ಅಂದಾನಪ್ಪ ಮತ್ತು ‘ಎಕ್ಸ್‌ಕ್ಯೂಸ್ ಮಿ’!

Published on :

ಮೆಜೆಸ್ಟಿಕ್! ದಿಕ್ಕು ದಿಕ್ಕುಗಳಿಂದ ನೂರು ಕೆಲಸ ನೂರು ಕನಸು ಹೊತ್ತು ರಾಜಧಾನಿಗೆ ಬಂದವರು, ಮಹಾನಗರದ ಯಾವುದೋ ಮೂಲೆಯ ಸೇರಿಕೊಳ್ಳುವ ಧಾವಂತದವರು, ಗಾಜಿನ ಕೋಣೆಯೊಳಗೆ ನಿಂತ ಮಾಸದ ನಗೆಯ ಹುಡುಗಿ- ಕಾಂಕ್ರೀಟು ರಸ್ತೆಯ ಮೇಲೆ ಸರ್ರನೆ ಸರಿದಾಡುವ ಸಾವಿರಾರು ವಾಹನ, ಓಡು ನಡಗೆಯ ಆತುರದವರು, ಸಿನಿಮಾ ಪೋಸ್ಟರು ನೋಡುತ್ತ ಗಂಟೆಗಟ್ಟಲೆ ನಿಂತಲ್ಲಿಯೇ ನಿಲ್ಲುವವರು, ಟ್ರಾವೆಲ್ಸ್ ಏಜೆನ್ಸಿಯ ಹುಡುಗರು, ಸಾಲು ಸಿನಿಮಾ ಮಂದಿರಗಳು… ಇದು ಮೆಜೆಸ್ವಿಕ್! ಕರ್‍ನಾಟಕಕ್ಕೆ ಬೆಂಗಳೂರು ರಾಜಧಾನಿಯಾದರೆ, ಬೆಂಗಳೂರಿಗೆ ಮೆಜೆಸ್ಟಿಕ್ […]

ಔದ್ಯಮಿಕ ಭಾರತದ ಆನಿ ಧೀರೂಬಾಯಿ ಅಂಬಾನಿ

Published on :

ದೇಶದ ಆರ್ಥಿಕ ಶಕ್ತಿಯ ಬುನಾದಿಯಲ್ಲಿ ಎದ್ದು ಕಾಣುವ ಸೈಜುಗಲ್ಲು ಧೀರೂಭಾಯಿ ಅಂಬಾನಿ. ‘ಆನಿ ನಡೆದದ್ದೇ ದಾರಿ’ ಎನ್ನುವಂತೆ ಅಂಬಾನಿ ನಡೆದದ್ದೆಲ್ಲ ಯಶಸ್ಸಿನ ಹೆದ್ದಾರಿ. ಮಹಾತ್ಮರನ್ನು ದೇವತಾ ಮನುಷ್ಯರನ್ನು, ರಾಜಕೀಯ ನಾಯಕರನ್ನು ಅವರ ಜಯಂತಿ-ಪುಣ್ಯತಿಥಿಗಳ ನೆಪದಲ್ಲಿ ಪ್ರತಿವರ್ಷ ನೆನಪಿಸಿಕೊಳ್ಳುತ್ತೇವೆ. ದೇಶವನ್ನು ಕಟ್ಟಿದ, ಸುತ್ತಲ ಪರಿಸರವನ್ನು ಒಪ್ಪಗೊಳಿಸಿದ ಹಿರೀಕರನ್ನು ನೆನಪಿಸಿಕೊಳ್ಳುವುದು ನಾಗರಿಕ ಸಮಾಜದ ಲಕ್ಷಣ ಅನ್ನಿಸುದರಲ್ಲಿ ಎರಡನೇ ಮಾತಿಲ್ಲ ಆದರೆ ದೇಶವನ್ನು ಆರ್ಥಿಕವಾಗಿ ಬಲಪಡಿಸಿದ ಹಾಗೂ ದುಡಿಯುವ ಕೈಗಳಿಗೆ ಕೆಲಸ ಕೊಟ್ಟ ಉದ್ಯಮಿಗಳನ್ನು […]

