ವಾಗ್ದೇವಿ – ೭

ವಾಗ್ದೇವಿ – ೭

ವೆಂಕಟಪತಿ. “ತಾನು ಇಚ್ಛಿಸುವ ವಾಗ್ದಾನವನ್ನು ಪಟ್ಟದ ಜೀವರ ಮುಂದೆ ಕೊಡೋಣಾಗಬೇಕಾಗಿ ವಾಗ್ದೇವಿಯು ಅಪೇಕ್ಷಿಸುವದ್ಯಾಕೆ? ದೇವರ ಮೇಲೆ ಶ್ರೀಪಾದಂಗಳವರಿಗೆ ಪೂರ್ಣಭಯಭಕ್ತಿ ಇರುವದರಿಂದ ತಾನು ಅಪೇಕ್ಷಿಸುವ ರೀತಿಯಲ್ಲಿ ಕೊಡೋಣಾಗುವ ಭಾಷೆಗೆ ಮುಂದೆ ಭಂಗ ಬಾರದೆಂಬ ವಿಶ್ವಾಸದಿಂದ ಎಂಬಂತೆ ನನ್ನ ಭಾವನೆ ಚಿತ್ತಕ್ಕೆ ಯಾವ ರೀತಿ ಯಲ್ಲಿ ಅನ್ವಯನಾಗಿಯದೋ ಅರಿಯದು.

ಚಂಚಲನೇ– “ನಮಗೂ ಹಾಗೆಯೇ ಕಾಣುತ್ತದೆ.”

ವೆಂಕಟಪತಿ “ಹಾಗಾದರೆ ಶ್ರೀಪಾದಂಗಳವರು ಪೂಜಿಸಿಕೊಂಡು ಬರುವ ದೇವರ ಮೇಲೆ ಕೇವಲ ವೇಶ್ಯಾಸ್ತ್ರೀಯಿಂದಲೂ ನಿಕೃಷ್ಟಳಾದ ವಾಗ್ಚೇವಿಗಿರವಷ್ಟು ನಂಬಿಕೆಯು ಶ್ರೀಪಾದಂಗಳವರಿಗೆ ಇಲ್ಲವೆಂಬ ಹಾಗಾ ಯಿತು. ಇನ್ನೇನು ಅರಿಕೆ ಮಾಡಲಿ.”

ಚಂಚಲನೇ.. “ವೆಂಕಟಪತಿ ನಿನ್ನ ಮಾತಿಗೆ ಅರ್ಧವಾಗುವುದಿಲ್ಲ. ಭಯಭಕ್ತಿಶೂನ್ಯರಾಗಿ ನಾವು ಪಟ್ಟದ ದೇವರ ಪೂಜೆ ನಡೆಸಿಕೊಂಡು ಬರುತ್ತೇವೆಂಬ ಅನುಮಾನ ನಿನಗೆ ಹುಟ್ಟಿದ್ದು ಬಹುಚೋದ್ಯವೇಸರಿ.”

ವೆಂಕಟಪತಿ-“ಚೋದ್ಯವೇ, ಶ್ರೀಪಾದಂಗಳವರಿಗೆ ತನ್ನ ದೇವರ ಮೇಲೆ ನಿಜವಾದ ಭಯಭಕ್ತಿಯಿರುವದಾದರೆ ವಾಗ್ದೇವಿಯ ಮಾಯಾಜಾಲ ವನ್ನು ಕತ್ತರಿಸಲಿಕ್ಕೆ ಅನ್ಯಸಾಧನ ಬೇಕಾಗದು. ತನಗೆ ತಗಲಿಕೊಂಡಿರುವ ಮೋಹವನ್ನು ಜಯಿಸಿಲಿಕ್ಕೆ ಸಾಮರ್ಥ್ಯಕೊಡೆಂದು ನಿಷ್ಠಳಂಕ ಮನಸ್ಸಿನಿಂದ ದೇವರನ್ನು ಬೇಡಿಕೊಂಡರೆ ದುರ್ವ್ಯಸನವಾವುದೂ ಸನ್ನಿಧಿಗೆ ಸೋಕೀತೇ ಸ್ವಾಮಿ. ಬಡವನ ಅರಿಕೆಯು ನಿಸ್ಸಾರವೆನ್ನಬಾರದು.”

ಚಂಚಲನೇ–“ಸರಿ, ಸರಿ, ನಿನ್ನ ಜ್ಞಾನೋಪದೇಶವು ಪುನಃ ತಲೆ ದೋರಿತೇನು?”

