ಧೂಮಪಾನ

ಹೇ...ಸಿಗರೇಟು ನೀನೆಷ್ಟು ಗ್ರೇಟು ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು ಧುಮ್ಮೆಂದು ಧೂಮವ ಸೂಸುತ್ತಾ ಧೂಳೆಬ್ಬಿಸುವೆ ಧೂಮ ವ್ಯಸನಿಗಳನು ಮೊದ ಮೊದಲು ನಿನ್ನ ನೋಡಲು ನನಗೆ ಕುತೂಹಲದಿ ಆಸೆಯಾಯ್ತು ಚುಂಬಿಸಲು ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು...

ನನಗೋ ಇಂಥ ಹೆಳವು…

ಅಯ್ಯೋ...ನೋಡಲ್ಲಿ ಕಂದನನ್ನು ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ? ಮರಕ್ಕಾತು ಜಡವಾಗಿ ಕೂತಿದ್ದಕ್ಕೇ ಅವನನ್ನೇನು ಕೊರಡೆಂದುಕೊಂಡಿದೆಯೋ? ಕಾಲುಚಕ್ರ ಸೋತ ಹೊತ್ತಲ್ಲಿ ಮರಕ್ಕೊರಗುತ್ತಾನೆ ಕುಸಿದು ಅವನೊಂದಿಗೇ ಮರಕ್ಕೂ ಅದರ ಮೇಲಿನ ಸಕಲೆಂಟು ಜೀವಜಂತುಗಳಿಗೂ ಗಾಢ ಮೈಮರೆವಿನ ವಿಸ್ಮೃತಿ....
ರಾಜಕೀಯ ಶಕ್ತಿಯಾಗಿ ಕನ್ನಡ

ರಾಜಕೀಯ ಶಕ್ತಿಯಾಗಿ ಕನ್ನಡ

ಕಾವೇರಿ ನದಿಯ ನೀರಿಗೆ ರಾಜಕೀಯ ಶಕ್ತಿ ಬಂದಿದೆ; ಯಾಕೆಂದರೆ ಆ ನೀರಿಗೆ ರೈತರಿಗೆ ಬೆಳಕಾಗುವ ಜೀವಶಕ್ತಿಯಿದೆ. ಕೃಷ್ಣಾನದಿಗೂ ಅಷ್ಟೆ, ಕಾವೇರಿಯ ವಿಷಯದಲ್ಲಿ ತಮಿಳುನಾಡಿನ ಜೊತೆ, ಕೃಷ್ಣಾ ವಿಷಯದಲ್ಲಿ ಆಂಧ್ರದ ಜೊತೆ ಜಗಳ ಬಂದಾಗಲೆಲ್ಲ ರೈತರನ್ನೂ...

ಜೋಗುಳ ಹಾಡು

ಜೋಗುಳ ಹಾಡನ್ನು ಲಾಲಿಸು, ಜೋ! ಜೋ! ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ! ಸುಮಲತೆಗಳ ಪರಿಮಳವ ಬಿತ್ತರಿಸಿ, ಕಮಲದ ಕೋಮಲ ಗಂಧವ ಬೆರಸಿ, ಮಂದ ಮಾರುತವು ಬೀಸುತ್ತಿರಲಿನಿಸು, ತಂದೆ, ತಂದಿಹೆನೊಂದು ಮುದ್ದಿನ ಕನಸು. ಮೊದಲೆವೆಗಳನು...

ನೋವಿಲ್ಲದೌಷಧವಿಲ್ಲದಾರೋಗ್ಯ ಮೇಲಲ್ಲವೇ?

ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? - ವಿಜ್ಞಾನೇಶ್ವರಾ *****

ಮಾವು ಬಾಳೆ ತೆಂಗು ಹಲಸು

ಮಾವು ಬಾಳೆ, ತೆಂಗು, ಹಲಸು ರಸದ ಕಬ್ಬು ಬೆಳೆಯಲಿ ಸುತ್ತಮುತ್ತ ಚೈತ್ರ ಚಿತ್ರ ಪ್ರೇಮ ಪತ್ರ ಬರೆಯಲಿ ಜೀವಸೂತ್ರ ಗೆಲ್ಲಲಿ ಸೂರ್ಯ ಚಂದ್ರ ಮುಗಿಲು ಚುಕ್ಕಿ ವಿಶ್ವ ಲಾಲಿ ಹಾಡಲಿ ಹಕ್ಕಿ ಕಂಠ ಹಾಲು...

ವಿಸ್ಮಯ

ಯಾರೋ ಬರೆದ ಕವನ ಕಾಡಿತ್ತು ಎಡೆಬಿಡೆದೆನ್ನ ಮನ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಬೆನ್ನು ಹತ್ತಿದ ನಕ್ಷತ್ರಿಕನಂತೆ ಕಣ್ಣಾಡಿಸಿದೆ ಅರ್ಥವಾಗಲಿಲ್ಲ ನವ್ಯವೋ ನವೋದಯವೋ ಏನೋ ತೋಚಿದ್ದು ಗೀಚಿದ್ದು ಭಟ್ಟಿ ಇಳಿಸಿದ್ದಾರೆ. ಓದಿದೆ ಒಂದಲ್ಲ ಹತ್ತಾರು ಸಲ...
ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ ಕನಸಿನ್ನೆಲ್ಲಿ ಬಹುದವ್ವಾ [ದಿಟವಾದಡೆ-ನಿಜವಾದರೆ] ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು...

ಕುರುಡನ ಕೂಗು

ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೂರುವಿರಾ ? ಅಪಾರ ಗಗನವು ಇರತಿಹುದಂತೆ ! ತಾರಾಗಣದಿಂ ತೋರುವುದಂತೆ ! ಕಾರ್‍ಮೋಡಗಳಿ೦ ಮುಸುಕಿಹುದಂತೆ ! ಚಂದ್ರ ಸೂರ್‍ಯರಲ್ಲಿರುತಿಹರಂತೆ ! ಜಗವನು ಬೆಳಗಲು ನಿಂದಿಹರಂತೆ ! ರಾಹು...

ನೀ ಗಮನಿಸು

ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ ಸಮಯದಲ್ಲಿ ನೆತ್ತಿ ಸವರಿ ಹಾರಿವೆ ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ ದೇವರ ಮನೆಯಲ್ಲಿ ನಂದಾದೀಪ ಉರಿದಿದೆ. ಮರಗಳ ಮೌನಗೀತೆಯನ್ನು ಹಕ್ಕಿಗಳು ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ ಪಾರಿಜಾತ...