ಧೂಮಪಾನ

ಹೇ…ಸಿಗರೇಟು ನೀನೆಷ್ಟು ಗ್ರೇಟು
ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು
ಧುಮ್ಮೆಂದು ಧೂಮವ ಸೂಸುತ್ತಾ
ಧೂಳೆಬ್ಬಿಸುವೆ ಧೂಮ ವ್ಯಸನಿಗಳನು

ಮೊದ ಮೊದಲು ನಿನ್ನ ನೋಡಲು ನನಗೆ
ಕುತೂಹಲದಿ ಆಸೆಯಾಯ್ತು ಚುಂಬಿಸಲು
ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು
ನಿನ್ನೊಳಗೆ ಲೀನವಾಗಿಸಿಬಿಟ್ಟೆ ನನ್ನನ್ನು

ಕೆಲವು ಸಮಯದಲ್ಲಿ ಶೋಕಿಗಾಗಿ ಸೇದಿದೆ
ಹಲವು ಬಾರಿ ಚಿಂತೆ ಮರೆಯಲೆಂದು ಸೇದಿದೆ
ಇನ್ನೂ ಕೆಲವೊಮ್ಮೆ ಒತ್ತಡವ ತಡೆಯದೇ ಸೇದಿದೆ
ಮುಂದೆ ಬಿತ್ತು ಭಾರವೆಲ್ಲ ನನ್ನ ತಲೆಯ ಮೇಲೆಯೇ

ನೀನು ಸುಡುತ್ತಾ ಹೋದೆ ನಿನ್ನ ಅಂದ
ನನ್ನೊಳಗೆ ನಾ ಬೆಂದೆ ನಿನ್ನ ಸೇದುತ್ತಾ
ಮೊದಲು ಅರಿಯಲಿಲ್ಲ ನಾ ಭ್ರಮೆಯಿಂದ
ಹಚ್ಚಿದ ಬೆಂಕಿ ನಿನಗಷ್ಟೇ ಅಲ್ಲ ನನಗೂ ಅಂತ

ಧೂಮಪಾನಿಯಾಗಿ ದಮ್ಮು ಸೇರಿಸಿಕೊಂಡೆ
ಕರಳುಗಳನ್ನು ಸುಟ್ಟು ಕರಕಲಾಗಿಸಿಕೊಂಡೆ
ಮಹಾಮಾರಿ ಕ್ಯಾನ್ಸರನ್ನೂ ಬರಮಾಡಿಕೊಂಡೆ
ನನ್ನ ಸಾವು ಸನಿಹಕೆ ನಾನೇ ಕಾರಣನಾದೆ

ಕುತೂಹಲವು ಆಸೆಯಾಯ್ತು
ಆಸೆಯು ಅಭಿರುಚಿಯಾಯ್ತು
ಅಭಿರುಚಿಯು ಹವ್ಯಾಸವಾಯ್ತು
ಹವ್ಯಾಸವು ಚಟವಾಯ್ತು
ಚಟವು ದುಶ್ಚಟವಾಗಿ ಚಟ್ಟಕ್ಕೆ ಕರೆದೊಯ್ಯಿತಲ್ಲೋ….

ನಾ ಮಾಡಿದ ತಪ್ಪೀಗ ಅರಿವಾದರೇನು ಫಲ
ಬದುಕಿ ಬಾಳಬಲ್ಲೆನೇ ನಾನು ಸಬಲತೆಯಿಂದ
ನನ್ನ ಈ ಬದುಕು ನನಗೆ ಕೊನೆಯಾಗಲಿ
ಧೂಮಪಾನಿಗಳಿಗೆ ನಾ ಮಾದರಿಯಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೋ ಇಂಥ ಹೆಳವು…
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೯

ಸಣ್ಣ ಕತೆ

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ರಾಜಕೀಯ ಮುಖಂಡರು

  ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…