
ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ ಇದ್ದುದು ಒಂದೇ ಒಂದು ಅಂಗಿ. ಗಿರಾಕಿಗಳ ಮನೆಗೆ ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ ಇದೇ ಅಂಗಿ. ಮೂಸಿನದಿಯ ಕೊಚ್ಚೆಯಲ್ಲಿ ಅದ್ದಿ ತೆಗೆದಂಥ ಬಣ್ಣ, ಇದರಿಂದ ಬೇಸರಗ...
ಇಲ್ಲಿ ಗುಲ್ಮೊಹರ್ ಹೂವುಗಳು ದಟ್ಟವಾಗಿ ಬೀಳುತ್ತಿವೆ. ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ. ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ ಏನೋ ಹೇಳುವ ಹಾಗಿವೆ. ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ ಸುಮ್ಮಸುಮ್ಮನೆ ನಗುತ್ತಿ...
ನಿಮಗೀಗ ಬುಲ್‌ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೆ? ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ ಆರಿಸಿದಿರಿ. ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ. ತುಸು ತಾಳಿರಿ. ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ. ಎಡಗಡೆಯಿಂದ ಸಾಲುಗಟ್...
ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು. ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್...
೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾ...
ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ ...
ಎಲ್ಲರಿಗೂ ಒಂದೊಂದು ಚಾಳಿ ಇರುವುದಿಲ್ಲವೆ, ಹೇಳಿ. ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ ಅಮವಾಸ್ಯೆಯ ರಾತ್ರಿಗಳಲ್ಲಿ ಸುಮ್ಮನೇ ಅವನ ಮೌನಮುರಿಯುವ ಕಥಾವಳಿ. ಪ್ರಶ್ನೆಗಳನ್ನು ಹಾಕುತ್ತಲೇ ಸ...
ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾ...














