ಹೊಯಿಸಳ

ನುಡಿ ನುಡಿಯನಾರಿಸುತ ಒಡಲೊಳಗೆ ಕಿಚ್ಚಿಟ್ಟು ಗುಡಿಗಳನ್ನು ಕಟ್ಟುವೆನು-ನುಡಿಯ ಶಿಲ್ಪದಲೀಗ ಕಡುಯಶದ ಜಕಣನಿಗೆ ಒಡಲಬಾಂಧವನಾಗಿ -ಹಿಡಿಸುವೆನು ಸಿರಿಕೊಡೆಯನು!- ಹಿಡಿಸುವೆನು ಹೊಗಳಿಕೆಯ ಕೊಡೆಯ ಜಯಚಾಮರವ ನಡಿವೆ ಶಿವಜೋತಿಯಲಿ, ನುಡಿವರಾರಿದುರಲ್ಲಿ ಬಿಡು! ಸಳನ, ಹೊಯ್ಸಳನ, ಪೊಡವಿಪನ, ಗೈದಂಧ -ಕಿಡಿಯಿರಲು...

ಯಾತ್ರೆ

ಕಾವಡಿ ತಕ್ಕೊಂಡು ಕಾಶಿಯನು ಸಾರಿರಲು ಗಂಗೆಯಲಿ ಕೆಸರಿತ್ತು ಹಾದಿಯಲಿ ಧೂಳಿತ್ತು ವಿಶ್ವನಾಥನಿಗೆ ಮೈಲಿಗೆಯಾಗಿ ಅವನಾಗಿದ್ದ ಕಲ್ಲು! ಪಾಪಿಗಳ ಬೀಡಾರವಾಗಿತ್ತು ವಾರಣಾಸಿ ಸಾರನಾಥವು ಆಗಿತ್ತು ಅಸ್ತಿರಾಶಿ! ದ್ವಾರಕದಿ ನೋಡಿದೆನು ಗೋಪಾಲ ನಿರಲಿಲ್ಲ! ಕೇದಾರದಲ್ಲಿದ್ದೆ ಘನಹಿಮವದಾಗಿತ್ತು ಪ್ರಕೃತಿ...

ಜಾಲಗಿರಿ ಓಓಓ ಜಾಲಗಿರಿ

ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ! ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ -ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ- ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ- ಚಿಗುರ ಉಡಿಗೆ!...

ರಸಿಕ

ಶರದ ಚಂದ್ರನ ವಿರಹ ಗಾನಕೆ ಸುರಿಸಿ ಹಿಮಜಲವೆಂಬ ಕಂಬನಿ -ಚಿರ ಕಳಂಕಿಯ ಭಾವವರಿವಾ ಶಿಲೆಯೆ- ಭುವಿಯಲಿ ರಸಿಕನು- ಅಣುವು ಕಣಗಳ ಚಿತ್ರ ಕೂಟದ! ಕಣಕೆ ಕಣಗಳ ನೂತ ನಾದದ -ಬೆಣಚು! ಕರೆಯಲು ಪೋಗಿ ಮುತ್ತುವ...

ಹೊಲೆಯ

ಶುಚಿಯು ನಗುತಲೆ ಹಿಂದೆ ಬರ್‍ಪಳು ಉಚಿತ ಮಾರ್‍ಗವು ತನಗಿದೆನುತಲೆ ಸಚಿವ! ಹೊಲೆಯನು ಹಿರಿಯ ಪೊರೆವನು ಹೊರಟು ನಿಂದೆಡೆಗೆ. ಸಚಿವ ಬಾ ಧರೆಯೆಲ್ಲವಳೆಯುವ....... ಶುಚಿಯ ಜಾನ್ಹವಿ ಹರಿದು ಶ್ರೀ ಹರಿ ಗುಚಿತದಾಸನವಾಗಲೀಧರೆ ಪರೆಯ ಬಾ ಧೊರೆಯೆ!...

ಕನಸು

ಪಿಡಿಗೆ ಅಡವೆನ್ನುವೊಲು! ನಿಡುಗತ್ತಲಡಗಿರಲು ಸುಡುವ ಮನದವಮಾನದಲ್ಲಿ ಬೆಂದು ಬೆಂದು! ಕಡುದುಗುಡ ಭಾರವನು ಹೂರುತಿರುವಳಾರೊ............ ಅಮಮ! ಮಲಗಿರಲೆಲ್ಲ ಮೈಮರೆದು ಮರೆದು!- ದೂರದಾತಾರೆಗಳು ತೀರದಾದುಗುಡಕ್ಕೆ ತುಂಬಿ ಕಂಗಳ ನಿಂದು ನಿಡುಸುಯ್ದು ನೋಡಿ- ಅಂಬ! ನೀನಾರೌವ್ವ ದುಗುಡವೇನೆನಲು -ಅಮಮ!...

ಹುಳಿ ಹಣ್ಣು

ಕೊಂಬೆ ರೆಂಬೆಯಲ್ಲಿ ಹಣ್ಣು ನೇತುಬಿದ್ದರೆ ತುಂಬ ಹಸಿದ ನರಿಯು ಬಂದು ನೆಗೆದು ನೋಡಿತು. ಚಿಗಿದು ನೆಗೆದು ನೋಡೆ ನರಿಗೆ ನಿಲುಕದಾಯಿತು. "ತೆಗೆ, ಅದೆಲ್ಲ ಹುಳಿ!" ಎಂದು ನರಿಯು ಹೊರಟಿತು. ನೇರಿಳೆಲ್ಲ ಹುಳಿಯೆ ಆಯ್ತು ಸಾಗದಿದ್ದ...

ನರ-ವಾನರ

ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ.......... ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು! ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು, ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು; ಸಂಶಯ...

ನಾವಿಕರು

|| ನಾವಿಕರಾವಿಹವೆವು ಜೀವಾರ್ಣವದಲ್ಲಿ ತೇಲುತ್ತಿಹೆವು || ನಾವು ಜನುಮದ ನಾವೆ ಯೇರ್‍ದೆವು ಸಾವು ನೋವನು ದೂರಲಿರುವೆವು ಜೀವಕಕ್ಷರ ಭಾವ ಹೊಳೆಯಲಿ -ಜಾವ ಜಾವಕೆ ನಾಡನೆನಹಲಿ- ಅಲ್ಲಿತೆರೆ ಕೊರೆ ಕಲ್ಲು ಸುಳಿಯಿವೆ! ಇಲ್ಲಿ ಹೂಡಿರಿ! ದೋಣಿಯೆನ್ನುತ...

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ. ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ. ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ! ಗಂಧವಿಲ್ಲದ...
cheap jordans|wholesale air max|wholesale jordans|wholesale jewelry|wholesale jerseys