ವೆಂಕಟಪತಿ–“ಪರಾಕೆ, ದೊಡ್ಡ ದೊಡ್ಡ ರಾಜ್ಯಗಳನ್ನಾಳುವ ಪ್ರಭು ಗಳು ಮಂತ್ರಿಗಳ ಆಲೋಚನೆಯನ್ನು ಯಾವ ಕಾರ್ಯಕ್ಕಾದರೂ ಮುಂದಾ ಗಿತಿಳುಕೊಳ್ಳುವುದೂ ತಾನಾಗಿ ಯಾರನ್ನೂ ಕೇಳದೆಮಾಡದೆ ಒಂದುಕಾರ್ಯ ವನ್ನು ತೊಡಗಿಬಿಟ್ಟ ವೇಳೆಯಲ್ಲಾದರೂ ಮಂತ್ರಿಗಳು ಆಕ್ಷೇಪಿಸಿ ತಮ್ಮ ನ್ಯಾಯವಾದ ಅಭಿಪ್ರಾಯವನ್ನು ತಿಳಿಸಿದರೆ ಅದನ್ನು ಒಪ್ಪಿಕೊಂಡು ನಡಿಯು ವದೂ ಲೋಕರೂಢಿಯಷ್ಟೆ. ಪ್ರಧಾನಿಯು ತನ್ನ ಚಾಕರವೆಂಬ ಒಂದೇ ಕಾರಣ ದಿಂದ ಅವನು ತನಗೆ ಬುದ್ಧಿ ಹೇಳತೊಡಗಿದನೇ ಎಂದು ಅರಸು ಕನಲಿದರೆ ರಾಜ್ಯಭಾರ ಸರಿಯಾಗಿ ನಡೆಯುವದೇ ಸ್ವಾಮೀ? ಚರಣ ಕಿಂಕರನಾದ ನನ್ನ ಮನಸ್ಸಿಗೆ ಕಂಡ ಅಭಿಪ್ರಾಯವನ್ನು ಸನ್ನಿಧಿಗೆ ಸೂಚಿಸಿದ ದೆಶೆಯಿಂದ ನಾನು ಜ್ಞಾನೋಪದೇಶ ಮಾಡನೋಡುತ್ತೇನೆಂದು.. ನೆನಸಿ ಧಿಕ್ಕರಿಸುವದು ನ್ಯಾಯವೋ? ಈ ವಿಚಾರವನ್ನು ಮುಂದಾಗಿ ಮಾಡಬೇಕೆಂಬ ನನ್ನ ವಿನಂತಿ ಯನ್ನು ತಿರಸ್ಕರಿಸಬಾರದು.”

ಚಂಚಲನೇ-“ಅರಸೂ ಪ್ರಧಾನಿಯೂ ಇವರಿಬ್ಬರಿಂದಲೇ ರಾಜ್ಯಭಾರ ನಡೆಯುವದೇನು ಹುಚ್ಚಪ್ಪಾ! ಆರಸಿಗೆ ಯೋಗ್ಯವಾದ ಪಟ್ಟದರಾಣಿ ಇಲ್ಲದೆ ರಾಜ್ಯ ನಡೆದೀತೇ? ಅಷ್ಟು ವಿಚಾರಶೂನ್ಯನಾದ ನಿನ್ನ ಒಣ ಹರಟೆಯನ್ನು ಕೇಳುತ್ತಾ ನಾವು ಸಮಯ ಕಳೆಯಬೇಕನ್ನುವಿಯಾ?”

ವೆಂಕಟಪತಿ-“‌ಸನ್ನಿಧಿಯ ಈ ಕಕ್ಷಿಯ ತಾತ್ಪರ್ಯ ನನ್ನ ಮನಸ್ಸಿಗೆ ಹೊಗಲಿಲ್ಲ. ಅರಸನಿಗೆ ರಾಣಿಯು ಇರುವುದು ಸಹಜವೇ?

ಚಂಚಲನೇ–“ನಾವು ಅರಸು ಪ್ರಧಾನಿ ಎಂಬಂತೆ ಭಾವಿಸುವದಾದರೆ ನಮಗೆ ಆದಿಯಲ್ಲಿ ಒಂದು ರಾಣಿಯನ್ನು ಮಾಡಿಕೊಡು ಆ ಮೇಲೆ ನೀನು ಪ್ರಧಾನಿ ಖರೆ… ನಿನ್ನ ಆಲೋಚನೆಯನ್ನು ನಾವು ತೆಗಿದುಹಾಕಲಾಕೆವು.“

ವೆಂಕಟಪತಿ–“ಪರಾಕೆ! ಘನವಿಚಾರದಲ್ಲಿ ಕುಚೋದ್ಯರೂಪವಾದ ಆಕ್ಷೇಪವು ತರ್ಕಯೋಪಾದಿಯಲ್ಲಿ ತೋರುವುದಲ್ಲದೆ. ಪ್ರಯೋಜನಕ್ಕೆ ಬೀಳುವುದೇ? ಹೆಚ್ಚಿಗೆ ಭಿನ್ನನಿಸಿಕೊಳ್ಖಲಿಕ್ಕೆ ನನ್ನಲ್ಲಿ ಶಕ್ತಿಯಿಲ್ಲ. ನನ್ನ ಸರ್ವಾಪರಾಧಗಳನ್ನು ಕ್ಷಮಿಸಬೇಕೆಂದು ಪ್ರಾರ್ಥಿಸುತ್ತೇನೆ; ಸನ್ನಿಧಿಯ ಆಜ್ಞೆ ಮೀರುವವನಲ್ಲ.”