ಎಂ.ಎಲ್.ಶ್ರೀ: ಹೊಸಗನ್ನಡ ನಾಟಕದ ಸಿರಿ

Published on :

‘ಕನ್ನಡದ ಶೇಕ್ಸ್‌ಪಿಯರ್ ಯಾರು? ಎನ್ನುವ ಪ್ರಶ್ನೆ ಕನ್ನಡ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿನ ಕಠಿಣ ಪ್ರಶ್ನೆಗಳಲ್ಲೊಂದು. ಈ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆಳಗೆ ಹಾಕುವುದೇ ಹೆಚ್ಚು. ಆ ವ್ಯಕ್ತಿ ಆಧುನಿಕ ಕನ್ನಡ ರಂಗಭೂಮಿಗೆ ಕಸುವು ತುಂಬಿದ ಮಹನೀಯರಲ್ಲಿ ಒಬ್ಬರು ಎನ್ನುವ ಕ್ಲೂ ಕೊಟ್ಟು ನೋಡಿ: ಥಟ್ಟನೇ ಟಿ.ಪಿ. ಕೈಲಾಸಂ, ಸಂಸ, ಶ್ರೀರಂಗ, ಗಿರೀಶ್ ಕಾರ್ನಾಡ್ ಮುಂತಾದ ಹೆಸರುಗಳು ಒಂದರ ಮೇಲೆ ಒಂದರಂತೆ ಕೇಳಿಸುತ್ತವೆ. ‘ಕನ್ನಡದ ಶೇಕ್ಸ್‌ಪಿಯರ್’ ಎನ್ನುವ ಕೀರ್ತಿಗೆ ಭಾಜನರಾದವರು ಎಂ.ಎಲ್. […]

ದೇವರುಗಳ ನಡುವಿನ ಮನುಷ್ಯ

Published on :

ಅಪ್ಪನಿಗೆ ಹುಷಾರಿಲ್ಲ ಎನ್ನುವ ದೂರವಾಣಿ ಕರೆಯ ಬೆನ್ನೇರಿ ಆಸ್ಪತ್ರೆ ತಲುಪುವ ವೇಳೆಗಾಗಲೇ ಅಪ್ಪ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅದಾದ ಮೂರೇ ದಿನಗಳಲ್ಲಿ ನಮ್ಮ ಪಾಲಿಗೆ ನೆನಪಾಗಿಹೋದರು. ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಎದೆಯನ್ನು ಯಾರೋ ಒತ್ತಿಹಿಡಿದಂತೆ ಕಸಿವಿಸಿ. ಅಳಬೇಕೆಂದರೂ ಕಣ್ಣು ಒದ್ದೆಯಾಗುತ್ತಿಲ್ಲ ನಡೆಯುತ್ತಿರುವುದು ಯಾರದೋ ಅಂತ್ಯಸಂಸ್ಕಾರ ಈ ಸಂಸ್ಕಾರ ಕಾರ್ಯಕ್ಕೆ ಬರಲು ಅಪ್ಪ ಯಾಕೆ ತಡಮಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಅಪ್ಪನನ್ನು ಮಣ್ಣು ಮಾಡಿ ಬಂದ ಕೆಲವೇ ದಿನಗಳಲ್ಲಿ ರಾಜಕುಮಾರ್ ನಿಧನರಾದರು. ರಾಜಕುಮಾರ್ ದೇಹವನ್ನು […]

ಬೆಳ್ಳಿ ಮೀಸೆಯ ಮಗು

Published on :

