ನಾವಿಕರು

|| ನಾವಿಕರಾವಿಹವೆವು ಜೀವಾರ್ಣವದಲ್ಲಿ ತೇಲುತ್ತಿಹೆವು ||

ನಾವು ಜನುಮದ ನಾವೆ ಯೇರ್‍ದೆವು
ಸಾವು ನೋವನು ದೂರಲಿರುವೆವು
ಜೀವಕಕ್ಷರ ಭಾವ ಹೊಳೆಯಲಿ
-ಜಾವ ಜಾವಕೆ ನಾಡನೆನಹಲಿ-

ಅಲ್ಲಿತೆರೆ ಕೊರೆ ಕಲ್ಲು ಸುಳಿಯಿವೆ!
ಇಲ್ಲಿ ಹೂಡಿರಿ! ದೋಣಿಯೆನ್ನುತ
ಎಲ್ಲಸಾಗರ ನಾಭಿಯಲ್ಲಿರೆ!
-ಚಲ್ಪ ಬುದ್ದನ ಗರುಡದೀಪವು-

ನುಡಿದು ನಡೆಯುತ ತೇದು ತೊಳೆಯುತ
ಗಡಿಯ ಬೆಳಗುತ ನಿತ್ಯ ಜೀವನ-
ಉಡಿಗೆ ಯುಡಿಸುತ ತಿನಿಸಿನಲಿವೆಡೆ
-ಒಡನೆ ಯಾಡಲಿ ಗಾಂಧಿರೂಹದು –

ನೋಡಿನಲಿಯಲು-ಹೂಡಿದಣಿಯಲು
ಕೂಡೆಕರೆಯಲು-ಜೋಡಿಗತಿಥಿಯ!
ಕಾಡಿರವಿಠಾ ಕೂರಜಿಹ್ವೆಯು
-ಹಾಡಕಲಿಸಲಿ ನಾಡನೆನಹಿನ-

ನಲವುನೋವಿನ ಉಬ್ಬರಿಳಿತವ
ಗೆಲಿದು ತೇಲಲು ಜೀವಜಲಧಿಯ
ಲಿಳಿದು ಹೊರಟೆವು! ನಾಡನೆನಹಿನೊ
-ಳಳಿವುದುಳಿವುದ ಬಲ್ಲನಾತನು- ನಾವಿಕರಾನಿಹೆವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೬
Next post ನವಿಲುಗರಿ – ೯

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…