ಚಂಚಲನೇ–“ಕ್ಷಿತೀಶನು ಸಚಿವನ ಆಲೋಚನೆಯನ್ನನುಸರಿಸಿ ನಡೆ ಯುತ್ತಾನೆ. ನಾವು ಈಗ ಮಾಡಿಕೊಂಡಿರುವ ಸಂಕಲ್ಪವು ರಾಜಕಾರ್ಯ ದಂತಿರುವುದಿಲ್ಲ ತೀರಾ ದೇಹಸಬಂಧವಾಗಿ ನಾವು ಹುಡುಕುವ ಸುಖ ದಾಯಕ ಉಪಾಯ. ಇದಕ್ಕೆ ಮಂತ್ರಾಲೋಚನೆ ಬೇಕೇನಯ್ಯಾ? ಹಿಂದೆ ರಾವಣಾಸುರನು ಮಂತ್ರಿಗಳೂ ಮಿತ್ರರೂ ಬಂಧುಬಾಂಧವರೂ ಹಲವು ಪರಿ ಯಲ್ಲಿ ಹೇಳಿದಬುದ್ಧಿ ಯನ್ನು ಧಿಕ್ಕರಿಸಿ ತನ್ನ ಛಲವನ್ನೇ ಸಾಧಿಸಿದದೆಸೆಯಿಂದ ಅವನಿಗೆ ಸಾಯುಜ್ಯ ದೊರೆಯಲಿಲ್ಲವೇ? ನವನ್ಯಾಕರಣಿಯಾದ ಆ ಖಳನು ಕಡುಮೂರ್ಖನೇನು? ”

ವೆಂಕಟಪತಿ–“ಸನ್ನಿಧಿಯಿಂದ ಆರಿಸಲ್ಪಟ್ಟ ಉಪಮೆಯು ಈಗಿನ ಪ್ರಸ್ತಾಪಕ್ಕೆ ಪ್ರಾಸಂಗಿಕವಾದದ್ದೇ? ವ್ಯಾಕರಣಿಯು ಇನ್ನೊಬ್ಬನ ಹೆಂಡತಿ ಯನ್ನು ಎತ್ತಿಹಾಕುವುದಕ್ಕೋಸ್ಕರ ಕಪಟಸನ್ಯಾಸವೇಷವನ್ನು ಹಾಕಿಕೊಂಡು ಸೀತಾಹರಣವನ್ನು ಮಾಡಿದಪ್ರಯುಕ್ತ, ರಾವಣಸನ್ಯಾಸಿ ಎಂಬ ಗುಣನಾಮ ವನ್ನು ಧರಸಿದನು. ಅಂಥಾ ಸ್ವಭಾವದ ಮಹಾನುಭಾವರನ್ನು ರಾವಣ ಸನ್ಯಾಸಿ ಎಂದು ಕರೆಯುವ ರೂಢಿಬಿದ್ದದೆ. ಸನ್ನಿಧಿಯ ಸತ್ಟ್ರೀರ್ತಿಗೆ ಪ್ರಕತದ ಚಿಂತನೆಯು ಉಪಯುಕ್ತವೆಂದು ತಿಳಿದುಕೊಳ್ಳೋಣಾಗುವುದಾದರೆ ಕೇವಲ ಮೂಢಮತಿಯಾವ ನಾನು ಹೇಳತಕ್ಕದ್ದೇನಿದೆ?”

ಚಂಚಲನೇ–“ಪ್ರಾಪಂಚಿಕ ವ್ಯವಹಾರಗಳಲ್ಲಿ ದೇವರನ್ನು ಕಟ್ಟಿಕೊಳ್ಳ ಬಾರದು ವೆಂಕಟಪತಿ! ದೇವರೇ ಗತಿಯೆಂದು ಅಡಿಗೆಮಾಡದೆ ಕೂತವರಿಗೆ ಅನ್ನ ದೊರೆಯುವುದೇ? ಪುರುಷ ಪ್ರಯತ್ನಗಳಿಂದ ನೆರವೇರುವ ಕೆಲಸಗಳ ಲ್ಲಿಯೂ ಮಾನುಸಿಕ ಇಚ್ಛೆಗಳನ್ನು ಪೂರೈಸುವ ವಿಷಯದಲ್ಲಿಯೂ ದೇವರನ್ನು ಕರೆಯ. ಪ್ರದರಿಂದ ಪ್ರಯೋಜನವಿಷೆಯೇ? ನೀನು ಇಷ್ಟು ಬುದ್ಧಿ ಶೂನ್ಯನೇ??