ತುಳುನಾಡಿನ ಕೇಂದ್ರಬಿಂದು ಮಂಗಳೂರಿನಲ್ಲಿ ಜನಿಸಿದ ಎಂ.ಗೋವಿಂದ ಪೈ (ಜನನ: ೧೮೮೩ ರ ಮಾರ್ಚ್ ೨೩) ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕ, ಭಾಷಾತಜ್ಞರಾಗಿ ‘ಸಾರಸ್ವತ ಲೋಕದಲ್ಲಿ ತಮ್ಮ ಅಚ್ಚಳಿಯದ ಛಾಪು ಮೂಡಿಸಿದವರು. ಮಹತ್ವದ ಲೇಖನಗಳ ಮೂಲಕ ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ವಕ್ತಾರರಾಗಿ ಕೆಲಸ ಮಾಡಿದವರು. ಕನ್ನಡದ ಮಹತ್ವದ ಕವಿಗಳ ಪಟ್ಟಿಯಲ್ಲಿ ಪೈ ಅವರಿಗೆ ಮೊದಲ ಸಾಲಿನಲ್ಲೇ ಸ್ಥಾನ. ಸಂಖ್ಯಾದೃಷ್ಟಿಯಲ್ಲಿ ಅವರದ್ದು ವಾಮನ ಸಾಧನೆ. ಗುಣಮಟ್ಟದಲ್ಲಿ ತ್ರಿವಿಕ್ರಮ. ಪೈ ಅವರ ಪ್ರತಿಭಾವಿಲಾಸದ ಉತ್ತುಂಗದ […]

ದೇಸೀ ಕಿಟ್ಟೆಲ್

Published on :

‘ಕನ್ನಡ ಸಾಹಿತ್ಯ ಚರಿತ್ರೆ’ ಎಂದರೆ ಮೊದಲು ನೆನಪಾಗುವುದು ರಂ.ಶ್ರೀ.ಮುಗಳಿ ಆವರ ‘ಕನ್ನಡ ಸಾಹಿತ್ಯ ಚರಿತ್ರೆ’. ಆನಂತರ ಪ್ರೊ ಎಂ. ಮರಿಯಪ್ಪ ಭಟ್ಟರ ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’. ಮರಿಯಪ್ಪ ಭಟ್ಟರ ಕೃತಿ ಗಾತ್ರದಲ್ಲಿ ಚಿಕ್ಕದು; ಗುಣದಲ್ಲಿ ಮುಗಳಿ ಅವರ ಕೃತಿಯಷ್ಟು ಸಾಹಿತ್ಯ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರವಾಗಿದೆ. ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’ ಯ ನಂತರ ಮತ್ತೇನು? ‘ನಿಘಂಟು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರಂತೆ’ ಎನ್ನುವ ಒಂದು ಸಾಲಿನ ವಿನಃ ಮರಿಯಪ್ಪ […]

ತೀರ್ಥರೂಪು ನಂ ಶ್ರೀಕಂಠಯ್ಯ

Published on :

ಕನ್ನಡಕ್ಕೆ ಶ್ರೀಕಂಠಯ್ಯಂದಿರು ಇಬ್ಬರು. ಒಬ್ಬರು ಬಿಎಂಶ್ರೀ-ಮತ್ತೊಬ್ಬರು ತೀನಂಶ್ರೀ- ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ. ಮೊದಲಿನವರು ‘ಕನ್ನಡದ ಕಣ್ವ’; ಎರಡನೆಯವರು ‘ಕನ್ನಡದ ಕಲ್ಪವೃಕ್ಷ’. ತೀನಂಶ್ರೀ ಅವರನ್ನು ನಮ್ಮ ಗೆಳೆಯರ ಗುಂಪಿನಲ್ಲಿ ‘ತೀರ್ಥರೂಪು ನಂ ಶ್ರೀಕಂಠಯ್ಯ’ ಎಂದು ಕರೆಯುತ್ತಿದ್ದುದಾಗಿ ಗೊರೂರು ರಾಮಸ್ವಾಮಿ ಆಯ್ಯಂಗಾರ್ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ. ತೀನಂಶ್ರೀ ಆವರ ‘ಕನ್ನಡ ಬದುಕು’ ಗಮನಿಸಿದರೆ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿಕ್ಕೆ ಇದಕ್ಕಿಂಥ ಸಮರ್ಪಕ ವಿಶೇಷಣ ಇನ್ನೊಂದು ಸಿಗದು. ರಾಷ್ಟಕವಿ ಜಿ.ಎಸ್.ಶಿವರುದ್ರಪ್ಪ ಅವರಿಗೂ ತೀನಂಶ್ರೀ ಬಗ್ಗೆ ಅಪಾರ […]

Rxನಗೆಗುಳಿಗೆ, 1-1-1ಡಾ.ಎಂ.ಶಿವರಾಂ

Published on :

