
ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು...
ಒಂದಾನೊಂದು ಕಾಡಿನಲ್ಲಿ ಕರಾಲಕೇಸರನೆಂಬ ಸಿಂಹವೊಂದಿತ್ತು. ಅದಕ್ಕೆ ಧೂಸರಕನೆಂಬ ಒಂದು ನರಿಯು ಆಳಾಗಿ ಇತ್ತು. ಆ ಸಿಂಹವು ಒಮ್ಮೆ ಒಂದು ದೊಡ್ಡ ಕೊಂಬಿನ ಆನೆಯೊಡನೆ ಹೋರಾಡುವಾಗ ಕೊಂಬಿನ ಏಟು ಬಿದ್ದು ಗಾಯವಾಗಿ ಮೇಲಕ್ಕೇಳಲಾರದೆ ಬಿದು ಹೋಯಿತು. ಅದು ಹಾ...
ಒಂದಾನೊಂದು ಕೊಳದಲ್ಲಿ ಗಂಗದತ್ತನೆಂಬ ಮಂಡೂಕ (ಕಪ್ಪೆ) ರಾಜನಿದ್ದನು. ಅವನ ದಾಯಾದಿಗಳು ಕೆಲವರು ಅವನನ್ನು ರೇಗಿಸಿದರು. ಆಗ ಅವನಿಗೆ ಎನ್ನಿಸಿತು: “ಈ ದಾಯಾದಿಗಳಿಗೆ ತಕ್ಕಂತೆ ಮಾಡಬೇಕು.” ಕೇಳಿಲ್ಲವೆ? ಅಪಾಕಾರ ಉಪಕಾರ ಮಾಡಿರುವ ಶತ್ರುಮಿತ್ರರ...
ಸಿಕ್ಕಿದ್ದು ಹೋಯಿತು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಎಂಬ ಮೊದಲನೆಯ ತಂತ್ರವು. ಮಾಡುತಿರುವ ಕಾರ್‍ಯದಲ್ಲಿ| ಬುದ್ದಿ ಲೋಪವಾಗದಿರಲು|| ನಿಜದಿ ವಿಪದ ದಾಂಟುವಂ | ಕಪಿಯು ಬದುಕಿ ಬಂದ ತೆರದೊಳು ||೧|| ಮೊಸಳೆಯ ಕಥೆ ...
ಪೀಠಿಕೆ ದೇವತೆಗಳೆಲ್ಲರೂ ನಮ್ಮನ್ನು ಕಾಪಾಡಲಿ. ನೀತಿಶಾಸ್ತ್ರವನ್ನು ಮಾಡಿದ ಮನು, ವಾಚಸ್ಪತಿ, ಶುಕ್ರ, ಪರಾಶರ, ವ್ಯಾಸ, ಚಾಣಕ್ಯ, ಮೊದಲಾದವರಿಗೆ ನಮಸ್ಕಾರವು. ವಿಷ್ಣು ಶರ್‍ಮನು ಸಕಲ ಅರ್‍ಥ ಶಾಸ್ತ್ರದ ಸಾರವನ್ನೆಲ್ಲಾ ಚೆನ್ನಾಗಿ ಯೋಚನೆ ಮಾಡಿ, ಅದಷ...


