ವೆಂಕಟಪತಿ… *ಪರಾಕ! ಲೌಕಿಕ ವಿಷಯಗಳಲ್ಲಿ ಒಂದಾದರೂ ಧೈವಾಧೀನಕ್ಕೆ ಹೊರಪಟ್ಟಿರುವುದಿಲ್ಲವೆಂದು ನನ್ನ ಮತ. ನಾಸ್ತಿಕರು ಏನೂ ಆಂದುಕೊಳ್ಳಲ್ಲಿ”

ಚಂಚಲನೇ— “ನಿನ್ನ ಮತವನ್ನೇ ಅನುಸರಿಸೋಣ. ದೈವಾಧೀನಕ್ಕೆ ಯಾವದೊಂದು ವಿಷಯವೂ ಬಾಹಿರವಲ್ಲವಷ್ಟೆ! ಹಾಗಾದ ಮೇಲೆ ನಮ್ಮ ಮನಸ್ಸಿನ ಬೇರೂರಿಹೋದ ವಾಗ್ದೇವಿ ಚಿಂತನೆಯು ದೈವ ಪ್ರೇರಿತವಲ್ಲ ವೆಂದು ನೀನು ಹೇಳುವಿಯಾ)?

ವೆಂಕಟಪತಿ– ಬೆಂಕಿಯಲ್ಲಿ ಕೈ ಹಾಕಿದರೆ ಕೈ ಸುಡುವದೆಂದು ಎಲ್ಲ ರಿಗೂ ಗೊತ್ತಿರುವದು. ಒಬ್ಬನು ಮೂಡತನದಿಂದ ಕೈ ಸುಟ್ಟುಕೊಂಡರೆ ಅದು ದೈವಪ್ರೇರಿತ ಕೃತ್ಯವೆನ್ನಬಹುದೇ? ಒಳ್ಳೆದು ಕೆಟ್ಟದು ಯಾವದೆಂದು ತಿಳಿಯುವ ಬುದ್ದಿಯನ್ನು ದೇವರು ಪ್ರಾಣಿಗಳಗೆಲ್ಲೂ ಸಾಮಾನ್ಯವಾಗಿ ಕೊಟ್ಟಿರುವನು. ಅಂಧಾ ಬುದ್ಧಿಗನುಸಾರವಾಗಿ ನಡೆಯದೆ, ತಪ್ಪಿ ಬೀಳುವ ಮನುಷ್ಯನು ದೇವರನ್ನು ಸರ್ವಧಾ ದೂರ ಕೂಡದು ಯತಿಯು ತಾನು ಆಚರಿಸಬೇಕಾದ ವ್ರತವನ್ನು ಪೂರ್ಣವಾಗಿ ತಿಳಿದು ಗೃಹಸ್ಥ್ರಾಶ್ರಮದ ಸುಖವನ್ನು ತ್ಯಜಿಸಿ, ಸನ್ಯಾಸಕ್ಕೆ ನಿರ್ದೇಶಿಸಲ್ಪಟ್ಟ ಕರ್ಮವನ್ನು ಕೈಕೊಂಡು ಬಳಿಕ ಯಮಶಿಕ್ಷೆಗೆ ಗುರಿಯಾಗುವ ಹಾಗಿನ ವಿಷಯಲಂಪಟತ್ವ ಮುಂತಾದ ದುಷ್ಕರ್ಮಗಳನ್ನು ಮನಸಿಟ್ಟು, ಅದೆಲ್ಲಾ ದೈವಪ್ರೇರಿತ ಬುದ್ಧಿ ಎಂದು ಹೇಳುವದಕ್ಕೆ ಶಾಸ್ತ್ರಸಮ್ಮತವಾದ ಆಧಾರವಿಲ್ಲ. ಆದ ಪ್ರಯುಕ್ತ ಇಂಥಾ ಸನ್ಯಾಸಿಗಳು ತಮ್ಮ ಧರ್ಮವನ್ನುಲ್ಲಂಘಿಸಿ ಪಾಪಕೃತ್ಯಗಳಲ್ಲಿ ಆಸಕ್ತರಾಗು ವದು ಯಮ ಯಾತನೆಗೆ ಗುರಿಯಾಗುವದಕ್ಕೆಂದು ನನ್ನ ಮನಸ್ಸಿಗೆ ತೋರುವ ನ್ಯಾಯ ಸನ್ನಿಧಿಗೆ ಅರಿಕೆ ಮಾಡಿದೆ. ಸೇವಕನ ಮೇಲೆ ಕೃಪೆ ಇರಲಿ.?

ಚಂಚಲನೇ… “ವೆಂಕಟಪತಿ, ನೀನು ಬರೇ ಹೆಡ್ಡ. ಶಿಖಾ ಯಜ್ಞೋ ಪವೀತವನ್ನು ತ್ಯಜಿಸಿದ ಸನ್ಯಾಸಿಗೆ ಯಮಬಾಥೆ ಸರ್ವಥಾ ತಟ್ಟದೆಂಬ ಗುಟ್ಟು ನೀನು ಇದುವರೆಗೂ ತಿಳಿಯಲೇ ಇಲ್ಲ.”

ವೆಂಕಟಪತಿ– “ಈಗ ಅಪ್ಪಣೆಯಾದ ಗುಟ್ಟಿನ ಒಳಗೆ ಇನ್ನೊಂದು ಗುಟ್ಟು ಅದೆ.

ಚಂಚಲನೇ- “ಅದ್ಯಾವದು?”

