
ನಾವೇನೆ ಮಾಡಿದೊಡದು ನಿರ್ಜೀವವಿರುತಿಲ್ ಜೀವ ಜಗವನಂತಿಮದಿ ಕೆಡಿಸುತಿರಲ್ ಸಾವಯವವೆನದಿನ್ನು ಅನ್ಯ ದಾರಿಗಳಿಲ್ಲ ಸಾವಯವವೆಂದೊಡದು ಕೊಂಡು ತಿನ್ನುವುದಲ್ಲ ಅವಯವಗಳೆಮ್ಮದಮಗಾಗಿ ದುಡಿವ ಬಲ – ವಿಜ್ಞಾನೇಶ್ವರಾ *****...
ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿ...
ಬೇಕಿಲ್ಲವೆಮ್ಮಾರೈಕೆ ಪೂರೈಕೆಯೆಮ್ಮನ್ನದಾ ಮರಕೆ ಬೇರೆಲ್ಲದಕು ಮೂಲ ಬಲವದುವೆ ಸಾಕದಕೆ ಬೇಕೆಲ್ಲ ಮರಕದರ ತರಗೆಲೆಯ ಹೊದಿಕೆ ಭಾರಿ ಕೃಷಿ ಎನಲು ಬೊಕ್ಕತಲೆ ಬಂದೀತು ಜೋಕೆ ಬಾಳ ಕೃಷಿಗೊಂದು ಪೇಟೆ ಶಾಲೆಯದ್ಯಾಕೆ? – ವಿಜ್ಞಾನೇಶ್ವರಾ *****...
ಉತ್ತು, ಕಿತ್ತು ಬತ್ತಿಸಿದ ಮೇಲಾ ನೆಲ ಬರಿ ಮಣ್ಣೆಂದು ಗತ್ತಿನೊಳು ಗೊಬ್ಬರ ಕೊಟ್ಟು ತುತ್ತಿನ ಬಿತ್ತಿಟ್ಟೊಡದ ನೊತ್ತಿ ಬೆಳೆವಾ ನೂರೊಂದು ಕಳೆಗಳನು ನೋಡಾ ಗತ್ತಿನ ಕತ್ತ ನಿಳುಹಿದೊಡಲ್ಲಿ ಕಾಂಬುದು ತುತ್ತಿಗಪ್ಪುದು, ಸುಸ್ತಿಗಪ್ಪುದು ಆ ಕಳೆಯೊಳಗೆ &...
ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವ...
ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ – ವಿಜ್ಞಾನೇಶ್ವರಾ *****...
ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು ನಡು ಬಳುಕಿ ಪಡೆದರದು ಸಾವಯವ ಪಾಕ – ವಿಜ್ಞಾನೇಶ್ವರಾ *...
ಅಂತು ಪೇಳುವೊಡೆಲ್ಲ ಪೇಟೆಗೆ ಬಂದು ಕುಂತೋದಿದನುಭವಕೆ ಮನ್ನಣೆ ತಂದು ಒಂದುದ್ಯೋಗ ಭಿಕ್ಷೆಯ ಪಡೆದವರಿಂದು ಸಂಭ್ರಮಿಸುತಿಹುದನು ಕಂಡ ರೈತನಿನ್ನೆಂತು ಭಂಗ ಪಟ್ಟುಂಬನ್ನದೊಳು ಸುಖವ ಕಾಂಬುದೋ? – ವಿಜ್ಞಾನೇಶ್ವರಾ *****...
ತಲೆಮಾರಿನಂತರವ ತಾಳದೆಲೆ ತಾನು ತಾನೆನುತ ತಲೆಗೊಂದು ಸೂರೆಳೆವ ಮನುಜ ತಾ ಸಹಬಾಳ್ವೆ ತೊರೆದೊಡಂ ಕೇಡಿಲ್ಲವಾದೊಡೆಲ್ಲ ಜೊತೆಯಾಗಿರ್‍ದೊಡದು ತಮ್ಮ ಹಿತವೆನುವ ಸಸ್ಯಗಳನೀ ಪರಿ ಬೇರ್ಪಡಿಸು ತಲದನು ತಬ್ಬಲಿ ಮಾಡಿರಲೆಲ್ಲ ಕೃಷಿ ಕೆಟ್ಟಿಹುದು – ವಿಜ್...
ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ – ವಿಜ್ಞಾನೇಶ್ವರಾ *****...













