Home / Ananthanarayana S

Browsing Tag: Ananthanarayana S

ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ. ಕ್ರಾಂತಿರಸಋಷಿ ಶೆಲ್ಲಿ!  ಆದರ್ಶವೊಂದೊಲಿದು ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ. ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು- ಬಗೆಬಗೆಯ ಚಿಂತೆಗಳ, ನ...

ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು ಕೂಡಿ ಕಲಿತೆವು, ಒಡನೆ ಕುಣಿದಾಡುತ ಕಂಡ ಕನಸುಗಳೇನು! ಆಡಿದಾಟಗಳೇನು! ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ! ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ ಜನರ ಜಂಗುಳಿ ನೆರೆದು ಚಣಗಳೆರಡು ಉರುಳೆ ಹಾದಿಯ ಹಿಡಿದು...

ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ, ಸಂತ...

ದೂರದೂರ ದಿಕ್ದಿಗಂತದಿಂದ ದೂರಕೆ ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ! ಕಣ್ಣ ಮುಚ್ಚಿ ಹೃದಯ ಮುಚ್ಚಿ ಒಮ್ಮೆ ಅಂದು ಕಾತರಿಸಲು ಮಿಂಚಿನಂತೆ ತೂರಿ ನೀನು ಜೀವ ತೋ...

ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯು...

(ಹುಡುಗಿಯರ ನಗು ಕೇಳಿ ಬರೆದುದು) ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ ಬೇರೊಂದು ವಿಶ್ವವನೆ ಸೇರಿದಂತಾಗುವುದು ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ ತುಂಬಿ ...

ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ! ತುಟಿ ಬಹಳ ಕೆಂಪಿಲ್ಲ!  ಕಂಡೊಡನೆಯೇ ಸೆಳೆವ ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ! ಮಾತುಗಳಲೇನಂಥ ಮಾಧುರ್ಯವೇನಿಲ್ಲ ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ! ಕವಿಗಳ...

ಜಗವೊಂದು ಬಂದರೀ ಜೀವಸಾಗರದಲ್ಲಿ ಹಡಗುಗಳು ಐತಂದು ಕೂಡುವುವು ದಿನವು, ತೆರತೆರದ ಜನರಿಹರು-ವಿಧವಿಧದ ಭಾಷೆಗಳು ಚಣಕಾಲ ಸಂಧಿಸುತ ಮೆರೆವುವಲ್ಲಿ! ನಾಲ್ಕು ದಿನಗಳ ಜೀವ, ಒಂದಿರುಳ ಪ್ರೇಮ! ಮುಂದೆಲ್ಲಿಗೋ ಪಯಣ, ಎಂದೊ ಮಿಲನ? ಪಯಣದಲಿ ಸಾಗರದಿ ಕಡುತೆರೆದ ...

ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು “ಇದು ಯಾರೋ?” ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನ್ನೇ ಬಣ್ಣಿಸಲು ಹೊರಟಿಹೆನು – ನಿನ್ನ ನೆನವಿನಲೆನ್ನ ಮನದ ಮಾತುಗ...

1...678910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...