Home / ಭೂಮಿ

Browsing Tag: ಭೂಮಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ ತುಂಬಿ ಹರಿಯುತ್ತಿದ್ದ ನದಿಗ...

ಚಂದ್ರ ಕಾಯುತ್ತಾನೆ ರಾತ್ರಿಗಾಗಿ ಹಗಲು ಅವನಿಗೆ ಬೆಲೆಯಿಲ್ಲ ಸೂರ್‍ಯ ಕಾಯುತ್ತಾನೆ ಹಗಲಿಗಾಗಿ ರಾತ್ರಿ ಅವನಿಗೆ ಹುಗಲಿಲ್ಲ ಭೂಮಿ ಕಾಯುತ್ತಾಳೆ ಈ ಇಬ್ಬರಿಗಾಗಿ ಸರಿದಿಯಲ್ಲಿ ಬರುವ ಈ ಪ್ರಿಯಕರರ ಪಾಳಿಗಾಗಿ ಒಬ್ಬನದೋ ಪ್ರಖರ ಪುಂಜಧಾರೆ ಇನ್ನೊಬ್ಬ ಅಮೃ...

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ ಮೋಹಿಸುವುದೇ ಒಂದು ತೆವಲು ಬದುಕ ಮೋಹಿಸುತ್ತೇವೆ ಬದುಕಲು ಮೋಹಿಸುತ್ತೇವೆ, ಮೋಹದಿಂದಲೇ ಉಸಿರು ಅದರಿಂದಲೇ ಬಸಿರು ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು ಬರೆಯುವುದನ್ನು ಮೋಹಿಸದೇ ಹಡೆಯುವುದು ಹೇಗೆ? ಅಕ್ಷರ ಮ...

ನಾನು ಭೂಮಿ; ಭೂಮಿ ಕಾಯುವುದಿಲ್ಲ ನೀನು ಮಳೆ. ನೀನು ಕಾಯುತ್ತೀಯೆ, ಕಾಯಬೇಕು ನೀನು ಮುಗಿಲು ನಾನು ನೆಲ ಎಂದು ಒಂದು ಗಂಡು ಹಾಡಿದಂತಲ್ಲ ನಮ್ಮಿಬ್ಬರ ಯುಗಯುಗಗಳ ಈ ಬಂಧ ನಾನು ಭೂಮಿ, ಭೂಮಿಯೇ ಹಾಡಬೇಕು ನಾನು ಭೂಮಿ, ನಾನು ಬರೀ ನೆಲವಲ್ಲ. ನಾನು ತಿರುಗ...

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. -ಜಾನಪದ ಗೀತೆ ೧ ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ ಇವಳಿಗಾಗಿ ಇವನೋ ಇವನಿಗಾಗಿ ಇವಳೋ ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ ಇವನಿಗಾಗಿ ಕ...

ಧಗೆಯ ಒಡಲು ಈ ಧಾರಿಣಿಯ ಮಡಿಲು ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು, ಬೇಯುತ್ತಿರುವ ಒಡಲ ಬೆಂಕಿಯ ಹಳದಿ ನೀರಾಗಿ ಉಗುಳುತ್ತಾಳೆ. ನನ್ನ ಮೇಲಿನ ಹಸಿರು ಬರೀ ತೋರಿಕೆ ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ. ಆದರೂ ಇವಳಿಗಂಟಿ ತಾವೂ ತಿರುಗುತ್ತ...

ಮತ್ತೆ ಮಳೆ ಹೊಯ್ಯುತಿದೆ ಆದರೆ ಎಲ್ಲಾ ನೆನಪಾಗುವುದಿಲ್ಲ. ಮತ್ತೆ ಮತ್ತೆ ಮಳೆ ಬರಬೇಕು ಅಂದರೇ ಈ ನೆಲ ಹಸಿರಾಗುವುದು ಹಸಿರಾದೊಡೆ ಚಿಗುರಿತೆಂದು ನಾವು ಭ್ರಮಿಸುವುದು, ಅದು ಜ್ವಾಲಾಮುಖಿಯ ಮೇಲಿನ ಹಸಿರೆಂದು ಈ ಇಳೆ ಅದೆಷ್ಟು ಸಲ ಗುಡುಗಿಲ್ಲ. ಗುಡುಗು...

ತಾಯಿಯಂತೆ ಭರಿಸುವೆ ನಾ ಈ ಇವರುಗಳ ನನ್ನನ್ನು ಹಂಚಿಕೊಂಡವರ ದೇಶದ ನೆಲವ ಇಂಚಿಂಚು ತಿಂದವರ ನನ್ನ ಮನಸ್ಸೆಂಬ ಸರೋವರದಲೀಸಾಡ ಬಂದವರ, ನನ್ನ ಒಂದೊಂದು ಮೂಲೆಯನೂ ತಮ್ಮದೆಂದು ಕೊಂಡವರ ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ ನನ್ನ ಸಹಿಷ್ಣುತೆಯ ಅನಿವಾರ್...

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ ನಮ್ಮಮ್ಮ ಮಹತಾಯಿ ಭೂಮಿತಾಯೇ ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ? ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ ಮೈಯ ಮಡಿಕೆ ಮಡಕೆಯ ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...