‘ಮನುಷ್ಯ ಸಮಾಜಕ್ಕೆ ಋಣಿಯಾಗಿಯೇ ಜನಿಸುತ್ತಾನೆ. ಸಮಾಜದ ಋಣ ತೀರಿಸಬೇಕಾದುದು ಅವನ ಕರ್ತವ್ಯ’. ಇದು ಡಾ. ಎಂ. ಶಿವರಾಂ ಅವರ ಮಾತು; ಮನುಷ್ಯತ್ವದ ಬಗ್ಗೆ ನಂಬಿಕೆಯುಳ್ಳ ಯಾರು ಬೇಕಾದರೂ ಆಡಬಹುದಾದ ಮಾತು. ವಿಪರ್ಯಾಸ ನೋಡಿ: ಮಾತನಾಡುವುದು ಯಾವಾಗಲೂ ಸುಲಭ: ಮಾತನ್ನು ಕ್ರಿಯೆಗೆ ತರುವುದರಲ್ಲೇ ಘನತೆ ಅಡಗಿರುವುದು. ಇಂಥ ಘನತೆ ಡಾ. ಶಿವರಾಂ ಅವರದಾಗಿತ್ತು. ಡಾ.ಶಿವರಾಂ, ಅರ್ಥಾತ್ ನಗೆರಸಿಕರ ಪಾಲಿನ ‘ರಾಶಿ’ ಸಮಾಜದ ಋಣವನ್ನು ತೀರಿಸಲು ಎರಡು ರೀತಿಗಳಲ್ಲಿ ವೃತ್ತಿ ಹಾಗೂ ಪ್ರವೃತ್ತಿಯ […]

ಕನ್ನಡ ಸಂಸ್ಕೃತಿ ರೂಪಿಸಿದ ಚಿ.ಶ್ರೀ.

Published on :

ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ ಅನುಭವಕ್ಕೆ ಸಂಬಂಧಿಸಿದ್ದು. ಆರ್ದ್ರತೆಯ ಈ ಆನುಭವ ಆ ಕ್ಷಣಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಇಂಥ ಸ್ಮರಣೆಯ ಅನುಭವಗಳು ನಮ್ಮನ್ನು ಮಾನವೀಯಗೊಳಿಸುತ್ತವೆ; ಆ ಮೂಲಕ ನಮ್ಮೊಳಗಿನ ಕೆಡುಕನ್ನು ಕಿಂಚಿತ್ತಾದರೂ ತೊಳೆಯುತ್ತವೆ ಎನ್ನುವುದು ನನ್ನ ನಂಬಿಕೆ. ರಾಜುಮೇಷ್ಟ್ರು- ಚಿ.ಶ್ರೀನಿವಾಸರಾಜು ಅವರ ಸ್ಮರಣೆ ಕೂಡ ನನ್ನ ಪಾಲಿಗೆ ಯಾತನೆಯ […]

ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು

Published on :

ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು ಬೆಂಗಳೂರಿಗೆ ಬರುವುದು ಯಾತಕ್ಕಾಗಿ? ಈ ಬಗ್ಗೆಯೂ ಒಂದು ಜೋಕಿದೆ. ಆ ಜೋಕಿನ ಪ್ರಕಾರ, ಅಮೇರಿಕನ್ನರು ಬೆಂಗಳೂರಿಗೆ ಬರಲು ಕಾರಣಗಳು ಮೂರು: ಮೊದಲನೆಯದು ಮದುವೆಯಾಗಲು, ಎರಡನೆಯದು ಸೈಟು ಕೊಳ್ಳಲು, ಮೂರನೆಯದು ಪುಸ್ತಕ ಬಿಡುಗಡೆ ಮಾಡಲು. ಅಮೇರಿಕನ್ನಡಿಗ ಪಿ.ಎನ್.ಶ್ರೀನಿವಾಸ್ ಅವರಿಗೆ ಮೇಲಿನ ಜೋಕುಗಳು ಅಷ್ಟಾಗಿ ಹೊಂದುವುದಿಲ್ಲ. ಬಂಧುಮಿತ್ರರ […]