ಹೋಮ ಮಾಡಿದರು
ಹವಿಸ್ಸು ಅರ್‍ಪಿಸಿದರು
ಬೆಣ್ಣೆ ತುಪ್ಪ ಸುರಿದರು
ಅಗ್ನಿಗೆ ಸಂತೈಸಿದರು
ಅಡ್ಡಬಿದ್ದು ಆರಾಧಿಸಿದರು
ಹೊರಗೆ ಬಂದರು
ಸಿಗರೇಟು ಹಚ್ಚಿ ಸೇದಿದರು
ಕೊನೆಗೆ ಉಳಿದ
ಅಗ್ನಿಯ ಚೂರನ್ನು ಪಾಪ
ಕಾಲಲ್ಲಿ ತುಳಿದು ಹೊಸಕಿದರು
*****
ಹೋಮ ಮಾಡಿದರು
ಹವಿಸ್ಸು ಅರ್‍ಪಿಸಿದರು
ಬೆಣ್ಣೆ ತುಪ್ಪ ಸುರಿದರು
ಅಗ್ನಿಗೆ ಸಂತೈಸಿದರು
ಅಡ್ಡಬಿದ್ದು ಆರಾಧಿಸಿದರು
ಹೊರಗೆ ಬಂದರು
ಸಿಗರೇಟು ಹಚ್ಚಿ ಸೇದಿದರು
ಕೊನೆಗೆ ಉಳಿದ
ಅಗ್ನಿಯ ಚೂರನ್ನು ಪಾಪ
ಕಾಲಲ್ಲಿ ತುಳಿದು ಹೊಸಕಿದರು
*****