Home / ಹಾಸ್ಯ ಪ್ರಬಂಧಗಳು-ಕೌಜುಲಗಿ ಹಣಮಂತರಾಯ

Browsing Tag: ಹಾಸ್ಯ ಪ್ರಬಂಧಗಳು-ಕೌಜುಲಗಿ ಹಣಮಂತರಾಯ

ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ ಭಂಗಾರದ್ದೇನು ತಪ್ಪು? ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ ಮಣ್ಣೇನು ಮಾಡೀತು? ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ ಕಟ್ಟೇನು ಮಾಡ್ಯಾವು? ನಾನು ಗುಣಹೀನನಾದರೆ, ದೇವಾ ನೀನು ಹೊಣೆಗಾರನು. ಒಬ್ಬ...

ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾಗಿಯೂ ನಮ್ಮ ಊರಿನ ಪರಿಸ್ಥಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ ಇರುವದಿಲ್ಲ,ಐದಾರು ಸಾವಿರ ಜನವಸತಿ ನಮ್ಮೂರಿನದು. ಇತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ ಎಲ್ಲ ...

ನಾನು ಸತ್ತಿರುವೆನೆಂದು ಜನರು ಅನ್ನುತ್ತಾರೆ. ದುಃಖ ಪಡುತ್ತಾರೆ. ಕೆಲವರು ದುಃಖಬಡುವವರಿಗೆ ಸಮಾಧಾನದ ಮಾತು ಹೇಳುತ್ತಾರೆ. ಹೀಗಿದ್ದರೂ ನಾನು ಸತ್ತಿಲ್ಲ. ಜೀವದಿಂದಿರುವೆನೆಂದು ನನಗೆ ಅನಿಸುವದು. ಬಹು ಜನರ ಮತವು ನಾನು ನಿಜವಾಗಿ ಮೃತಪಟ್ಟನೆಂದು. ಆದ...

ಗಾಂಧಿ ಯುಗದಲ್ಲಿ ಏನು ಆದೀತು ಏನು ಆಗಲಿಕ್ಕಿಲ್ಲ! ಇದರ ಕಲ್ಪನೆ ಸಹ ಮಾಡುವದಾಗುವದಿಲ್ಲ. ಬಾಹ್ಯದೃಷ್ಟಿಗೆ ಅತ್ಯಂತ ಸ್ವಾರ್ಥಿಗಳೆಂದು ಹೆಸರಾದ ಜನರು ತಮ್ಮ ಮನೆ ಮಕ್ಕಳ ಮೇಲೆ ತುಳಿಸಿಪತ್ರ ಇರಿಸಲೂ ಸಿದ್ಧವಾಗಿರುವದನ್ನೂ ಎಷ್ಟೊ ಹೇಡಿಗಳು ಇಂದು ತಮ್ಮ...

ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ ಯಾರಾದರೂ ಬಂದು ಮುಂದೆ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ ನೀವು ನಂಬುತ್ತಿದ್ದಿರೋ? ನೀವೇ ಏಕೆ ಈ ಭವಿಷ್ಯವನ್ನು ಆ ಕಾಲದ ಮಹಾ ಮಹಾ ಮೇಧಾವಿಗಳು ಸಹ ನಂಬುತ್ತಿದ್ದಿಲ್ಲ. ನಿಮ್...

ಅಮೀನಗಡದ ಸಂತೆ ದೊಡ್ಡದು. ಸುತ್ತಲಿನ ಇಪ್ಪತ್ತು ಹರದಾರಿ ಇಷ್ಟು ದೊಡ್ಡ ದನಗಳ ಸಂತೆ ಕೊಡುವದಿಲ್ಲ. ಅದರಲ್ಲಿ ಈ ವರ್ಷ ಬರ ಬಿದ್ದು ದುರ್ಭಿಕ್ಷಾದ್ದರಿಂದ ದನದ ಸಂತೆಗೆ ಮತ್ತಿಷ್ಟು ಕಳೆ ಏರಿತ್ತು. ಈ ಹೆಸರಾದ ಸಂತೆಯಲ್ಲಿ ಮತ್ತಾವ ವಸ್ತುಗಳನ್ನು ಕೊಳ್...

ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ...

(ಒಂದು ಹೊಸ ಮಾದರಿಯ ಸಲಹೆ) ನಮ್ಮ ಬಡದೇಶದಲ್ಲಿಯ ಜನರ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಇಚ್ಛೆಯು ಸರಕಾರದ ಹೃದಯದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಹೆಜ್ಜೆ ಹೆಜ್ಜೆಗೆ ಹಣದ ಕೊರತೆಯು ಅಡ್ಡಬರುತ್ತದೆ. ಯಾವದೇ ಕೆಲಸವನ್ನು ಕೈಕೊಳ್ಳಬೇಕಾದರೂ “ಸರ್ವಾ...

ಅಪ್ಪಾ ಸಾಹೇಬರ ಭಾಷಣ (ಮಹಾರಾಷ್ಟ್ರ ಸಾಹಿತ್ಯ ಸಮ್ಮೇಲನ) ದಾದಾಸಾಹೇಬ, ತಾತ್ಯಾಸಾಹೇಬ, ಕಾಕಾಸಾಹೇಬ, ಬಾಪೂಸಾಹೇಬ ಅಣ್ಣಾಸಾಹೇಬ ಹಾಗೂ ಪ್ರತಿನಿಧಿ ಬಂಧುಭಗಿನಿಯರೆ, ಬೆಳಗಾವಿ ಶಹರದ ಮರಾಠಿ ಮಾತನಾಡುವವರ ಪರವಾಗಿ ಅತ್ಯಾನಂದದಿಂದ ಇಂದು ತಮ್ಮೆಲ್ಲರಿಗೆ ...

ಕೇವಲ ನೈತಿಕ ಅಥವಾ ಆರ್ಥಿಕ ದೃಷ್ಟಿಯನ್ನಿಟ್ಟು ಯಾವದೊಂದು ರಾಷ್ಟ್ರವು ಅಥವಾ ಸಮಾಜವು ಉನ್ನತಿ ಹೊಂದಿರುತ್ತದೆಂದು ಹೇಳುವದು ಸಮಂಜಸವಾಗಲಾರದು. ಸಮಾಜದ ಅಥವಾ ರಾಷ್ಟ್ರದ ಸ್ವಘಟಕಾವಯವಗಳು ಸುಸಂಘಟಿತವಿದ್ದರೆ ಮಾತ್ರ, ಅದಕ್ಕೆ ಉಚ್ಚರಾಷ್ಟ್ರ ಅಥವಾ ಸಮಾ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....