ನಾನು ನನ್ನನು ತೊರೆದೆ ಧ್ಯಾನ ಗಾನದಿ ಬೆರೆದೆ ಭಾನವೇರಿತು ಹರಿದು ಸಕಲ ಪರದೆ ಭಾವಭಕ್ತಿಯ ಭರದೆ ಜೀವ ಅರ್‍ಪಿಸಿ ಕರೆದೆ ಸಾವುನೋವಿನ ತಡೆಯನೊಡೆದು ಮೆರೆದೆ ಆತನಾಡುವ ಲೀಲೆ ಭಿತ್ತಿಯಿಲ್ಲದ ಶಾಲೆ ಮಾತು ಮೌನದ ಜ್ವಾಲೆ...
ಬಾವಿಕೆರೆ ಹೊಳೆಹಳ್ಳ ಕುಂಟೆಕಾಲುವೆ ನೀರ ಕುಡಿಕುಡಿದು ಸಾಕುಸಾಕಾಯಿತೆನಗೆ ಯಾವ ಹೊಂಡದೊಳಿಳಿದು ಎಷ್ಟು ಈಂಟಿದರು ಸಹ ತೀರಲಾರದ ತೃಷೆಯು ಒಳಗೆ ಒಳಗೆ ಒಮ್ಮೆ ಕುಡಿದರೆ ಸಾಕು ತಿರುಗಿ ತೃಷೆ ತಾನೆಂದು ಸುಳಿಯಬಾರದು ಜೀವಶುಕದ ಮುಂದೆ ಒಮ್ಮೆಯಾದರು...