ವೆಂಕಟಪತಿ-“ತಲೆಯನ್ನು ಬೋಳಸಿಕೊಂಡು ಯಜ್ಞೋಪವೀತ ವನ್ನು ಹರಿದು ಬಿಟ್ಟಾಕ್ಷಣ ಯಮಬಾಧೆಯು ತಟ್ಟದಿರುವದು ನಿಜವಾದರೆ, ಯಮನು ಶ್ರಮುನಿಪಟ್ಟಣವನ್ನುಬೇಗನೇ ಬಿಟ್ಟು ಘಟ್ಟಹತ್ತಬೇಕಾಗುವುದು. ಪಾಪಿಷ್ಠರೆಲ್ಲರೂ ಯಮನ ಹೆದರಿಕೆಯುಳ್ಳವರೆಂದು ಲೋಕವೇ ಬಲ್ಲದು. ಎಂಥಾ ಸಾವಿಯಾದರೂ ತನಗಿಷ್ಟವಿರುವ ಸಕಲ ದುರಾಚಾರವನ್ನು ನಡೆಸಿ, ಅಂತ್ಯಕಾಲದಲ್ಲಿ ಸನ್ಯಾಸವನ್ನು ತಕ್ಕೊಂಡುಬಿಟ್ಟರೆ ಯಮಸದನಕ್ಕೆ ಯಾರೊಬ್ಬನೂ ಹೋಗಲಾರನು. ಹಾಗಾದರೆ ಯಮನ ಉದ್ಯೋಗ ಮಿನಾಹಿ ಯಲ್ಲಿ ಬರುವದಲ್ಲದೆ ಲೋಕದಲ್ಲಿ ಪಾಪಿಗೊಬ್ಬಗಾದರೂ ಪಾಪ ಭಯ ಲೇಶ ವಾದರೂ ಇರದು. ಸನ್ಯಾಸವು ಸ್ವರ್ಗಕ್ಕೆ ಹೋಗುವದಕ್ಕೆ ಸುಂಕಪಾವತಿ ಚೀಟೆಂದು ಎಣಿಸುವದು ಬರೇ ಹುಚ್ಚುತನವೇ ಸರಿ. ಧರ್ಮವನ್ನು ಬಿಟ್ಟು ದುರಾಚಾರದಲ್ಲಿ- ಮಗ್ನನಾದ ಸನ್ಯಾಸಿಗೆ ಯಮಬಾಧೆ ಸರ್ವಥಾ ತಪ್ಪದು.?

ಚಂಚಲನೇ-.. “ಹಾಗಾದರೆ ಸನ್ಯಾಸಿಗೂ ಇತರ ಮಾನವರಿಗೂ ನನೂ ಬೇಧವಿಲ್ಲವೆನ್ನುತ್ತಿಯೋ??

ವೆಂಕಟಪತಿ– “ಅಲ್ಲ, ಸನ್ಯಾಸವು ದೊಡ್ಡ ಪದವಿಯೇ. ಪರಂತು ಕರ್ಮಭ್ರಷ್ಟನಾದ ಸನ್ಯಾಸಿಯು ಇತರ ಪಾಪಿಗಳಿಗಿಂತಲೂ ಕಡೆ. ಅಂಥವನು ಪತಿತನಾಗುವದರಿಂದ ಯಮಯಾತನೆಯು ಅವನಿಗೆ ಒಂದು ದಿವಸಕ್ಕಾದರೂ ಬಿಟ್ಟು ಹೋಗದು.

ಚಂಚಲನೇ– “ಎಂಥಾ ಪಾಪಕ್ಕೂ ಪ್ರಾಯಶ್ಚಿತ್ತ ಉಂಟಷ್ಟೇ. ದುಷ್ಕರ್ಮಿಯಾದ ಸನ್ಯಾಸಿಯು ಸಕಾಲದಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡರೆ ಅವನಿಗೆ ಯಮನ ಶಿಕ್ಷೆಯ ಭಯವೆಲ್ಲಿಯದು??

ವೆಂಕಟಪತಿ– “ಸಕಾಲ ಯಾವದೆಂದು ಅಫ್ಸಣೆಯಾಗಲಿ, ಪರಾಕೆ.?

ಚಂಚಲನೇ– “ಪಾಪಭಯ ಯಾವ ಸಮಯದಲ್ಲಿ ಹುಟ್ಟಿತೋ ಅದೇ ತಕ್ಕ ಕಾಲವೆಂದು ತಿಳುಕೋ.?

ವೆಂಕಟಪತಿ… “ವಾಗ್ದೇವಿಯನ್ನು ವರಿಸಿಕೊಳ್ಳುವದೂ ಅವಳ ಬಯಕೆಯನ್ನು ಈಡೇರಿಸುವೆನೆಂದು ಪಟ್ಟದ ದೇವರ ಮುಂದೆ ಪ್ರಮಾಣ ಪೂರ್ವಕವಾಗಿ ವಾಗ್ದಾನ ಕೊಡುವದೂ ಪಾಪಕೃತೃವಲ್ಲವೆಂಬಂತೆ ಸನ್ನಿಧಿ ಯಿಂದ ಈಗ ತಿಳುಕೊಳ್ಳೋಣಾಗಿಯದೋ ಅಧವಾ ಇಂಧಾ ದುಷ್ಟರ್ಮವು ಪುಣ್ಯಕೆಲಸವೆಂದು ಎಣಿಸೋಣಾಗಿಯದೋ ತಿಳಿಯದು.”

