ಗಂಧವತಿ

#ಕವಿತೆ

ನಿಲ್ದಾಣ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಹಳಿಗಳ ಮೇಲೆ ಅಲೆದು ಅಲೆದು ತಿರುವಿನ ಪಯಣ ನನ್ನೊಳಗಿನ ಮಿತಿ ಮೀರಿ ಬೀಸುಗಾಳಿಗೆ ಉಸಿರಾಡಿದ ಕನಸುಗಳು ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು. ಯಾರೊಳಗೆ ಯಾರಿಲ್ಲ ಬರೀ ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ ತವಕಗಳು ಅರಳಿದ ಹೂವಿನಿಂದ ಒಮ್ಮೆಲೇ ಘಮ್ಮೆಂದು ಜೀವಧಾತು ಮಿತಿ ಮೀರಿದ ಆಶೆಗಳು ಕೇಳಿದವು ಕಾರಣವ. ಅಂತಃಪುರದ ಹೊರಗೆ ಅಂತರಂಗದ ಒಳಗೆ ಬಯಲು ತಪಿಸಿ […]

#ಕವಿತೆ

ಮಾಗಿ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಮುತ್ತಿನ ಹನಿಯ ಮಂಜು ಮರ್ಮರದ ಗಾಳಿ ಬೀಸಿ ಚಳಿಗಾಲದ ನೀಲ ಆಕಾಶ ಖಾಲಿ ಒಡಲೊಳಗಿನ ಏಕಾಂತದ ಮೌನಕೆ ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ. ಕವಿತೆ ಹಾಡುವದಿಲ್ಲ. ಆಕಾಶದ ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ ಹೊತ್ತ ಕಂಬಳಿಯಡಿ ಹೊರಳಾಡಿವೆ ಈ ನೆಲದ ಹಂಗು ಹಾಗೂ ನಿನ್ನ ನೆನಪು ಚಳಿ ಎಲ್ಲವನ್ನೂ ಮುಕ್ಕಿಬಿಟ್ಟಿದೆ ಹಲ್ಲು ಕಟಗರಿಸುತ್ತ. ಮಾತನಾಡುವರಿಲ್ಲ ಎದೆ […]

#ಕವಿತೆ

ಗಂಧವತಿ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಅವನ ಮಣ್ಣ ಪ್ರೀತಿ ಬಾಳಿಗೆ ಬಂಗಾರ ಸಿಂಗಾರ ದಿನಾಲೂ ಬೀಸುವ ಗಾಳಿಯ ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ. ಮೆದುವಾದ ಅವಳು, ಅವನು ಬಿತ್ತಿದ ಬೀಜಕೆ ಬಸಿರಾಗಿ, ಹೊಲದ ತುಂಬೆಲ್ಲಾ ಹಸಿರು ತೆನೆಕಾಳು; ಒಸರಿದ ಹಾಲು ಹೀರಿದ ಹಕ್ಕಿಗಳು ಹಾರಿವೆ ನೀಲ ಗಗನದ ತುಂಬ […]

#ಕವಿತೆ

ಬೀದಿ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಈ ಬೀದಿಯಲಿ ಎಷ್ಟೊಂದು ಗೂಡಂಗಡಿಗಳು ಹೊಟ್ಟೆ ಉಬ್ಬಿದ ಬಸುರಿಯಂತೆ ತುಂಬ ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ. ಜನರ ಪಾದದ ಗುರುತುಗಳು ಒಂದರ ಮೇಲೊಂದು ಹೊಂದಿಕೊಂಡಿವೆ ಗೆರೆಯಂತೆ ಕಾಣುವ ರಸ್ತೆಯಲಿ ಮಕ್ಕಳ ಕೈ ಹಿಡಿದು ನಡೆದಿದ್ದಾಳೆ ಬೇರೆ ಬೇರೆ ಬಣ್ಣಗಳು ಅಲ್ಲಲಿ ಚೆಲ್ಲಿವೆ. ಮಾರುವ ಹಸಿವಿಗೆ ಕೇಳುವ ಮಾತುಗಳು ತಕರಾರು ಎಬ್ಬಿಸಿವೆ […]

#ಕವಿತೆ

ನಾವು ಪ್ರೀತಿಸುವವರು

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ ನಲುಗಿದ ಅವರಿವರ ಹೂವಿನ ಆತ್ಮಗಳು. ನನ್ನ ಮಗಳಿಗೆ ಶಾಲೆಗೆ ರಜೆ ಘೋಷಿಸಿದ್ದಾರೆ ಯಾಕೆ ಅಮ್ಮ […]

