ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ
ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ
ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ
ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು
ನಡು ಬಳುಕಿ ಪಡೆದರದು ಸಾವಯವ ಪಾಕ – ವಿಜ್ಞಾನೇಶ್ವರಾ
*****
ಮೂಂಡು=ಆಧಾರ

ಕನ್ನಡ ನಲ್ಬರಹ ತಾಣ
ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ
ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ
ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ
ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು
ನಡು ಬಳುಕಿ ಪಡೆದರದು ಸಾವಯವ ಪಾಕ – ವಿಜ್ಞಾನೇಶ್ವರಾ
*****
ಮೂಂಡು=ಆಧಾರ