
ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್...
ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ...
ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ...
“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ...
ಇಡೀ ಊರು ಮಳೆ ನೀರಿನಲ್ಲಿ ಅದ್ದಿ ತೆಗೆದಂತಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಮನೆಯ ಗೂಡುಗಳಲ್ಲಿ ಅವಿತಿದ್ದ ಜನ ಹಕ್ಕಿ ಮರಿಗಳಂತೆ ಕುತ್ತಿಗೆ ಯನ್ನು ಬಾಗಿಲಿಂದ ಚಾಚಿ ಮಳೆಯ ಆರ್ಭಟವನ್ನು ನೋಡುತ್ತಿದ್ದರು. ಬರ ಎಂಬ ಶಬ್ದವನ್...
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ ಚಳಿಯಲ್ಲೂ ಹಿತ ಎನಿಸಿತು. ಅಪಘಾನಿಸ್ತಾನದಲ್ಲಿ ನಡೆದ...
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ ಬಂದೆ. ಸೂರ್ಯ ಮರೆಯಾಗುತ್ತಿದ್ದ. ಕ್ಷಣಕ್ಷಣವೂ...
