ಚಂಚಲನೇ.-.– “ನಿನ್ನ ಕುತರ್ಕಕ್ಕೆ ನಾವು ಪ್ರತ್ಯುತ್ತರ ಕೊಡಲಾರೆವು ಪಾಪ ಭಯ ಹುಟ್ಟುವ ಪರಿಯಂತರ ಪಾಶ್ಚಾತಾಪಕ್ಕೆ ಅವಕಾಶ ಉಂಟೆಂದು ನಾವು ಮೊದಲೇ ನಿನಗೆ ಅಪ್ಪಣೆಕೊಡಲಿಲ್ಲವೇ?”

ವೆಂಕಟಪತಿ– “ಪ್ರಕೃತ ಸನ್ನಿಧಿಯ ಮನಸ್ಸು ಸೂರೆಗೊಂಡಿರುವ ವಾಗ್ದೇವಿಯ ಚಿಂತನೆಯು ಪಾಪಕೃತ್ಯವೋ ಎಂಬ ಪ್ರಶ್ನೆಗೆ ಸನ್ನಿಧಿಯ ಉತ್ತರ ದೊರಕುವ ತನಕ ನಾನು ಜಿಜ್ಞಾಸವನ್ನು ಕಡೆಹೊಂದಿಸಲಾರೆ.

ಚಂಚಲನೇ-.. “ಅದು ಪುಣ್ಯಕೃತ್ಯನೆಂದು ಹೇಳಲಾಗದು.”

ವೆಂಕಟಪತಿ– “ಹಾಗಾದರೆ ಪಾಪಭಯ ಈಗಲೇ ಹುಟ್ಟಿತು ಪ್ರಾಯ ಶ್ಚಿತ ಮಾಡಿಕೊಳ್ಳುವ ಸಮಯ ಮುಂದಿಲ್ಲ ಸ್ವಾಮಿ.”

ಚಂಚಲನೇ– “ಪಾಪಕೃತ್ಯವನ್ನು ಇನ್ನೂ ಮಾಡಲೇ ಇಲ್ಲ. ವಾಗ್ದೇ ವಿಯು ನಮ್ಮ ಕೈಗೆ ಇನ್ನೂ ಸಿಕ್ಳಲೇ ಇಲ್ಲ. ಪ್ರಾಯಶ್ಚಿತ್ತ ಈಗಲೇ ಮಾಡಿಕೊಳ್ಳಬೇಕಾಗಿ ನೀನೆನ್ನುವ ಮಾತಿಗೆ ಅರ್ಥವದೇಯೋ??”

ವೆಂಕಟಪತಿ– “ಒಂದು ಕೃತ್ಯವು ಪಾಪವೆಂದರಿಯದೆ ಅದನ್ನು ಮಾಡಿ, ಬಿಟ್ಟು, ಅದು ಪಾಪವೆಂದು ತಿಳಿದೆ ಮೇಲೆ ಪಶ್ಚಾತ್ತಾಪ ಸಹಜವಾಗಿ ಉಂಟಾಗುವದು. ಪ್ರಕೃತದ ಪ್ರಸ್ತಾಪದಲ್ಲಿ ಸನ್ನಿಧಿಯಿಂದ ಸಂಕಲ್ಪಿಸಲ್ಪಟ್ಟ ಕಾರ್ಯವು ಪಾಪ ಕೃತ್ಯನೆಂದು ಆದಿಯಲ್ಲಿಯೇ ಸಮಾಧಾನವಾಗಿರುವ ಕಾರಣ ಪ್ರಾಯಶ್ಚಿತ್ತ ಮಾಡತಕ್ಕ ಕಾಲವು ಇದೇ ಸರಿ.”

ಚಂಚಲನೇ- “ಈಗ ನಾವು ಮಾಡತಕ್ಕ ಕೆಲಸವೇನೆಂದು ನಿನ್ನ ತಾತ್ಪರ್ಯ?”

