ದೇವಿಯ ಕೂಡೆ ಸಣ್ಣ ಸ್ವರದಿಂದ ಜಿಜ್ಞಾಸ ಮಾಡುವದರಲ್ಲಿ ಬಿದ್ದಳು. ಆವಳು ಠಕ್ಕು ಮಾಡುತ್ತಾಳೆಂಬ ಗುಟ್ಟು ವೆಂಕಟಪತಿ ...

ಎಲ್ಲಿ ದೊರಕೀತು ಸುಖವು? ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು...

ವಾಗ್ದೇವಿಯು ಬಾಗಿಲು ಹಾಕಿ ತಿಪ್ಪಾಶಾಸ್ತ್ರಿಯು ಹೇಳಿದ ಜಾತಕ ಭಾವವನ್ನು ಕುರಿತು ತಾಯಿಯ ಕೂಡೆ ಪ್ರಸ್ತಾಸಿಸುತ್ತಿರುವಾಗ ವೆಂಕಟಪತಿ ಆಚಾರ್ಯನು ಮೆಲ್ಲನೆ ಜಗಲಿಯಿಂದ ಕೆಳಗಿಳಿದು ಬಾಗಲಿಗೆ ಕೈತಟ್ಟಿ “ಭಾಗೀರಥಿ! ಭಾಗೀರಥಿ” ಎಂದು ಕರೆದನು. “ಯಾರದು” ...

ನಿಶೆಯ ಸಮರದಿ ಉರುಳಿದನು ಧರೆಗೆ ದುರ್ಯೋಧನ, ದುಶ್ಶಾಸನರು ಬಿಡದಿಯಿಂದ ಹೊರಟು ಹೋಗಿ ಎಷ್ಟೋ ಹೊತ್ತಾಗಿತ್ತು. ಕಾಡುತ್ತಿರುವ ಅಂಬೆಯ ನೆನಪಿನಿಂದಾಗಿ ಎಷ್ಟು ಯತ್ನಿಸಿದರೂ ಭೀಷ್ಮರಿಗೆ ನಿದ್ದೆ ಬರಲಿಲ್ಲ. ಸಣ್ಣ ಚಲನೆಯೂ ಎದೆಯಲ್ಲಿ ಅಪಾರ ನೋವನ್ನುಂಟು ...

ಶ್ರೀಪಾದ– “ವೆಂಕಟಪತಿ! ನಮಗೆ ಸನ್ಯಾಸವಾಗಿ ಹದಿನೈದು ಸಂವತ್ಸರಗಳಾದವು. ಈಗ ನಮ್ಮ ವಯಸ್ಸು ಮೂವತ್ತು ವರುಷ. ಇದು ವರಿವಿಗೂ ನಾವು ಷಡ್ವೈರಿಗಳನ್ನು ಜಯಿಸಿ ಕೀರ್ತಿಯನ್ನು ಹೊಂದಿದೆವು.” ವೆಂಕಟಪತಿ– “ಪರಾಕೆ! ಶ್ರೀಪಾದಂಗಳವರು ಅತಿ ಪರಿ...

1...2425262728...45

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...