#ಕವಿತೆ

ಸೂರ್ಯ ಸುಡಲಾರ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ ಒಂದು ಹಾದಿಯ ಮೇಲೆ ಕನಸಗುಳ ಮೆರವಣಿಗೆ ಹೋಗುತ್ತದೆ ಅದರಲ್ಲಿ ಎಲ್ಲರೂ ಪಾಲುದಾರರಾಗುವುದಿಲ್ಲ ಯಾಕೆಂದರೆ ಮೌನ ಚಿಗುರು ಭಾಷೆ ಅವರಿವರ ಭಾವಗಳು. […]

#ಕವಿತೆ

ಚಿತ್ತ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ ಇರದ ಚಿತ್ತ ಒಲವಿನ ಮುತ್ತುಗಳಾಗುವ ಸಮಯ ಹಣತೆಯ ಒಲವಿನಲಿ ತೇಲಿ ನೀಲ ಪ್ರಭೇ ಒಳ ಹೊರಗೂ ಬೆಳಕು ಸಂಭ್ರಮಿಸಿದ ಚಿತ್ತ […]

#ಕವಿತೆ

ಪ್ರೀತಿ ಎಂದೂ ಮುಗಿಯುವದಿಲ್ಲ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಅಲ್ಲಿ ಗುಹೆ ಅಂತಹ ಕತ್ತಲು ಒಂಟಿಯಾಗಿ ಕುಳಿತಿದ್ದಾನೆ ಅವನು ಏನೇನೋ ಯೋಚನೆಗಳು ಹೆದರಿಕೆಗಳು ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ ಆಗಾಗ ಬರುವ ಚಳಿ ಮಳೆಗೆ ಮುದುರಿ ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ. ಊರಿಗೆ ಹೋಗುವ ಗಾಡಿ ಕಾಯುತ್ತ ಕುಳಿತಿದ್ದಾನೆ ದಿಗಿಲು ಸುಮ್ಮನೆ ಕಣ್ಣು ಮುಚ್ಚಿ ಕುಳಿತು ಏರುವ ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ ಮಗಳು […]

#ಕವಿತೆ

ಹುಟ್ಟು

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಹಕ್ಕಿ ಫಡಫಡಿಸಿ ಹಾರಿ ನೀಲಿ ಆಕಾಶದ ಪರದೆ ತುಂಬ ಹುಚ್ಚೆದ್ದ ಪದಗಳು ಬೆಳಕಿನ ಕಿರಣಗಳೊಂದಿಗೆ ಜಾರಿ ಹಿಡಿದು ಬಿಂಬಿಸಿದ ಹುಲ್ಲುಗರಿ ತುಂಬ ಇಬ್ಬನಿ ಕವಿತೆಗಳ ಸಾಲು. ಮೂಡಿದ ಹರುಷ ವೃತಸ್ನಾನ ಮುಗಿಸಿ ಎಳೆ ರಂಗೋಲಿ ಎಳೆದ ಬೆರಳುಗಳು ನಾದಿ ಹದ ಮಾಡಿದ ರೊಟ್ಟಿಗಳು ಭೂಮಿ ಗೋಲ ತಿರುಗಿ ಹಬ್ಬದ ಬಾಳೆ ತುಂಬ ಭಕ್ಷ್ಯಗಳ ಸಾಲು. ಉತ್ತಿ […]

#ಕವಿತೆ

ಈ ರಾತ್ರಿ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಎಲೆಗಳು ಉದುರಿ ಅಂಗಳದ ತುಂಬೆಲ್ಲಾ ಹರಡಿ ಹಾಸಿ ಮಳೆ ನೆನೆದ ರಾತ್ರಿ ಎದೆಯ ನದಿಯ ತುಂಬ ನೀರು ಅಲೆಗಳು ಮರಿಹಕ್ಕಿಗಳಂತೆ ಮುದುರಿದ ನೆನಪುಗಳು ಆಕಾಶದಲ್ಲಿ ಕಳಚಿಬಿದ್ದ ತಾರೆಗಳು ಕವಳದ ಎಚ್ಚರದ ತುಂಬ ಕನಸುಗಳು ಅಚ್ಚ ಅಳಿಯದೇ ಉಳಿದುಹೋದ ಗಾಯದ ಕಲೆಯ ಕೆರೆತ ಮೆಲುಕುಹಾಕಿದರೆ ಬಹಳ ಪ್ರಳಯ ಚಳಿಗೆ ಥರಗುಟ್ಟಿದ ಮನಸ್ಸು ಅಂಗಳದಲಿ ತೇಲಿ ಜೀಕಿದ ಉಯ್ಯಾಲೆ […]