ವೆಂಕಟಪತಿ– “ವಾಗ್ದೇವಿಯ ಪ್ರಸ್ತಾಪವನ್ನು ನಿಶೇಧವಾಗಿ ಬಿಟ್ಟು ಅವಳ ಕುರಿತು ಇಷ್ಟು, ಪರಿಯಂತ ಮನಸ್ಸಿನಲ್ಲಿ ಮಾಡಿಕೊಂಡ ದುಃಸಂಕಲ್ಪವೆಂಬ ಪಾಪವನ್ನು ಮಾನಸಾಂತರಪಡುವದರ ಮೂಲಕ ಪರಿಹರಿಸಿಕೊಳ್ಳ ಬೇಕೆಂಬ ನನ್ನ ಮತ”

ಚಂಚಲನೇ-.- “ವೆಂಕಟಪತಿ! ನಾವು ಪ್ರತಿನಿತ್ಯ ಮಾಡುವ ನಾರಾ ಯಣ ಸ್ಮರಣೆಗಿಂತ ದೊಡ್ಡಪ್ರಾಯಶ್ಚಿತ್ತ ಉಂಟೇನಪ್ಪಾ? ಆಯಾಯ ದಿನ ಮಾಡಲ್ಪಟ್ಟ ಪಾಪವೆಲ್ಲವೂ ಸದಾಕಾಲ ನಡೆಯುವ ಹರಿನಾಮಸ್ಮರಣೆಯಿಂದ ಭಸ್ಮವಾಗಿ ಹೋಗುತ್ತದೆ. ವಾಗ್ದೇವಿಯ ಚಿಂತನೆಯು ಅಂಥಾ ಪ್ರಾಯಶ್ಚಿತ್ತ ಕೈ ಮೀರಿ ಹೋಗುವ ಪಾಪವಲ್ಲವೆಂದು ಚೆನ್ನಾಗಿ ತಿಳುಕೋ. ದೊಡ್ಡ ಬುದ್ಧಿ ವಂತನೆಂಬಂತೆ ಹೆಚ್ಚು ಗಳಹುವದರಿಂದ ನಿನ್ನ ಹುಚ್ಚುತನವೇನಾದರೂ ಮರೆಯಾಗದು. ಇನ್ನೂ ನೀನು ಹೀಗಿಯೇ ಅಧಿಕಪ್ರಸಂಗಮಾಡಿ ಕಾಲ ಹರಣಮಾಡುವದಕ್ಕೆ ನೋಡುತ್ತೀಯಾದರೆ ಬೇಗನೇ ನಮ್ಮ ಎದುರಿನಿಂದ ನಡೆದುಬಿಡು. ವಾಗ್ದೇವಿಯನ್ನು ನಿನ್ನ ಸರಿಮುಖವಲ್ಲದೆ, ಅನ್ಯಥಾ ಕರಿಸಿ ಕೊಳ್ಳುವದಕ್ಕೆ ಆಗುವುದಿಲ್ಲವಾದರೆ ನಿನ್ನನ್ನು ವಾದ್ಯದಿಂದ ತರಿಸಿ ಕೊಳ್ಳು ವೆವು. ಇನ್ನು ನಿನ್ನ ಮುಖಾವಲೋಕನ ನಮಗಾಗಬಾರದು.?

ವೆಂಕಟಪತಿಯ ತರ್ಕದಿಂದ ಚಂಚಲನೇತ್ರರಿಗೆ ಉಂಟಾದ ದೊಡ್ಡ ಸಿಟ್ಟನ್ನು ಸೈರಿಸಲಾರದೆ ಅವರು ಒಡನೆ ಮಂಚದಿಂದೆದ್ದು ಮತ್ತೊಂದು ಕೋಣೆಯ ಒಳಗೆ ಹೋಗಿ ಬಾಗಿಲುಗಳನ್ನು ಮುಚ್ಚಲಿಕ್ಕೆ ತಿರುಗಿ ನಿಂತ ಸಮಯವನ್ನು ನೋಡಿ ವೆಂಕಟಪತಿಆಚಾರ್ಯನು ತನ್ನ ಧಣಿಯ ವಾದಕ್ಕೆ ಅಡ್ಡಬಿದ್ದು, ತಿಳಿಯದೆ ಬಂದ ಅಪರಾಧ ವಿಶಿಷ್ಟವನ್ನು ಒಮ್ಮೆ ಕ್ಷಮಿಸಬೇಕಾಗಿ ಉಭಯ ಹಸ್ತಗಳನ್ನು ಜೋಡಿಸಿ ಬೇಡಿಕೊಂಡಾಗ, ಹೆಚ್ಚು ಎಳೆದರೆ ಹರಿದುಹೋದೀತೆಂಬ ಗಾದೆಯನ್ನು ನೆನಪಿಗೆ ತಂದ, ಚಂಚಲ ನೇತ್ರರು ಅರ್ಧ ಸಿಟ್ಟು ಅರ್ಧ ಸಂತೋಷಚಿತ್ತದಲ್ಲಿದ್ದಂತೆ ತೋರಿಸಿಕೊಂಡು, “ಒಳ್ಳೇದು ನಮ್ಮ ಆಜ್ಞೆಯನ್ನು ಸಾವಕಾಶವಿಲ್ಲದೆ ಅನುಸರಿಸಿದರೆ ನಿನಗೆ ನಾವು ಪೂರ್ವವಶ್‌ ನಡಿಸಿಕೊಂಡು ಹೋಗಲಿಕೈ ಅಭ್ಯಂತರವಾಗದು; ಇನ್ನು ಮುಂದೆಯೂ ನಮಗೇನೇ ಬುದ್ಧಿ ಹೇಳತೊಡಗಿದರೆ ಪ್ರಯಾಸಪಡ ಬೇಕಾಗುವದು, ನೋಡಿಕೋ” ಎಂದು ಗದರಿಸಿಬಿಟ್ಟರು. ಹುಚ್ಚನಂತೆ ಕೋಪ ಮಾಡಿ ಪಾರುಪತ್ಯ ಬಿಟ್ಟುಹೋದರೆ ತನಗಿಂತಲೂ ಅಧಿಕ ಬುದ್ಧಿ ಯವನು ಇನ್ನೊಬ್ಬನು ಕ್ಷಣಾರ್ಧದಲ್ಲಿ ಸನ್ಯಾಸಿಗೆ ಸಿಕ್ಕುವನು, ಮತ್ತು ಹೆಚ್ಚು ಚಾತುರ್ಯದಿಂದ ವಾಗ್ದೇವಿಯನ್ನು ಮಠಕ್ಕೆ ತರಲಿಕೈ ಮಾಡಿದ ವೈನದ ಪ್ರಯೋಜನವು ತನಗೆ ಒಂದಿಷ್ಟಾದರೂ ಸಿಕ್ಕದೆ ಹೋಗುವದೆಂಬ ಭಯದಿಂದ ವೆಂಕಟಪತಿಯು ಕೈಮುಗಿದು ನಿಂತುಕೊಂಡು, ವಾಗ್ದೇವಿ ಯನ್ನು ಅವಳ ಬಳಗದ ಸಮೇತ ಯಾವ ದಿವಸ ಮಠಪ್ರವೇಶಮಾಡಿಸ ಬೇಕೆಂದು ತಿಳಿಯಲಪೇಕ್ಷಿಸಿದನು. ನಾಳೆ ದಿವಸವೇ ಪ್ರಶಸ್ತವೆಂದು ಚಂಚಲನೇತ್ರರೆಂದರು.

