Home / ಬಾಲ ಚಿಲುಮೆ / ಕಥೆ / ಅರಸು ಮಂತ್ರಿಗಳ ಕಥೆ

ಅರಸು ಮಂತ್ರಿಗಳ ಕಥೆ

ನಂದನೆಂಬ ಒಬ್ಬಾನೊಬ್ಬ ರಾಜನು ಇದ್ದನು. ಸಮುದ್ರಗಳವರೆಗಿನ ಭೂಮಿಯೆಲ್ಲವೂ ಆತನದು. ಆತನಿಗೆ ವರರುಚಿಯೆಂಬ ಒಬ್ಬ ಮಂತ್ರಿಯಿದ್ದನು. ಆತನು ಸರ್ವಶಾಸ್ತ್ರಗಳನ್ನೂ ಬಲ್ಲವನು.
ಆ ಮಂತ್ರಿಯು ಒಂದು ದಿನ ಹೆಂಡತಿಯೊಡನೆ ಸರಸವಾಡುತ್ತಾ ಇರುವಾಗ ಅವಳಿಗೆ ಕೋಪ ಬಂತು. ಆತನು ಏನು ಮಾಡಿದರೂ ಅವಳು ಕೋಪವನ್ನು ಬಿಡಲಿಲ್ಲ. ಆಗ ಆತನು “ಏನು ಮಾಡಿದರೆ ನಿನ್ನ ಕೋಪವು ತೀರುವುದು? ಅದನ್ನಾದರೂ ಹೇಳು?” ಎಂದು ಕೇಳಿದನು. ಅವಳು “ನೀನು ತಲೆಯನ್ನು ಇವೊತ್ತೇ ಬೋಳಿಸಿಕೊಂಡು ನನ್ನ ಕಾಲಿಗೆ ಬೀಳಬೇಕು” ಎಂದಳು. ಆ ದಿನ ಅಮಾವಾಸ್ಯೆ. ಅಮಾವಾಸ್ಯೆ, ಹುಣಿಮೆ, ಸಂಕ್ರಮಣ, ಇವು ಪರ್ವಗಳು. ತಿಳಿದವರು ಯಾರೂ ಆ ದಿನಗಳಲ್ಲಿ ತಲೆಯನ್ನು ಬೋಳಿಸಿಕೊಳ್ಳುವುದಿಲ್ಲ. ಆದರೂ ವರರುಚಿಯು ಹೆಂಡತಿಗೆ ಸಂತೋಷವಾಗಲೆಂದು ತಲೆಯನ್ನು ಬೋಳಿಸಿಕೊಂಡು ಬಂದು ಅವಳ ಕಾಲಿಗೆ ಬಿದ್ದನು. ಅವಳಿಗೆ ಸಂತೋಷವಾಯಿತು: ಪ್ರಸನ್ನಳಾದಳು.
ಅತ್ತ ಅರಸನ ಹೆಂಡಿತಿಯೂ ಹೀಗೆಯೇ ಯಾವುದೋ ಕಾರಣಕ್ಕಾಗಿ ಕೋಪ ಮಾಡಿಕೊಂಡಳು. ಅರಸನೂ ಹೆಂಡಿತಿಯನ್ನು “ಏನು ಮಾಡಿದರೆ ಪ್ರಸನ್ನಳಾಗುವೆಯೋ ಹೇಳು” ಎಂದು ಕೇಳಿದನು. ಅವಳು “ನೀನು ಕುದುರೆಯಂತೆ ಬಾಯಿಗೆ ಕಡಿವಾಣ ಹಾಕಿಸಿಕೊಂಡು, ನನ್ನನ್ನು ಬೆನ್ನಿನ ಮೇಲೆ ಕುಳ್ಳರಿಸಿಕೊಂಡು ಕುದುರೆಯಂತೆ ಕೆನೆಯುತ್ತ ಓಡಬೇಕು.” ಎಂದಳು. ಅರಸನೂ ಹಾಗೆಯೇ ಮಾಡಿದನು.
ಮರುದಿನ ದೊರೆಯನ್ನು ಕಾಣುವುದಕ್ಕೆ ಮಂತ್ರಿಯು ಬಂದನು. ಅರಸನು ಮಂತ್ರಿಯು ತಲೆ ಬೋಳಿಸಿಕೊಂಡಿರುವುದನ್ನು ನೋಡಿ ಆಶ್ಚರ್ಯಪಟ್ಟು, “ಏನು ಮಂತ್ರಿಗಳೇ, ಪರ್ವಕಾಲದಲ್ಲಿಯೂ ಮುಂಡನವೇ?” ಎಂದನು. ಆತನು ನಗು ನಗುತ್ತಾ “ಮಹಾಸ್ವಾಮಿ, ಅರಸನು ಕುದರೆಯಂತೆ ಕಡಿವಾಣ ಕಚ್ಚಿಕೊಂಡು ಕೆನೆಯುತ್ತಾ ತಿರುಗಿದ ದಿವಸ ಪರ್ವವಾದರೂ ಮುಂಡನವಾಗಬಹುದು” ಎಂದನು. ಅರಸನು ಸುಮ್ಮನಾದನು.
ಅದರಿಂದ ಎಲೆ ದುಷ್ಟ ಮೊಸಳೆಯೇ, ನೀನೂ ನಂದವರ ರುಚಿಗಳಂತೆ ಸ್ತ್ರೀ ವಶನಾದವನು. ಒಂದು ಉಪಾಯ ಮಾಡಿ ನನ್ನನ್ನು ವಧ ಮಾಡಲು ಕರೆದುಕೊಂಡೂ ಹೋದೆ: ಆದರೆ ನಿನ್ನ ವಾಗ್ದೇಷದಿಂದಲೇ ನಿನ್ನ ಕೆಲಸ ಕೆಟ್ಟಿತು. ಕೇಳಿಲ್ಲವೇ?
ಶುಕ ಸಾರಿಕೆಗಳ ಬಂದಿಪುದೇಕೆ? ನುಡಿವುದರಿಂ ಬಂಧನವವಕೆ ॥ 
ಬಕವನು ಬಂಧಿಸದಿರುವುದದೇಕೆ? ನುಡಿಯದು ಬಂಧನವಿಲ್ಲದಕೆ ॥೨೨॥ 
ಮತ್ತು, 
ಹುಲಿಯಚರ್ಮವ ಹೊದ್ದುಕೊಂಡು | 
ಭೀತಿತೋರುವ ರೂಪುಗೊಂಡು 
ಮೇಯುತಿದ್ದಾ ಕತ್ತೆಗಂದು | 
ಕೂಗಿಕೊಂಡುದೆ ಮೃತ್ಯುವಾಯ್ತು ॥ ೨೩ ॥ 
ಮೊಸಳೆಯು… “ಅದು ಹೇಗೆ?” ಎನ್ನಲು ಕಪಿಯು ಹೇಳಿತು.
*****
ಹುಲಿಯಾಗಿದ್ದ ಕತ್ತೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...