ಬಹಳ ಕಂಡಿದ್ದೇನೆ

ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ...

ಒರೆಸಿಬಿಡು ಬೇಕಾದರೆ

ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್ಲ...

ಬಲವಂತ

ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ! ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ! ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು ನಿನ್ನಿಂದ ಲಪಟಾಯಿಸುವ ಕನಸು ಕಂಡಿದ್ದೆ...
ತಲ್ಪಾ

ತಲ್ಪಾ

ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳುವನ್ನು...

ಹಾಗೆ ಆಗಬಹುದಿತ್ತು ಸಮುದ್ರವೇ

ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು,...

ಗೊತ್ತಿಲ್ಲ

ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ. ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ, ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ ಮರೆಯಾದ ಎಡೆಗೆ. ಅಪರಿಚಿತ...

ಪ್ರಾಚೀನವೇ

ಎಲೆ ಪ್ರಾಚೀನವೇ, ನನ್ನ ಮನತುಂಬುವಂತೆ ನಿನ್ನ ನಿನಾದ ಹೀರಿದ್ದೇನೆ. ಮೇಲೆ, ಮತ್ತೂ ಮೇಲಕ್ಕೆದ್ದು ಕೆಳಗೆ ಬೀಳುತ್ತ, ಮತ್ತೆ ಹಿಂದಕ್ಕೆ ಹೊರಳುವ ಹಸಿರು ನಾಲಗೆಯ ಮೊಳಗು ಕೇಳಿದ್ದೇನೆ ಸಹಸ್ರ ಜಿಹ್ವ. ದೂರ ವಸಂತದ ನನ್ನ ಮನೆ...

ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ...

ಕುರುಡ

ಅಲ್ಲಿ, ಮುರುಕು ಗೋಡೆಯ ಪಕ್ಕದಲ್ಲಿ ನಿಂತ ಕುರುಡ, ಹೆಸರಿಲ್ಲದ ಸಾಮ್ರಾಜ್ಯದ ಗಡಿಕಲ್ಲಿನಂಥ ಮುದುಕ, ಗ್ರಹಗಳ ಗಡಿಯಾರದ ಮುಳ್ಳು ತೋರಿಸುವ ಗೊತಿಲ್ಲದ ಅಂಕಿ, ಅವನನ್ನು ಸುತ್ತಿ, ಬಳಸಿ, ಅಡ್ಡಹಾಯ್ದು ಹೋಗುವ ನಕ್ಷತ್ರ ಪಥಗಳ ನಿಶ್ಯಬ್ದ ಕೇಂದ್ರ....

ಬುದ್ಧ ವೈಭವ

ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ, ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ. ನಿನ್ನ ಹೊಣೆ ಯಾರೂ ಹೊರದ,...
cheap jordans|wholesale air max|wholesale jordans|wholesale jewelry|wholesale jerseys