ಅನ್ನ ಉಳಿಯಬೇಕಾದರೆ ಇಂಧಾ ಮೂಢ ಸನ್ಯಾಸಿಗೆ ಜ್ಞಾನವನ್ನು ಹೇಳಬಾರದು. ಬೇವಿನ ಎಲೆಯನ್ನು ತಿನ್ನುವವನು ಕಹಿಯಾದ ಕೂಡಲೇ ತಾನೇ ಬಿಡುವನು. ಮುಂದೆ ಬರಬಹುದಾದ ಕೇಡು ನಿವಾರಣೆಗೆ ಮಠದಲ್ಲಿ ಯಥೇಷ್ಟ ದುಡ್ಡಿದೆ. ಸನ್ಯಾಸಿಯ ಉಪ್ಪನ್ನ ಇಷ್ಟು ದಿನ ತಿಂದುಕೊಂಡಿದ್ದ ನೆನಪಿನಿಂದ ಅವನು ವ್ಯರ್ಥವಾಗಿ ಕೆಟ್ಟುಹೋಗದಂತೆ ನ್ಯಾಯವಾದ ಮಾತು ಹೇಳಿದರೆ ಅವನು ಸಿಟ್ಟು ತಾಳಿ ವಿವೇಕಶೂನ್ಯನಾದ ಬಳಿಕ ತನಗೆ ಬಂದ ಆಪತ್ತೇನು? ವಾಗ್ದೇವಿಯು ಮಠಪ್ರವೇಶವಾದ ಮೇಲೆ ಅವಳ ತಂದೆಯು ಅವಳ ಬಲದಿಂದ ಮಠದಲ್ಲಿ ಸರ್ವಾಧಿಕಾರವನ್ನು ನೋಡಲಿಕ್ಕೆ ಪ್ರಯತ್ನಿಸಿ ತನ್ನ ಬಾಯಿಗೆ ಅಡ್ಡಬರುವನೋ ಎಂಬದೊಂದು ಹೆದರಿಕೆಯಿದೆ. ಪರಂತು ಅವನು ಅಷ್ಟು ಪ್ರತಾಪ ನಡಿಸುವ ಸಾಮರ್ಥ್ಯವುಳ್ಳ ವನಲ್ಲ. ತನ್ನ ಸ್ವಾತಂತ್ರ್ಯಕ್ಕೆ ಮೋಡಮುಸುಕದೆಂದು ವೆಂಕಟಪತಿ ಆಚಾರ್ಯನು ಧೈರ್ಯ ಗುಂದದೆ ಮರುದಿವಸವಾಗಬೇಕಾದ ವಧೂಪ್ರವೇಶಕ್ಕೆ ಅವಶ್ಯ ಬೀಳುವ ಸಕಲ ಸಾಹಿತ್ಯಗಳನ್ನು ಒದಗಿಸಿ, ಮರುದಿನ ಪ್ರಾತಃಕಾಲ ವಾಗ್ದೇವಿಯ ಮರೆ ಕಡೆಗೆ ತೆರಳಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗತಿ
Next post ಎಲ್ಲಾದರು ಒಂದು ದಿನ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…