Home / ಕವನ / ಅನುವಾದ / ಪ್ರೇಮ

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ.
ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ.
ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ
ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ!

ಗಂಧವಿಲ್ಲದ ಹೂವಿನಂತೆಯೆ ಚಂದ್ರ ಚಂದ್ರಿಕಾಹೀನ!
ಹಾಗೇ ನೀರಸ ಮಾನವ ಜೀವನವಿದ್ದರೆ ಪ್ರೇಮ ವಿಹೀನ
ಪ್ರೇಮ ಸ್ವರ್ಗವು! ಸ್ವರ್ಗ ಪ್ರೇಮವು! ಪ್ರೇಮ ಅಶಂಕ ಅಶೋಕ.
ಈಶ್ವರಪ್ರತಿಬಿಂಬ ಪ್ರೇಮವು! ಪ್ರೇಮ ಹೃದಯದಾಲೋಕ.

ಜಗದಲಿ ಬಂದರೆ ಪೀಡೆ ಸರ್ವವೂ ಅಪ್ಪುದು ಹೃದಯ ಅಧೀರ!
ಆದರೆ ಸಿಹಿಸಿಹಿ ಸೊಗಸುವುದೈ ಎದೆಯಲ್ಲಿ ಪ್ರೇಮದಾ ಪೀಡಾ.
ವ್ಯಾಕುಲವೆನಿಸದು ಪ್ರೇಮ ಪೀಡೆಯಿಂ ಯಾರದದೆಂದೂ ಪ್ರಾಣ
ಭಾಗ್ಯಹೀನ ನವ ನಿಷ್ಟುರನೈ ನಿಜ ಎದೆಯವನದು ಪಾಷಾಣ.

ಯಾರ ಮೇಲೆ ದಯಾದೃಷ್ಟಿ ಬೀರ್‍ವನೋ ಮಂಗಳ ಮಯ ಭಗವಾನ!
ಪೂರ್ಣ ಪ್ರೇಮ ಪೀಡೆಯಲಿ ಹಿಂಡುವನವನು ಆತನ ಪ್ರಾಣ!
ಯಾರಿಗೆ ಅನುಭವವಾಗಿದೆ ಪ್ರೇಮದ ಪೀಡೆಯ ಬಹು ಆನಂದ
ಆತನಿಗಿಂತ ದೊಡ್ಡವನಾರು ಸುಖಿ! ಇಹದಲಿ ಸ್ವಚ್ಛಂದ.

ಪ್ರೇಮೋನ್ಮತ್ತ ಹೃದಯದಿ ಇರದೈ! ಹೀನ ವಿರೋಧ ಕ್ರೋಧ!
ದುರ್ಗುಣಕಾಗದು ಪ್ರೇಮದ ಪಥದಲಿ ಮಾಡುವುದು ಅವರೋಧ!
ಪ್ರೇಮ ವೇದನಾಮುಗ್ಧ ಜನ (ಇಹರೈ) ಸುಖನಿದ್ರಾಮಯಮತ್ತ
ಪ್ರೇಮದ ಬೆಳಕನು ಕಣ್ಣಲ್ಲಿ ತುಂಬಿ ನೋಳ್ಪರು ಜಗವ ಸಮಸ್ತ!

ಹೂವಿನ ಮಂಜರಿ ಪಲ್ಲವದಲ್ಲಿ ಪ್ರಿಯತಮ ರೂಪ ವಿಲೋಕೀ!
ತುಂಬಿ ಹರಿವುದೈ ಮಹಾಮೋದದಿಂ ಪ್ರೇಮಿಯ ಎದೆತುಳಿಕೀ!
ನೋಡಿ ಮೊಗ್ಗನು ಮಾಡುವ ನಾತನು ಉಸ್ಮತ್ತ ಪ್ರಲಾಪ
ಎಷ್ಟರ ತನಕ ಅಡಗುವೆ ನೀನೀ ದಳಗಳ ನಡುವೆ ಗೋಪ!

ಪ್ರೇಮ ತುಂಬಿಹ ಅರ್ಧ ತೆರೆದಿಹ ಕಣ್ಣಲಿ ಶಶಿಯ ಸಹಾಸ
ಪ್ರೇಮಿಯು ಕಂಡು ಭ್ರಮಿಸುವನಾಗ ಪ್ರಿಯತಮ ಹಾಸ ವಿಕಾಸ.
ಸರ್ವವು ಆತಗೆ ಪ್ರೇಮದ ಮಾಯೆಯು ಸಚರಾಚರ ಸಂಸಾರ
ಪ್ರೇಮ ಮಗ್ನನು ನಿತ್ಯ ನಾನು ಮಾಳ್ಪನು ಪ್ರೇಮೋದ್ಯಾನ ವಿಹಾರ!

ಪ್ರೇಮವೇದನಾ ವ್ಯಥಿತ ಹೃದಯದಿಂ ಮಧಿತ ಪ್ರಮೋದ್ಗಾರ
ಉಕ್ಕಿ ಭೂಮಿಯ ತುಂಬಿಬಿಡುವುದೈ! ನವಜೀವನ ಉತ್ಸಾಹ!
ಕರುಣಾಭರದೀ ಪ್ರೇಮ ಕಂಬನಿ ಸುರಿವುದು ಸುಧೆಯ ಸಮಾನ
ನೆನೆಸುತ ದಯೆಯ ಬೇರನು ಕೊಡುವುದು ಜಗಕಾಶ್ರಯದಾನ!

ಜನಜನದಲ್ಲಿ ಪ್ರೇಮೀಕಾಂಬನು ಪ್ರಿಯತಮನಾಕಾಂತಿ
ಅದರಿಂದಾತಗೆ ಲೋಕಸೇವೆಯೋಳ್ ದೊರಕುವದು ಅತಿಶಾಂತಿ.
ಪೀಡಿತನಾಪೀಡೇ-ಕ್ಷುದಿತನ ಹಸಿವೇ-ತೃಷಿತನ ದಾಹ-
ಕಳೆದು ನಿರಾಶ್ರಯ-ಆಶಾರಹಿತಗೆ ಕೊಡುವನು ಉತ್ಸಾಹಾ!

ಕೃಶಿತ ಜಾತಿಯ ಉನ್ನತಿಗೈಸಿ ನಿವಾರಿಸಿ ಕಂಟಕ ದೂರ
ಪ್ರೇಮೀ ಪರಮ ತೃಪ್ತನಪ್ಪನು ಆಹ್ಲಾದಿತ ಭರಪೂರ.
ದಯೆ! ಕರ್ತವ್ಯ! ಎಂಬುದಿಲ್ಲ-ಅಲ್ಲ! ಆತನದಾರಿಗು ದಾಸ!
ಆಶಿಪನಾತನು ಸದಾ ನೋಡಲು ಪ್ರಿಯತಮ ರೂಪ ವಿಕಾಸ.
ರೂಪವೆಲ್ಲಿದೆ? ಆರ್ತಮುಖದಲಿ- ಪ್ರಕೃತಹರ್ಷದ ಹಾಸ
ಆಗುವುದೆಂದು! ಉದಿತವಾಗಲೇ ಪ್ರಿಯತಮ ರೂಪವಿಕಾಸ

[ಶ್ರೀ ಕವಿವರ ರಾಮನರೇಶಜೀ ತ್ರಿಪಾಠಿಯವರ ಹಿಂದೀ ‘ಮಿಲನ’ ದಿಂದ].
*****
ಅನುವಾದ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...