ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ, ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ಮಿಗೆ ಕಾದ ನೀರ ಹಬೆಯಿಂದ ಬಲು ಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ. ಸೋಲಿಪುದು ಗಾಳಿಯನ್ನು ಬಲು ವೇಗದಿಂದ; ಮೇಲೆ ಹೊಗೆಯುಗುಳುತಿಹುದೀ ಕೊಳವೆಯಿಂದ; ಕಾಲಕ್ಕೆ ಸರಿಯಾಗಿ...
ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು...